ರಾಜ್ಯ ಸುದ್ದಿಗಳು
ಮಂಗಳೂರು
ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಎಂ.ಇ.ಎಸ್ ಪುಂಡರು ಕನ್ನಡ ಧ್ವಜಕ್ಕೆ ಬೆಂಕಿಹಚ್ಚಿದ ಘಟನೆ ಅತ್ಯಂತ ಖಂಡನೀಯ. ಈ ನೆಲದ ಯಾವೋಬ್ಬ ನಾಗರಿಕನು ಸಹಿಸಲಾರದ ಕೃತ್ಯ ಈ ಕೃತ್ಯವೆಸಗಿದ ಮಹಾರಾಷ್ಟ್ರ ಏಕಿಕರಣ ಸಮಿತಿಯನ್ನು ನಮ್ಮ ಕನ್ನಡ ನೆಲದಲ್ಲಿ ನಿರ್ಭಂದ ಹೇರಬೇಕು ಎಂದು ಆಗ್ರಹಿಸಿ ಕರ್ನಾಟಕ ರಣಧೀರ ವೇಧಿಕೆ ಕಾರ್ಯಕರ್ತರು ಬೆಂಗಳೂರು ಟೌನ್ ಹಾಲ್ ಬಳಿ ಪ್ರತಿಭಟನೆ ನಡೆಸಿದರು , ಪ್ರತಿಭಟನೆ ನಡೆಸುತ್ತಿದ್ದ ಕನ್ನಡಪರ ಕಾರ್ಯಕರ್ತರನ್ನು ಪೊಲೀಸ್ ರು ಬಂಧನ ಮಾಡಿದರು.ಕನ್ನಡಧ್ವಜ ಸುಟ್ಟ ನಾಡ ದ್ರೋಹಿ ಕೃತ್ಯವೆಸಗಿದವರನ್ನುನಾಡದ್ರೋಹದ ಪ್ರಕರಣದ ಅಡಿಯಲ್ಲಿ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಕನ್ನಡ ಧ್ವಜ ಸುಟ್ಟ ಘಟನೆ ಸಹಿಸದೆ ಸ್ವಾಭಿಮಾನಿ ಕನ್ನಡಿಗನೋರ್ವ ಎಂ.ಇ.ಎಸ್ ಮುಖಂಡನ ಮುಖಕ್ಕೆ ಮಸಿಬಳಿದು ಪ್ರತಿಭಟಿಸಿದಕ್ಕಾಗಿ ಆತನ ಮೇಲೆ ಪೊಲೀಸರು ಕೊಲೆ ಯತ್ನ ಕೇಸ್ ದಾಖಲಿಸಿರುವುದು ಖಂಡನಾರ್ಹವಾಗಿದೆ. ಬೆಳಗಾವಿಯಲ್ಲಿ ಅಧಿವೇಶನ ನಡೆಯುತ್ತಿದ್ದು ಸಂಪೂರ್ಣ ರಾಜ್ಯ ಸರ್ಕಾರವೆ ಅಲ್ಲಿರುವಾಗ ಈ ಘಟನೆ ನಡೆದಿದ್ದು ಎಲ್ಲಾ ಪಕ್ಷಗಳು ಒಕ್ಕೊರಲಿನಿಂದ ನಾಡು,ನುಡಿ.ನೆಲ.ಜಲ ವಿಚಾರದಲ್ಲಿ ಬದ್ದತೆ ತೋರಿ ಎಂ.ಇ.ಎಸ್ ಪುಂಡಾಟಿಕೆಗೆ ಕಡಿವಾಣ ಹಾಕಬೇಕೆಂದು ಒತ್ತಾಯಿಸುತ್ತೇವೆ.ಇಂತಹ ನಾಡದ್ರೋಹದ ಘಟನೆಗಳನ್ನು ಲಘುವಾಗಿ ಪರಿಗಣಿಸದೆ ಗಂಭೀರವಾಗಿ ಪರಿಗಣಿಸಬೇಕಿದೆ. ಗಡಿವಿವಾದ ನ್ಯಾಯಾಲಯದಲ್ಲಿದ್ದು ಕನ್ನಡ ನೆಲದ ಒಂದಿAಚು ಸ್ಥಳವನ್ನು ಮಹಾರಾಷ್ಟಕ್ಕೆ ಬಿಟ್ಟಕೊಡುವ ಪ್ರಶ್ನೆಯೆ ಇಲ್ಲ.ಪ್ರತಿಬಾರಿ ಕನ್ನಡ ಪರ ಹೋರಾಟಗಾರರ ಮೇಲೆ ದಬ್ಬಾಳಿಕೆಯಾಗುತ್ತಿದ್ದರೆ ಮುಂದೆ ಕನ್ನಡಪರ ಹೋರಾಟಗಳು ಮಂಕಾಗಲಿರುವ ಅಪಾಯವಿದೆ ಈ ಕೂಡಲೆ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡು ಕನ್ನಡಪರ ಹೋರಾಟಗಾರರ ಪರ ನಿಲ್ಲಬೇಕಿದೆ. ಮುಂದೆ ಇಂತಹ ಘಟನೆಗಳು ನಡೆಯದಂತೆ ತಡೆಯಲು ಕನ್ನಡ ನಾಡಿನ ಅಸ್ತಿತ್ವಕ್ಕೆ ದಕ್ಕೆ ತರುವ ಯಾವುದೆ ವ್ಯಕ್ತಿ ಅಥವಾ ಸಂಘಟನೆಗಳನ್ನು ಮಟ್ಟಹಾಕಬೇಕು ಎಂದು ಕರ್ನಾಟಕ ರಣಧೀರರ ವೇಧಿಕೆ ರಾಜ್ಯ ಅಧ್ಯಕ್ಷ ಶಂಕರ್ ಗೌಡ್ರು ಆಗ್ರಹಿಸಿದ್ದಾರೆ.
Be the first to comment