ರಾಜ್ಯ ಸುದ್ದಿಗಳು
ಮಸ್ಕಿ
ತಾಲ್ಲೂಕಿನ ಹಾಲಾಪೂರ ಗ್ರಾಮದಿಂದ ಹಾದು ಹೋಗಿರುವ ರಾಮದುರ್ಗಾ,ಮಾನ್ವಿ ರಾಜ್ಯ ಹೆದ್ದಾರಿ ಸ್ಥಿತಿ ತೀರಾ ಹದೆಗೆಟ್ಟಿದೆ, ಹಾಲಾಪೂರ ಮತ್ತು ಇನ್ನಿತರ ಕಡೆ ರಸ್ತೆ ತೀವ್ರವಾಗಿ ಹದೆಗೆಟ್ಟು ಸುಮಾರು ಒಂದು ವರ್ಷ ಕಳೆಯುತ್ತಾ ಬಂದರು ಇದು ಯಾವ ಜನ ಪ್ರತಿನಿಧಿಗಳಿಗೂ, ಅಧಿಕಾರಿಗಳಿಗೂ ಕಾಣ್ತಾ ಇಲ್ಲ, ಮುಂದೆ ಯಾವುದಾದರೂ ಅನಾಹುತ ಸಂಭವಿಸಿದಾಗ ಕಾಣಬಹುದೇನೋ..? ಈ ಒಂದು ರಾಜ್ಯ ಹೆದ್ದಾರಿಯ ಮುಖಾಂತರ ದಿನಿ ನಿತ್ಯ ರಾಯಚೂರ,ಮಾನ್ವಿ, ಸಿಂಧನೂರು ಹಾಗೆ ಸುಮಾರು ಹತ್ತಾರು ಹಳ್ಳಿಗಳಿಗೆ ರಸ್ತೆ ಸಂಪರ್ಕ ಹೊಂದಿದ್ದು, ಈ ಹಿಂದೆ ಎರಡುಮೂರು ಅಪಘಾತಗಳು ಆಗಿದ್ದು ಉದಾಹರಣೆ ಸಹ ಇವೆ , ಹಾಗೆ ಇದೇ ರಸ್ತೆಯ ಮುಖಾಂತರ ಮಸ್ಕಿ ಕ್ಷೇತ್ರದ ಶಾಸಕರು, ಮಾಜಿ ಶಾಸಕರು , ಜಿಲ್ಲಾ ಮಟ್ಟದ ಅಧಿಕಾರಿಗಳು , ಕಳೆದ ಹದಿನೈದು ದಿನಗಳ ಹಿಂದೆ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಗ್ರಾಮದಲ್ಲಿ ವಿವಿಧ ಕಾಮಗಾರಿಗಳನ್ನು ನೋಡಲು ಇದೆ ರಸ್ತೆಯ ಮುಖಾಂತರ ಬಂದು ಹೋಗಿದ್ದಾರೆ, ಮಸ್ಕಿಯ ತಹಶೀಲ್ದಾರರು, ಸಂಬಂಧ ಪಟ್ಟ ಅಧಿಕಾರ ವರ್ಗ ಇದನ್ನು ನೋಡಿದ್ದಾರೆ, ನೋಡಿದರು ನೊಡದವರಂತೆ ಕಣ್ಮುಚ್ಚಿದ್ದಾರೆ.ರಸ್ತೆಯು ಇತ್ತೀಚೆಗೆ ಬಹಳಷ್ಟು ವಾಹನಗಳು ಓಡಾಟವಾಗಿದ್ದು, ಏಕೆಂದರೆ ಭತ್ತದ ಕಟಾವು ನಿಮಿತ್ತವಾಗಿ ಭಾರಿ ಗಾತ್ರದ ಮಷಿನ್ , ಭತ್ತ ತುಂಬಿಕೊಂಡು ಹೋಗುವ ಲಾರಿಗಳ ಓಡಾಟದಿಂದ ಮತ್ತಷ್ಟು ಹದೆಗೆಟ್ಟಿದ್ದು ಪ್ರಯಾಣಿಕರಿಗೆ ದಿನನಿತ್ಯ ಸಂಚರಿಸುವವರಿಗೆ ಬಹಳ ತೊಂದರೆಯಾಗಿದ್ದು , ಇದನ್ನ ದಾಟುವಾಗ ಜನಪ್ರತಿನಿಧಿಗಳಿಗೆ , ಅಧಿಕಾರಿಗಳಿಗೆ ಹಿಡಿ ಶಾಪ ಹಾಕುತ್ತಾ ದಾಟುವ ಸಂದರ್ಭ ಒದಗಿಬಂದಿದೆ. ಇದಕ್ಕೆ ಸಂಬಂಧಿಸಿದ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು, ಸ್ಥಳೀಯ ಇಂಜಿನೀಯರುಗಳು ಎಲ್ಲೋ ಇರುತ್ತಾರೆ. ತಮಗೆ ಬೇಕಾದಾಗ ಮಾತ್ರ ತಮಗೆ ಬೇಕಾದವರನ್ನ ಇದ್ದಲ್ಲಿಗೆ ಕರೆಸಿ ಕೆಲಸ ಮಾಡುವ ಕಾರ್ಯ ನಡೆದಿದ್ದು, ಸಾಮಾನ್ಯ ಜನರಿಗೆ ಅವರು ತುಂಬಾ ದುಬಾರಿ ವ್ಯಕ್ತಿಗಳಾಗಿ ಇರುವುದು ದುರಂತ, ಹೆಚ್ವು ಕಡಿಮೆ ಕ್ಷೇತ್ರದ ಶಾಸಕರನ್ನ ನೇರವಾಗಿ ಕಾಣಬಹುದು.ಆದರೆ ಹಾಲಾಪೂರ ಹೋಬಳಿಯಲ್ಲಿ ಬರುವ ಪಿ.ಆರ್.ಡಿ ಜೆಇ, ಜಿಲ್ಲಾ ಪಂಚಾಯತ ಇಂಜಿನಿಯರ್, ಲೋಕೋಪಯೋಗಿ ಅಧಿಕಾರಿಗಳನ್ನು ಕಾಣುವುದು ಬಹಳ ದೂರದ ಕೆಲಸ, ಇನ್ನೂ ಮೊಬೈಲ್ ಮುಖಾಂತರ ಸಂಪರ್ಕವನ್ನು ಮಾಡಿದರೆ ಕಾಲ್ ಸ್ವೀಕರಿಸಿವುದಿಲ್ಲ. ಈ ಭಾಗದ ದೊಡ್ಡ ದೌರ್ಬಲ್ಯ , ಒಟ್ಟಾರೆ ಅಧಿಕಾರಿಗಳು ಯಾರ ಭಯ ಮತ್ತು ಜನಪ್ರತಿನಿಧಿಗಳ ಒತ್ತಡ ಇಲ್ಲದೆ ತಾವೆ ರಾಜರೋಷವಾಗಿ ತಮ್ಮ ಅಧಿಕಾರದ ಅಮಲಿನಲ್ಲಿ ತೇಲಾಡುತ್ತಿದ್ದಾರೆ. ಮುಂದೆ ಇಲ್ಲಿಯ ಜನರೆ ಒಂದು ಪಾಠ ಕಲಿಸುತ್ತಾರೆ ಎನ್ನುವುದು ಇಷ್ಟರಲ್ಲಿಯೇ ಗೊತ್ತಾಗುತ್ತದೆ. ಏಕೆಂದರೆ ಅನೇಕ ಸಂಘ ಸಂಸ್ಥೆಗಳು ಇದನ್ನು ಬೇಗನೆ ಸರಿಪಡಿಸಲು ಅನೇಕರು ಆಗ್ರಹಿಸಿದ್ದಾರೆ.ಈ ರಸ್ತೆ ತೀವ್ರ ಹದಗೆಟ್ಟಿದ್ದು ವಾಹನ ಸವಾರರಿಗೆ ತೊಂದರೆ ಆಗುತ್ತಿದ್ದು, ಮಾಜಿ ಶಾಸಕ ಹಾಗೂ ನೂತನ ಶಾಸಕರ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಮೇಲಾಧಿಕಾರಿಗಳಿಗೆ ಜನಪ್ರತಿನಿಧಿಗಳು ಇದರ ಬಗ್ಗೆ ಹಲವು ಬಾರಿ ಗಮನಕ್ಕೆ ತಂದರೂ ಪ್ರಯೋಜನ ಆಗುತ್ತಿಲ್ಲ. ಈ ರಸ್ತೆ ಮೇಲೆ ಹಾದು ಹೋಗುವ ವಾಹನ ಸವಾರರ ಗೋಳು ಕೇಳೋರ್ಯಾರು ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ.*ಸ್ಥಳೀಯ ನಿವಾಸಿ ಸಿದ್ದಾರ್ಥ್*
Be the first to comment