ಜಿಲ್ಲಾ ಸುದ್ದಿಗಳು
ಮಸ್ಕಿ
ಪಟ್ಟಣದ ಸೋಮನಾಥ ನಗರದ ವಾರ್ಡ್ ನಂ 2 ರಲ್ಲಿ ಮಳೆಯಿಂದಾಗಿ ತಗ್ಗು ಪ್ರದೇಶದಲ್ಲಿ ನೀರು ನಿಂತು ಮಲಿನಗೊಂಡು ಮಕ್ಕಳು,ಮುದುಕರು ಮಹಿಳೆಯರಿಗೆ ಡೆಂಗು, ಟೈಪಾಯ್ಡ್, ಮಲೇರಿಯಾ ಸೇರಿದಂತೆ ಇನ್ನಿತರೆ ರೋಗಗಳಿಂದ ನರಳುವಂತಹ ಪರಿಸ್ಥಿತಿ ಬಂದೊದಗಿದೆ. ಆರೋಗ್ಯ ಇಲಾಖೆಯವರು ಒಂದು ಕಡೆ ಮಳೆ ನೀರನ್ನು ಸುತ್ತಮುತ್ತ ನಿಲ್ಲದಂತೆ ನೋಡಿಕೊಳ್ಳಬೇಕು ಎಂದು ಜಾಗೃತಿ ನೀಡುತ್ತದೆ.
ಆದರೆ ಸಂಬಂಧಪಟ್ಟ ತಾಲೂಕು ಆಡಳಿತ ಗೊತ್ತಿದ್ದೂ, ಗೊತ್ತಿಲ್ಲದಂತೆ ಮೌನವಹಿಸಿದೆ. ಅದಲ್ಲದೆ ಈ ನಗರದಲ್ಲಿ ಸುಮಾರು 900ಕ್ಕೂ ಹೆಚ್ಚು ಜನ ವಾಸವಾಗಿದ್ದು, ಅಲ್ಲಿನ ಜನರ ಜೀವನ ಹಂದಿ,ನಾಯಿಗಳ ತಾಣವಾಗಿದೆ. ರಾತ್ರಿ ಸಮಯದಲ್ಲಿ ಮಕ್ಕಳಿಗೆ ಸೊಳ್ಳೆ, ವಿಷ ಜಂತುಗಳ ಕಾಟ ವಾಗಿದ್ದು, ರಾತ್ರಿಯಾದೊಡನೆ ಮನೆಯೊಳಗೆ ಇದ್ದವರು ಬೆಳಗ್ಗೆ ಹೊರಗೆ ಬರುವ ಪರಿಸ್ಥಿತಿ ಇದೆ. ಆದ್ದರಿಂದ ದಯಾಳುಗಳಾದ ತಾವು ಈ ಸಮಸ್ಯೆಯನ್ನು ಪರಿಹರಿಸಿ ಕೊಡಬೇಕೆಂದು ಸಮಾಜವಾದಿ ಭಗತ್ ಸಿಂಗ್ ಯುವಜನ ವೇದಿಕೆಯು ಶಾಸಕರ ಕಾರ್ಯಾಲಯದಲ್ಲಿ ಶಾಸಕರ ಸರಕಾರಿ ಆಪ್ತ ಸಹಾಯಕರಾದ ಶರಣನ ಗೌಡ ಹಂದ್ರಾಳ ಇವರಿಗೆ ಮನವಿ ಪತ್ರವನ್ನು ನೀಡುವ ಮೂಲಕ ಒತ್ತಾಯಿಸಿದ್ದಾರೆ.
ನಂತರ ಮಾತನಾಡಿದ ಶಾಸಕರ ಆಪ್ತ ಸಹಾಯಕರು ಎಲ್ಲಾ ಸಮಸ್ಯೆಗಳ ಕುರಿತು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದು ಸರಿಪಡಿಸುವ ಭರವಸೆ ನೀಡಿದರು.ಈ ಸಂದರ್ಭದಲ್ಲಿ ಬಸವರಾಜ ಎಕ್ಕಿ, ಎಂ.ಅನಿಲ್ ಕುಮಾರ್, ಸುನಿಲ್ ಕುಮಾರ್, ಭೀಮೇಶ, ಜಡಿಯಪ್ಪ, ಸತ್ಯನಾರಾಯಣ, ಗೋಪಾಲಕೃಷ್ಣ, ಪುಂಡಲಿಕ,ಹುಲಿಗೆಮ್ಮ, ಲಕ್ಷ್ಮಮ್ಮ, ಗಂಗಾಧರ, ಚಿನ್ನಪ್ಪ, ಕೊಂಡಪ್ಪ ಸೇರಿದಂತೆ ಇನ್ನಿತರರು ಭಾಗಿಯಾಗಿದ್ದರು.
Be the first to comment