ಜಿಲ್ಲಾ ಸುದ್ದಿಗಳು
ಹೊನ್ನಾವರ
ಮಿನಿ ಬ್ಯಾಂಕ್ ತೆರೆಯುವ ಹೆಸರಿನಲ್ಲಿ ವಂಚಕಜಾಲ ಹೊನ್ನಾವರದ ವ್ಯಕ್ತಿಗೆ 60 ಸಾವಿರದ ನೂರು ರೂಪಾಯಿ ಪಂಗನಾಮ ಹಾಕಿದ ಘಟನೆ ನಡೆದಿದ್ದು ಕಾರವಾರದ ಸಿ.ಇ.ಎನ್ ಅಪರಾಧ ವಿಭಾಗದಲ್ಲಿ ದೂರು ಸಲ್ಲಿಸಿದ್ದು ಅಧಿಕಾರಿಗಳು ಎಫ್ ಐ ಆರ್ ದಾಖಲಿಸಿದ್ದಾರೆ.ಹೊನ್ನಾವರ ತಾಲೂಕಿನ ಟೊಂಕಾದ ಮೈದಿನ್ ಖಾಸಿಮ್ ಸಾಬ್ ಹಣ ಕಳೆದುಕೊಂಡ ವ್ಯಕ್ತಿಯಾಗಿದ್ದಾರೆ. ಕಳೆದ ಕೆಲವು ತಿಂಗಳ ಹಿಂದೆ ತಮ್ಮ ಪೇಸ್ಬುಕ್ ಖಾತೆ ವೀಕ್ಷಣೆ ಮಾಡುತ್ತಿರುವ ಸಂದರ್ಭದಲ್ಲಿ ಡಿಸಿಟಲ್ ಇಂಡಿಯಾ ಸಿ ಎಸ್ ಪಿ ಪಾಯಿಂಟ್ ಮಿನಿ ಬ್ಯಾಂಕ್ ಎನ್ನುವ ಜಾಹಿರಾತನ್ನು ಕಂಡಿದ್ದಾರೆ. ಈ ಬಗ್ಗೆ ತಿಳಿದುಕೊಳ್ಳಲು ಜಾಹಿರಾತಿನ ಮೇಲೆ ಕ್ಲಿಕ್ ಮಾಡಿದ್ದಾರೆ. ಬಳಿಕ ಮರುದಿನ ವಂಚಕರ ಕಡೆಯಿಂದ ಕರೆ ಬಂದಿದ್ದು ಸಿ ಎಸ್ ಪಿ ಕಂಪನಿಯ ಎಕ್ಸಿಕ್ಯೂಟಿವ್ ಎಂದು ಪರಿಚಯ ಮಾಡಿಕೊಂಡು ಮಿನಿ ಬ್ಯಾಂಕ್ ಆಫ್ ಇದು ಎಂದು ಅದನ್ನು ಬಳಸಲು ತಿಳಿಸಿದ್ದಾರೆ. ಅಲ್ಲದೆ ಮಿನಿ ಬ್ಯಾಂಕ್ ತೆರೆಯಲು ನಿಮಗೆ ಎರಡು ಕಂಪ್ಯೂಟರ್, 4 ಸಿಸಿಟಿವಿ ಕ್ಯಾಮೆರಾ ಕಳುಹಿಸುತ್ತೇವೆ . ನಿಮ್ಮ ಹಳ್ಳಿಯಲ್ಲಿ ಬೇರೆಯವರ ಬ್ಯಾಂಕ್ ಖಾತೆಗೆ ಓನ್ಲೈನ್ ಮೂಲಕ ಹಣ ವರ್ಗಾವಣೆ , ರೀಚಾರ್ಜ ಮಾಡಿದರೆ ಕಮಿಷನ್ ನೀಡುತ್ತೇವೆ ಎಂದು ನಂಬಿಸಿದ್ದಾರೆ.
ಮಿನಿ ಬ್ಯಾಂಕ್ ತೆರೆಯಲು 10 ಸಾವಿರದ ನೂರು ರೂಪಾಯಿ ತಮ್ಮ ಬ್ಯಾಂಕ್ ಖಾತೆಗೆ ಜಮಾ ಮಾಡಲು ತಿಳಿಸಿದ್ದಾರೆ. ವಂಚಕರ ಮಾತನ್ನು ನಂಬಿದ ಅವರು ಹಣ ವರ್ಗಾವಣೆ ಮಾಡಿದ್ದಾರೆ. ಬಳಿಕ ಮತ್ತೆ ಕಾಲ್ ಮಾಡಿ ತಾವು ಮಿನಿ ಬ್ಯಾಂಕ್ ಓಡಿ ಡಿಪಾರ್ಟ್ಮೆಂಟನಿಂದ ಕರೆ ಮಾಡುತ್ತಿದ್ದು ನೀವು ಹಣ ವರ್ಗಾವಣೆ ಮಾಡಿದ್ದ ಖಾತೆಯಲ್ಲಿ 50 ಸಾವಿರ ಇರಬೇಕು ಅದನ್ನು ಆರ್ ಬಿ ಐ ಪರಿಶೀಲನೆ ಮಾಡಲಿದೆ ಎಂದು ನಂಬಿಸಿದ್ದಾರೆ. ಬಳಿಕ ನಿಮ್ಮ ಹಣವನ್ನು ಒಂದು ಗಂಟೆ ಓಪಸ್ ವರ್ಗಾವಣೆ ಮಾಡಲಾಗುವುದು ಎಂದು ತಿಳಿಸಿದ್ದಾರೆ. ವಂಚಕರ ಖಾತೆಗೆ 50 ಸಾವಿರ ಸಹ ಜಮಾ ಮಾಡಿದ್ದಾರೆ . ಇದಾದ ಬಳಿಕ ಮಿನಿ ಬ್ಯಾಂಕ್ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬರದ ಕಾರಣದಿಂದ ಮೋಸ ಹೋಗಿರುವುದು ತಿಳಿದು ಬಂದಿದೆ . ಈ ಬಗ್ಗೆ ಅವರು ಕಾರವಾರದ ಸಿ.ಇ.ಎನ್ ಅಪರಾಧ ವಿಭಾಗದಲ್ಲಿ ದೂರು ಸಲ್ಲಿಸಿದ್ದಾರೆ.
Be the first to comment