ರಾಜ್ಯ ಸುದ್ದಿಗಳು
ತುಮುಕೂರು
ಇಂದಿನಿಂದ ಜನವರಿ ಏಳರವರೆಗೆ ತುಮಕೂರು ಜಿಲ್ಲೆಯಲ್ಲಿ ನೈಟ್ ಕರ್ಫ್ಯೂ ಜಾರಿ ಎಂದು ತುಮಕೂರು ಜಿಲ್ಲಾಧಿಕಾರಿ ವೈ ಎಸ್ ಪಾಟೀಲ್ ತಿಳಿಸಿದ್ದಾರೆ.ಸರ್ಕಾರದ ಆದೇಶದ ಅನ್ವಯ ಇಂದಿನಿಂದ ತುಮಕೂರು ಜಿಲ್ಲೆಯಲ್ಲಿ ನೈಟ್ ಕರ್ಫ್ಯೂ ಇರಲಿದೆನೈಟ್ ಕರ್ಫ್ಯೂ ಜಾರಿ ಬಗ್ಗೆ ಪೊಲೀಸ್ ಇಲಾಖೆ ಹಾಗೂ ಇತರ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ ಎಂದರು.
ನೈಟ್ ಕರ್ಫ್ಯೂ ಜಾರಿ ಬಗ್ಗೆ ಮಾಹಿತಿ ನೀಡಿದ ಜಿಲ್ಲಾಧಿಕಾರಿಗಳು ರಾತ್ರಿ 10 ರಿಂದ ಬೆಳಗ್ಗೆ 5 ರವರೆಗೂ ಜನವರಿ ಏಳನೇ ತಾರೀಖಿನವರೆಗೂ ಜಿಲ್ಲೆಯಲ್ಲಿ ನೈಟ್ ಕರ್ಫ್ಯೂ ಜಾರಿ ಇರಲಿದೆ ಎಂದರು. ರಾತ್ರಿ 10 ರ ನಂತರ ಬಾರ್ ಪಬ್ ಕ್ಲಬ್ಗೆ ಯಾವುದೇ ಅವಕಾಶವಿಲ್ಲಗೂಡ್ಸ್ ವಾಹನಗಳಿಗೆ ,ಆಸ್ಪತ್ರೆಗೆ ತೆರಳುವವರಿಗೆ, ರಾತ್ರೀ ಪಾಳಿಯಲ್ಲಿ ಫ್ಯಾಕ್ಟರಿ ಹಾಗೂ ಇಂಡಸ್ಟ್ರಿ ಗಳಿಗೆ ಕೆಲಸಕ್ಕೆ ಹೋಗುವವರಿಗೆ ಯಾವುದೇ ನಿರ್ಬಂಧವಿಲ್ಲ ಆದರೆ ಐಡಿ ಕಾರ್ಡ್ ಕಡ್ಡಾಯವಾಗಿರಲಿದೆ ಎಂದರು.
ಇಂದಿನಿಂದ ಜನವರಿ ಎರಡರವರೆಗೂ ಹೋಟೆಲ್ಗಳಲ್ಲಿ ಶೇಕಡ 50 ಮಾತ್ರ ಊಟ ತೆಗೆದುಕೊಳ್ಳಲು ಹಾಗೂ ಊಟ ಮಾಡಲು ಅವಕಾಶ ನೀಡಲಿದೆ ನೀಡಲಾಗಿದೆ ಹಾಗೂ ಹೋಟೆಲ್ಗಳಲ್ಲಿ ವಾಸ್ತವ್ಯ ಹೂಡುವ ಸಾರ್ವಜನಿಕರಿಗೆ ಯಾವುದೇ ಅಡೆತಡೆ ಇಲ್ಲ ಅದಕ್ಕೆ ಶೇಕಡ ನೂರರಷ್ಟು ಅನುಮತಿ ನೀಡಲಾಗಿದೆ.ಇನ್ನು ಹೋಟೆಲ್ಗಳಲ್ಲಿ ಕೆಲಸ ನಿರ್ವಹಿಸುವ ಸಿಬ್ಬಂದಿಗಳು ಕಡ್ಡಾಯವಾಗಿ ಸಂಪೂರ್ಣವಾಗಿ ವ್ಯಾಕ್ಸಿನ್ ಪಡೆದಿರಬೇಕು ಎಂದರು .ಕರೋನಾ ಮೊದಲನೇ ಹಾಗೂ ಎರಡನೇ ಅಲೆಯಲ್ಲಿ ಸಾಕಷ್ಟು ಸಾವು ನೋವು ಸಂಭವಿಸಿದೆ ಅದರಿಂದ ಸಾರ್ವಜನಿಕರಿಗೆ ಸಂಕಷ್ಟ ತಂದೊಡ್ಡಿತು ಹಾಗಾಗಿ ಎಲ್ಲ ಸಾರ್ವಜನಿಕರು ಸರ್ಕಾರದ ಮಾರ್ಗಸೂಚಿಗಳನ್ನು ತಪ್ಪದೇ ಪಾಲಿಸಬೇಕು.ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್, ಸ್ಯಾನಿಟೈಸರ್ ಬಳಸಬೇಕು ಹಾಗೂ ಅಂತರ ಕಾಯ್ದುಕೊಳ್ಳುವುದನ್ನು ಸಾರ್ವಜನಿಕರು ಪಾಲಿಸಬೇಕಾಗಿದೆ ಸರ್ಕಾರದ ಮಾರ್ಗಸೂಚಿ ವಿರುದ್ಧ ಯಾರೇ ನಡೆದರು ಅಂತಹವರ ವಿರುದ್ಧ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದ್ದಾರೆ.
Be the first to comment