ಜಿಲ್ಲಾ ಸುದ್ದಿಗಳು
ಕುಂದಾಪುರ
ಸುಣಾರಿಯ ಎಕ್ಸಲೆಂಟ್ ಪ್ರೌಢಶಾಲೆ ಮತ್ತು ಪಿ. ಯು ಕಾಲೇಜಿನಲ್ಲಿ ರಾಷ್ಟ್ರೀಯ ಗಣಿತ ದಿನಾಚರಣೆ ನಡೆಸಲಾಗಿದೆ. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಈ ನಾಡು ಕಂಡ ಶ್ರೇಷ್ಠ ಶಿಕ್ಷಣ ತಜ್ಞರಾದ ಸುಣ್ಣಾರಿಯಸುಜ್ಞಾನ ಎಜುಕೇಷನಲ್ ಟ್ರಸ್ಟ್‌ನ ಅಧ್ಯಕ್ಷರು ಹಾಗೂ ಸಂಸ್ಥೆಯಪ್ರಾಂಶುಪಾಲರು ಆದ ಡಾ. ರಮೇಶ್ ಶೆಟ್ಟಿಯವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿ ಒಬ್ಬೊಬ್ಬ ವಿಜ್ಞಾನಿ
ಅಡಗಿದ್ದಾನೆ. ಆದರೆ ಅವರ ಪ್ರತಿಭೆಯನ್ನು ಒರೆ ಹಚ್ಚುವ ಕೆಲಸ ಶಿಕ್ಷಕರು ಮತ್ತು ಶಿಕ್ಷಣ ಸಂಸ್ಥೆಯ ಜವಾಬ್ದಾರಿ ಎಂದು ಹೇಳಿದರು. ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಉಷಾ ಕಿರಣ್ ಶೆಟ್ಟಿ ಅವರು ಮಾತನಾಡಿ ಗಣಿತ ಎಂದರೆ ಕೇವಲಪಠ್ಯದ ವಿಷಯವು ಕಬ್ಬಿಣದ ಕಡಲೆ ಅಂತ ತಿಳಿಯಬಾರದು. ಅದು ನಮ್ಮ ದಿನಚರಿಯ ಒಂದು ಭಾಗ, ಈ ಬ್ರಹ್ಮಾಂಡದ ಪ್ರತಿಯೊಂದರಲ್ಲೂ ಗಣಿತಶಾಸ್ತ್ರದ ವಿಷಯ ಅಡಗಿದೆ ಎಂದು ಹೇಳಿದರು. ಈ ಕಾರ್ಯಕ್ರಮದಲ್ಲಿ ಗಣಿತ ಶಾಸ್ತ್ರದ ಉಪನ್ಯಾಸಕರಾದ ಆನಂದ, ರಾಮು .ಕೆ, ಸಹಶಿಕ್ಷಕಿಯರಾದ ರಕ್ಷಿತಾ,ರಶ್ಮಿತಾ ಶೆಟ್ಟಿ ಅವರು ಉಪಸ್ಥಿತರಿದ್ದರು. ಈ ಕಾರ್ಯಕ್ರಮವನ್ನು ವಿದ್ಯಾರ್ಥಿಗಳುನಿರೂಪಿಸಿ ವಂದಿಸಿದರು.
Be the first to comment