ಕೊರೊನಾ ವಾರಿಯರ್ಸ ಸೇವೆ ಅನನ್ಯವಾದದು: ಎನ್.ಎಸ್.ಯು.ಐ. ಜಿಲ್ಲಾಧ್ಯಕ್ಷ ಸದ್ದಾಂ ಕುಂಟೋಜಿ

ವರದಿ: ಚೇತನ ಕೆಂದೂಳಿ, ಸುದ್ದಿ ಸಂಪಾದಕರು

ಜಿಲ್ಲಾ ಸುದ್ದಿಗಳು

 

CHETAN KENDULI

ಮುದ್ದೇಬಿಹಾಳ:

ದೇಶದಲ್ಲಿಯೇ ಸಂದಿಗ್ಧ ಪರಿಸ್ಥಿತಿಯಾಗಿರುವ ಕೊರೊನಾ 2ನೇ ಅಲೆಯಲ್ಲಿ ತಮ್ಮ ಕುಟುಂಬವನ್ನೂ ಲೆಕ್ಕಿಸದೇ ಸಾರ್ವಜನಿಕರ ಸೇವೆಯಲ್ಲಿ ತೊಡಗಿರುವ ಫ್ರೇಂಟಲೈನ್ ವಾರಿಯರ್ಸ ಸೇವೆ ಶ್ಲಾಘನೀಯವಾದದ್ದು. ಕೊರೊನಾ ಸೋಂಕಿಗೆ ಒಳಗಾದ ಜನರಿಗೆ ಕೇವಲ ಚಿಕಿತ್ಸೆ ಅಲ್ಲದೇ ಅವರಿಗೆ ಮನೋರಂಜನೆಯ ಕಾರ್ಯಕ್ರಮಗಳನ್ನು ನೀಡಿ ಅವರಿಗೆ ಹುರಿದುಂಬಿಸುತ್ತಿದ್ದಾರೆ. ಇವರ ಅವಶ್ಯಕವಿರುವ ಸಾಮಗ್ರಿಗಳನ್ನು ನೀಡುವುದು ತಮ್ಮ ಕರ್ತವ್ಯವಾಗಿದೆ ಎಂದು ಎನ್.ಎಸ್.ಯು.ಐ. ಜಿಲ್ಲಾಧ್ಯಕ್ಷ ಸದ್ದಾಂ ಕುಂಟೋಜಿ ಹೇಳಿದರು.

ಪಟ್ಟಣದ ತಾಲೂಕಾ ಆಸ್ಪತ್ರೆ, ಪುರಸಭೆ ಸಿಬ್ಬಂದಿಗಳಿಗೆ ಉಚಿತವಾಗಿ ಫೇಸಶೀಲ್ಡ್, ಮಾಸ್ಕ, ಸಾನಿಟೈಜರ್ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬರನಾಡು ಎಂದೇ ಖ್ಯಾತಿ ಪಡೆದ ವಿಜಯಪುರ ಜಿಲ್ಲೆಯ ಜನರು ಕೊರೊನಾ 2ನೇ ಅಲೆಗೆ  ಸಾಕಷ್ಟು ತತ್ತರಿಸಿದ್ದಾರೆ. ಇಂತಹ ಸ್ಥಿತಿಯಲ್ಲಿ ಮುದ್ದೇಬಿಹಾಳ ತಾಲೂಕಾ ಆಸ್ಪತ್ರೆಯ ವೈದ್ಯಾಧಿಕಾರಿ ಅನೀಲಕುಮಾರ ಶೀಗುಣಸಿ ಅವರು ತಮ್ಮ ತಂಡದೊಂದಿಗೆ ಕೊರೊನಾ ರೋಗಿಗಳಿಗೆ ಉತ್ತಮವಾದ ಚಿಕಿತ್ಸೆಯನ್ನು ನೀಡುವುದರ ಮೂಲಕ ರೋಗಿಗಳನ್ನು ಗುಣಮುಖರಾಗುವಂತೆ ಮಾಡಿದ್ದು ಇಂತಹ ವೈದ್ಯರು ಸಿಗುವುದು ಅಪರೂಪವಾಗಿದೆ ಎಂದು ಹೇಳಿದರು.

ತಾಲೂಕಾ ಯುವ ಕಾಂಗ್ರೇಸ್ ಅಧ್ಯಕ್ಷ ಮಹ್ಮದರಫೀಕ ಶೀರೋಳ, ತಮ್ಮ ಜೀವನ ಹಂಗು ತೊರೆದು ಸಾರ್ವಜನಿಕರ ರಕ್ಷಣೆಯಲ್ಲಿ ತೊಡಗಿರುವ ಫ್ರಂಟಲೈನ್ ವಾರಿಯರ್ಸಗಳಿಗೆ ಜನಸಾಮಾನ್ಯ ಎಷ್ಟೇ ಧನ್ಯವಾದಗಳನ್ನು ಹೇಳಿದರೂ ಕಡಿಮೆ. ಎಲ್ಲರಂತೆಯೇ ಫ್ರಂಟಲೈನ್ ವಾರಿಯರ್ಸಗಳೂ ತಮ್ಮ ವ್ಯಯಕ್ತಿಕ ಜೀವನದತ್ತ ಮುಖಮಾಡಿದ್ದರೆ ದೇಶದಲ್ಲಿ ಜನರ ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುತ್ತಿತ್ತು. ಇಂತಹ ಸೇವಕರು ಕೊರೊನಾ ವಿರುದ್ಧ ಜನ ರಕ್ಷಣೆ ನಿಂತಿದ್ದನ್ನು ಕಂಡು ನಾವೆಲ್ಲರೂ ಹೆಚ್ಚಿನ ಜಾಗೃತಿ ವಹಿಸಿದರೆ ಅವರಿಗೂ ಮೌಲ್ಯ ನೀಡಿದಂತಾಗುತ್ತದೆ ಎಂದು ಹೇಳಿದರು.

ಪುರಸಭೆ ಸದಸ್ಯ ರಿಯಾಜ ಢವಳಗಿ ಮಾತನಾಡಿದರು. ಇದೇ ವೆಳೇಯಲ್ಲಿ ತಾಲೂಕಾ ಆರೋಗ್ಯ ಇಲಾಖೆ ಸಿಬ್ಬಂದಿಗಳಿಗೆ ನೀಡಬೇಕಾದ ಐಸೋಲೇಷನ್ ಕಿಟ್, ಫೇಸಶೀಲ್ಡ್, ಮಸ್ಕಗಳನ್ನು ತಾಲೂಕಾ ವೈದ್ಯಾಧಿಕಾರಿ ಅನೀಲಕುಮಾರ ಶೀಗುಣಸಿ ಅವರಿಗೆ ಹಾಗೂ ಪುರಸಭೆ ಪೌರಕಾರ್ಮಿಕರಿಗೆ ನೀಡಬೇಕಾದ ಫೇಸಶೀಲ್ಡ್, ಮಾಸ್ಕ, ಸಾನಿಟೈಜರಗಳನ್ನು ಮುಖ್ಯಾಧಿಕಾರಿಗಳಿಗೆ ಹಸ್ಥಾಂತರಿಸಲಾಯಿತು.

 ಈ ಸಂದರ್ಭದಲ್ಲಿ ಸಮಾಜ ಸೇವಕ ರುದ್ರಗೌಡ ಅಂಗಡಿಗೇರಿ, ವಿಜಯಪುರ ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಯೂಸುಫ ನಾಯ್ಕೋಡಿ, ತಾಲೂಕಾ ಮಹಿಳಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಶೋಭಾ ಶೇಳಗಿ,  ನಗರದ ಘಟಕದ ಎನ್.ಎಸ್.ಯು.ಐ. ಅಧ್ಯಕ್ಷ ಅಬೂಬ್ಕರ ಹಡಗಲಿ, ಪುರಸಭೆ ಸದಸ್ಯ ಮಹಿಬೂಬ ಗೊಳಸಂಗಿ, ಹಣಮಂತರಾಯ್ ದೇವರಳ್ಳಿ, ಮಾಜಿ ಪುರಸಭೆ ಸದಸ್ಯ ಸಂತೋಷ ನಾಯ್ಕೋಡಿ, ನಿಸಾರ ಮಮದಾಪೂರ, ಶರಣು ಚಲವಾದಿ, ಬಾಫ ಢವಳಗಿ, ಯಾಸೀನ ಬಾಗವಾನ, ರಾಜು ಮುದ್ನಾಳ, ದಾವಲ್ ಗೊಳಸಂಗಿ, ಮೊಸೀನ ಘಾಟಿ, ಅಲ್ತಾಫ ಮಕಾನದಾರ, ದಿಕ್ಷೀತ್ ದೇಸಾಯಿ, ಮಾನಪ್ಪ ನಾಯಕ, ರಾಮಣ್ಣಾ ನಾಯಕಮಕ್ಕಳ, ಸುಹೇಬ ಪಟೇಲ, ಸರತಾಜ್ ಬಾಗೇವಾಡಿ, ಅಮೀನಸಾ ಮುಲ್ಲಾ, ಮಹಿಬೂಬ ಮೊಕಾಶಿ, ಸಂಗು ಚಲವಾದಿ ಇದ್ದರು.

 

Be the first to comment

Leave a Reply

Your email address will not be published.


*