ರಾಜ್ಯ ಸುದ್ದಿಗಳು
ದೇವನಹಳ್ಳಿ:
ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚು ಬಡತನದಿಂದ ಕೂಡಿರುವ ಜನತೆಯನ್ನು ಕಾಣಬಹುದಾಗಿದೆ ಅದರಂತೆ ಪ್ರತಿಯೊಬ್ಬರು ಒಂದೊಂದು ರೀತಿ ದುಡಿಮೆಯಲ್ಲಿ ತನ್ನನ್ನು ತೊಡಗಿಸಿಕೊಂಡ ಜೀವನ ಸಾಗಿಸುತ್ತಿರುತ್ತಾರೆ ಅಂತಹವರಿಗೆ ಯಾವುದೇ ರೀತಿಯ ಸಮಸ್ಯೆಗಳು ಬಂದರೆ ಅದನ್ನು ನಾವು ತಿಳಿದುಕೊಂಡು ಬಗೆಹರಿಸಲು ಸದಾ ಸಿದ್ದರಾಗಿರುತ್ತೇವೆಎಂದು ಬಿಜೆಪಿ ಜಿಲ್ಲಾ ಅಸಂಘಟಿತ ಕಾರ್ಮಿಕ ಪ್ರಕೋಷ್ಠದ ಸಂಚಾಲಕರಾದ ಎಲ್.ಎನ್ ಅಂಬರೀಶ್ ಗೌಡ ತಿಳಿಸಿದರು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ಜಿಲ್ಲಾ ಬಿಜೆಪಿಯ ಅಸಂಘಟಿತ ಕಾರ್ಮಿಕ ಪ್ರಕೋಷ್ಠದ ಪದಾಧಿಕಾರಿಗಳ ಆಯ್ಕೆಯ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಬಿಜೆಪಿ ಸರಕಾರವು ಎಲ್ಲಾ ತರಹದ ಅಭಿವೃದ್ಧಿ ಕಾರ್ಯಗಳನ್ನು ನಡೆಸಿಕೊಂಡು ಬರುತ್ತಿದೆ. ಇದರ ಆಡಳಿತವು ಒಂದು ಮಾದರಿ ಆಡಳಿತವಾಗಿದೆ, ಇನ್ನು ದೇಶಾದ್ಯಂತ ಕರೋನಾ ಎಂಬಾ ಮಾರಕ ವೈರಸ್ ಹರಡಿದ್ದು ಇದನ್ನು ಹೋಗಲಾಡಿಸಲು ನಮ್ಮ ಸರಕಾರ ಎಲ್ಲಾ ರೀತಿಯ ಕಾರ್ಯಗಳನ್ನು ಮಾಡಿ ಅದನ್ನು ಒಂದು ಮಟ್ಟದಲ್ಲಿ ಕಡಿವಾಣ ಹಾಕುವಲ್ಲಿ ಯಶಸ್ವಿಯಾಗಿದೆನೂತನವಾಗಿ ಆಯ್ಕೆಯಾದವರು ಪಕ್ಷದ ಎಲ್ಲಾ ಸಿದ್ದಾಂತ, ತತ್ವಗಳನ್ನು ಗಮನದಲ್ಲಿಟ್ಟುಕೊಂಡು ಅದರ ಕಾರ್ಯ ವೈರಿಗಳನ್ನು ನಡೆಸಿಕೊಂಡು ಹೊಗಬೇಕು ಯಾವುದೇ ಕಾರಣಕ್ಕು ಪಕ್ಷದ ತತ್ವ ಸಿದ್ಧಾಂತಗಳನ್ನು ಮೀರಬಾರದು, ಪಕ್ಷ ನಮಗೇನು ಮಾಡಿದೆ ಎನ್ನುವುದಕ್ಕಿಂತ ನಾವು ಪಕ್ಷಕ್ಕೆ ಏನೂ ಮಾಡಿದ್ದೇವೆ ಎಂಬುದು ಮುಖ್ಯವಾಗುತ್ತದೆ. ನಮಗೆ ಪಕ್ಷ ಕೊಟ್ಟ ಎಲ್ಲಾ ಜವಾಬ್ದಾರಿಯನ್ನು ಸರಿದೂಗಿಸಿಕೊಂಡು ಹೊಗುವುದು ಉತ್ತಮ ನಾವು ಮಾಡುವ ಕಾರ್ಯಗಳು ಜನರಿಗೆ ಮನ ಮುಟ್ಟುವಂತಿರಬೇಕು ಎಂದರು.ಇನ್ನು ನೂತನ ಪದಾಧಿಕಾರಿಗಳಾಗಿ ತಾಲ್ಲೂಕು ಅಸಂಘಟಿತ ಕಾರ್ಮಿಕ ಪ್ರಕೋಷ್ಠ ಸಂಚಾಲಕರಾಗಿ ಸುರೇಶಾಚಾರ್ ಮತ್ತು ಜಿಲ್ಲಾ ಅಸಂಘಟಿತ ಕಾರ್ಮಿಕ ಪ್ರಕೋಷ್ಠದ ಸದಸ್ಯರಾಗಿ ಆರ್. ವಿ ಮುನಿರಾಜು ಅವರನ್ನು ಆಯ್ಕೆ ಮಾಡಲಾಯಿತು.ಇದೇ ಸಂದರ್ಭದಲ್ಲಿ ರಾಜ್ಯ ಅಸಂಘಟಿತ ಕಾರ್ಮಿಕ ಪ್ರಕೋಷ್ಠ ಸದಸ್ಯ ವೆಂಕಟೇಶ್, ಜಿಲ್ಲಾ ಬಿಜೆಪಿ ರೈತ ಮೋರ್ಚ ಅಧ್ಯಕ್ಷ ಎಚ್.ಎಮ್ ರವಿಕುಮಾರ್, ಮಾಜಿ ಶಾಸಕ ಜಿ.ಚಂದ್ರಣ್ಣ, ಬಿಜೆಪಿ ತಾಲ್ಲೂಕು ಅಧ್ಯಕ್ಷ ಸುಂದರೇಶ್, ದೇಸು ನಾಗರಾಜ್, ಮುರಳಿ, ದೊರೆ ಭಗವಾನ್, ಮಹಿಳಾ ಘಟಕದ ಪುನಿತಾ ಹಾಗೂ ಬಿಜೆಪಿ ಮುಖಂಡರು ಭಾಗಿಯಾಗಿದ್ದರು.
Be the first to comment