ಶಿರಸಿ: ಜೂಜಾಟ ಆಡುತ್ತಿದ್ದ 7 ಮಂದಿ ಬಂಧನ 

ವರದಿ: ಕುಮಾರ ನಯ್ಕ

ಜಿಲ್ಲಾ ಸುದ್ದಿಗಳು

ಶಿರಸಿ:

CHETAN KENDULI

ಅಕ್ರಮವಾಗಿ ಅಂದರ್ ಬಾಹರ್ ಆಡುತ್ತಿದ್ದ ತಂಡದ ಮೇಲೆ ಡಿ.ಎಸ್.ಪಿ. ರವಿ ನಾಯ್ಕ ಹಾಗೂ ಸಿಬ್ಬಂದಿಗಳು ದಾಳಿ ನಡೆಸಿ 7 ಜನರನ್ನು ಬಂಧಿಸಿರುವ ಘಟನೆ ನಗರದ ಆರ್.ಟಿ.ಓ ಆಫೀಸ್ ಕಚೇರಿ ಹತ್ತಿರ ನಡೆದಿದ್ದು ಶಿರಸಿ ಮಾರುಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇಂದಿರಾ ನಗರದ ನೂರ ಅಹ್ಮದ್ ಮಹಮ್ಮದ್ ಹನೀಫ್ ಭಟ್ಕಳ (27), ಕಸ್ತೂರಾ ಬಾ ನಗರದ ಇದಾಯತ್ ತಸಲುಲ್ಲಾ ಖಾಜಿ (31), ಮೊಹಮ್ಮದ್ ಯಾಸೀನ್ ಹಬೀಭ್ ರೆಹಮಾನ ಭಟ್ಕಳ (24), ಇಂದಿರಾ ನಗರದ ಆಫ್ರೀದ್ ಮಹಮ್ಮದ್ ಹನೀಫ್ ಭಟ್ಕಳ (23), ಹೊನ್ನಾವರದ ಹುಸೇನ್ ಪಾರೂಕ್ ಮೀರಾಪುರ (37)ವರ್ಷ, ಇಂದಿರಾನಗರದ ಅಬ್ದುಲ್ ಖಾದರ ಪರೀದ ಹಸನ್ (30), ಹಾಗೂ ಕಸ್ತೂರಬಾ ನಗರದ ಮಹಮ್ಮದ್ ಇಮ್ರಾನ್ ಶೇಕ್ (32)ಎಂಬುವರೇ ಬಂಧಿತ ಆರೋಪಿಗಳಾಗಿದ್ದಾರೆ.

ಬಂಧಿತ ಆರೋಪಿಗಳಿಂದ 6410 ರೂಪಾಯಿ ನಗದು, 7 ಮೊಬೈಲ್ ಹಾಗೂ ಇನ್ನಿತರ ಪರಿಕರಗಳನ್ನು ವಶಪಡಿಸಿಕೊಳ್ಳಲಾಗಿದೆ.

ಈ ಯಶಸ್ವಿ ಕಾರ್ಯಾಚರಣೆಯಲ್ಲಿ ಡಿ.ವಾಯ್.ಎಸ್.ಪಿ. ರವಿ ಡಿ. ನಾಯ್ಕ ನೇತೃತ್ವದಲ್ಲಿ ಮಾರುಕಟ್ಟೆ ಪಿ.ಎಸ್.ಐ. ಭೀಮಾ ಶಂಕರ ದಾಳಿ ನಡೆಸಿದ್ದು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

Be the first to comment

Leave a Reply

Your email address will not be published.


*