ಕೋಟತಟ್ಟು ಗ್ರಾಮದಲ್ಲಿ ಅನಧಿಕೃತ ರೆಸಾರ್ಟ್ ತೆರವುಗೊಳಿಸಲು ಕೋಟತಟ್ಟು ಗ್ರಾಮಸ್ಥರಿಂದ ಪಂಚಾಯಿತಿಗೆ ಮುತ್ತಿಗೆ..!

ವರದಿ : ಇಬ್ರಾಹಿಂ ಕೋಟ ಕುಂದಾಪುರ

ಜಿಲ್ಲಾ ಸುದ್ದಿಗಳು 

ಕೋಟ

ಕೋಟತಟ್ಟು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಡುಕೆರೆ ಕಡಲ ಕಿನಾರೆಯಲ್ಲಿ ಪರವಾನಿಗೆ ಪಡೆಯದೆ ರೆಸಾರ್ಟ್ ಕಟ್ಟಡ ನಿರ್ಮಿಸಿದ್ದು, ಇದಕ್ಕೆ ಮೆಸ್ಕಾಂ ಮೂಲಕ ತಾತ್ಕಾಲಿಕ ವಿದ್ಯುತ್ ಸಂಪರ್ಕ ನೀಡಿದ್ದರಿಂದ ಸ್ಥಳೀಯ ಗ್ರಾಮಸ್ಥರು ಆಕ್ರೋಶಗೊಂಡು ಡಿ. 20 ರಂದು ಸೋಮವಾರ ಬೆಳಿಗ್ಗೆ ಕೋಟತಟ್ಟು ಗ್ರಾಮ ಪಂಚಾಯತ್ ಗೆ ಮುತ್ತಿಗೆ ಹಾಕಿದರು.
ಈ ಸಂದರ್ಭದಲ್ಲಿ ಸ್ಥಳೀಯರಾದ ಸಂತೋಷ್ ಮಾತನಾಡಿ ಸಮುದ್ರ ಕಿನಾರೆ ಹತ್ತಿರ 2 ಎಕ್ರೆ ಜಾಗದಲ್ಲಿ ಹಳೆ ಎರಡು ಮನೆಗಳಿದ್ದು. ಈಗ ಅದನ್ನು ನವಿಕರಣ ಮಾಡಿ ರೆಸಾರ್ಟ್ ಮಾಡಲಾಗಿದೆ. ಅಲ್ಲದೆ ಇನ್ನೊಂದು ಕಟ್ಟಡ ರಚನೆಯಾಗುತ್ತಿದ್ದು ಅದಕ್ಕೆ ಪಂಚಾಯಿತಿಯಿಂದ ಯಾವುದೇ ಪರವಾನಿಗೆಯನ್ನು ಪಡೆಯದೆ ವಿದ್ಯುತ್ ಸಂಪರ್ಕವನ್ನು ಪಡೆದಿರುತ್ತಾರೆ. ಇಲ್ಲಿ ಬಡವರಿಗೆ ಒಂದು ನ್ಯಾಯ ಶ್ರೀಮಂತರಿಗೊಂದು ನ್ಯಾಯ ಬೇಡ ಎಲ್ಲರೂ ಸಮಾನರು, ಅಲ್ಲದೆ ಈ ವಸತಿ ಗ್ರಹದಿಂದ ಆಗುವ ತೊಂದರೆ ಬಗ್ಗೆ ವಿವರಿಸಿ ಆನ್ ಲೈನ್ ಮುಖಂತರ ಪ್ರವಾಸಿಗರನ್ನು ಕರೆಸಿಕೊಂಡು ರಾತ್ರಿ ಎಲ್ಲಾ ಮದ್ಯಪಾನ ಮಾಡಿ ಪಾರ್ಟಿ ನಡೆಯುತ್ತದೆ, ಕಾನೂನು ಬಾಹಿರ ಚಟುವಟಿಕೆಗಳು ನಡೆಯುತ್ತಿದ್ದು ಇದರಿಂದ ಸ್ಥಳೀಯ ಅಕ್ಕ ಪಕ್ಕದವರಿಗೆ ತೊಂದರೆ ಉಂಟಾಗಿದೆ. ಈ ರೆಸಾರ್ಟ್ ಸುತ್ತಮುತ್ತಲು ಕುಟುಂಬಸ್ಥರ ಮನೆಗಳು ಇರುವುದರಿಂದ ಇಲ್ಲಿ ರೆಸಾರ್ಟ್ ಗಳಿಗೆ ಪರವಾನಿಗೆ ನೀಡಬಾರದು.
ಕೂಡಲೆ ಅನಧಿಕೃತ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿ ಕಟ್ಟಡವನ್ನು ತೆರವುಗೊಳಿಸಬೇಕು. ಒಂದು ವೇಳೆ ತೆರವುಗೊಳಿಸದಿದ್ದಲ್ಲಿ ಮುಂದೇ ಆಗುವ ಅನಾಹುತಕ್ಕೆ ಗ್ರಾಮ ಪಂಚಾಯತ್ ಹೊಣೆ ಎಂದು ಎಚ್ಚರಿಸಿ ಪ್ರತಿಭಟನೆ ಮಾಡಿದರು.ಮತ್ತು ಅಧ್ಯಕ್ಷರಿಗೆ ಮನವಿ ಸಲ್ಲಿಸಿದರು.
ಅಷ್ಟರಲ್ಲಿ ಪಂಚಾಯತ್ ನವರು ಮೆಸ್ಕಾಂ ಅಧಿಕಾರಿಯನ್ನು ಪಂಚಾಯತ್ ಗೆ ಕರೆಸಲಾಯಿತು. ಗ್ರಾಮಸ್ಥರು ಅನಧಿಕೃತ ಕಟ್ಟಡಕ್ಕೆ ವಿದ್ಯುತ್ ಸಂಪರ್ಕ ನೀಡಿದ ಮೆಸ್ಕಾಂ ಅಧಿಕಾರಿಯನ್ನು ತರಾಟೆ ತೆಗೆದುಕೊಂಡರು. ಮೆಸ್ಕಾಂ ಅಧಿಕಾರಿಯು ಪ್ರತಿಭಟನಕಾರರಿಗೆ ಮಣಿದು ತಕ್ಷಣ ಅನಧಿಕೃತ ಕಟ್ಟಡಕ್ಕೆ ನೀಡಿದ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸುದಾಗಿ ಭರವಸೆ ನೀಡಿ ಸೋಮವಾರಮದ್ಯಾಹ್ನ ಅನಧಿಕೃತ ರೆಸಾರ್ಟ್ ಗೆ ನೀಡಿದ ವಿದ್ಯುತ್ ಸಂಪರ್ಕ ವನ್ನು ಕಡಿತಗೊಳಿಸಲಾಯಿತು.

CHETAN KENDULI

*ಮಾಧ್ಯಮದವರೊಂದಿಗೆ ಮಾತನಾಡಿದ*
*ಮೆಸ್ಕಾಂ ಅಧಿಕಾರಿ ಪ್ರಶಾಂತ್ ಶೆಟ್ಟಿ ಅವರು ಸಾರ್ವಜನಿಕರಿಂದ* *ತಾತ್ಕಾಲಿಕ ವಿದ್ಯುತ್ ನೀಡದ ಬಗ್ಗೆ ದೂರು ಬಂದಿದ್ದು, ಆದ್ದರಿಂದ ವಿದ್ಯುತ್* *ಸಂಪರ್ಕವನ್ನು ಕಡಿತಗೊಳಿಸಿದ್ದೇವೆ. ಆ ಸ್ಥಳದಲ್ಲಿ ಎರಡು ಹಳೆ ಕಟ್ಟಡ* *ನವಿಕರಣಗೊಂಡಿದ್ದರಿಂದ ಅದಕ್ಕೆ ಪರ್ಮನೆಂಟ್ ವಿದ್ಯುತ್ ನ್ನು* *ಅಳವಡಿಸಲಾಗಿದೆ. ಇನ್ನು ಹೊಸ ಕಟ್ಟಡ ನಿರ್ಮಾಣ* *ಹಂತದಲ್ಲಿದ್ದು ಅನಧಿಕೃತ ಕಟ್ಟಡಕ್ಕೆ ವಿದ್ಯುತ್ ಸಂಪರ್ಕ ಪಡೆದ ಬಗ್ಗೆ* *ಸಾರ್ವಜನಿಕರಿಂದ ದೂರು ಬಂದಿದ್ದರಿಂದ ಆ ವಿದ್ಯುತ್ ಸಂಪರ್ಕವನ್ನು* *ಕಡಿತಗೊಳಿಸುತ್ತಿದ್ದೇವೆ. ಅಲ್ಲದೆ ರೆಸಾರ್ಟ್ ಮಾಲೀಕರಿಗೆ* *ನೋಟೀಸ್ ನೀಡಿ ಇನ್ನು ಮುಂದೆ ಅನಧಿಕೃತ ಕಟ್ಟಡಕ್ಕೆ ವಿದ್ಯುತ್* *ಸಂಪರ್ಕವನ್ನು ಅಳವಡಿಸಿ ಕೊಂಡರೆ ಮೊದಲು ನೀಡಿದ ಪರ್ಮನೆಂಟ್ ವಿದ್ಯುತ್* *ಸಂಪರ್ಕವನ್ನು ಕಡಿತಗೊಳಿಸುದಾಗಿ ತಿಳಿಸುತ್ತೇವೆ ಎಂದು ಹೇಳಿದರು.*

*ಪಂಚಾಯತ್ ಅಧ್ಯಕ್ಷೆ ಅಶ್ವಿನಿದಿನೇಶ್ ಮಾತನಾಡಿ ಕೋಟತಟ್ಟು ಗ್ರಾಮ ಪಂಚಾಯತ್* *ವ್ಯಾಪ್ತಿಯಲ್ಲಿ ಅನಧಿಕೃತ ಕಟ್ಟಡ ನಿರ್ಮಿಸಿದ ಬಗ್ಗೆ ಸಾರ್ವಜನಿಕರಿಂದ ದೂರು ಬಂದಿದ್ದು. ಮುಂದಿನ ದಿನಗಲ್ಲಿ* *ಸ್ಥಳ ತನಿಖೆ ಮಾಡಿ ಪರಿಶೀಲಿಸಿ ತಪ್ಪಿಸ್ಥಸ್ತರ ವಿರುದ್ದ ಪಂಚಾಯತ್* *ಕಾಯ್ದೆ ಅನುಮಯ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.*

Be the first to comment

Leave a Reply

Your email address will not be published.


*