ಕಸಾಪ ಚುನಾವಣೆ ಮುಂದೋಡಿಕೆಗೆ ಸಾಹಿತಿಗಳ ಒಮ್ಮತ….!!! ಸಾಹಿತಿ ಶರಣ ದರ್ಶನ ಪಾಕ್ಷೀಕ ಪತ್ರಿಕೆ ಬಿಡುಗಡೆಗೊಳಿಸಿದ ಕಸಾಪ ಸಮಾನ ಮನಸ್ಕರ ಸದಸ್ಯರು…!

ವರದಿ: ಚೇತನ ಕೆಂದೂಳಿ, ಸುದ್ದಿ ಸಂಪಾದಕರು

ಜಿಲ್ಲಾ ಸುದ್ದಿಗಳು

ಮುದ್ದೇಬಿಹಾಳ:

CHETAN KENDULI

ಇಂದಿನ ದಿನಗಳಲ್ಲಿ ನಮ್ಮ ನಾಡಿನ ಶರಣರ ತತ್ವ ಆದರ್ಶಗಳನ್ನು ಅಳವಡಿಸಿಕೊಳ್ಳುವಲ್ಲಿ ಯುವಪೀಳಿಗೆಯವರು ವಿಫಲರಾಗುತ್ತಿದ್ದಾರೆ. ಅಂತಹ ಯುವಕರಿಗೆ ಹುಮ್ಮಸ್ಸು ನೀಡುವ ನಿಟ್ಟಿನಲ್ಲಿ ಕಾಟಕರ ಅವರ ಪಾಕ್ಷೀಕ ಪತ್ರಿಕೆ ಬಿಡುಗಡೆಗೊಳಿಸಿದ್ದು ಶ್ಲಾಘನೀಯವಾದದ್ದು ಎಂದು ಕಸಾಪ ಸಮಾನ ಮನಸ್ಕರ ಸದಸ್ಯ ಅಶೋಕ ಮಣಿ ಹೇಳಿದರು.
ಕೋವಿಡ್-19 ಕಟ್ಟುನಿಟ್ಟಿ ನಿಯಮಾವಳಿ ಜಾರಿಯಲ್ಲಿರುವ ಹಿನ್ನೆಲೆಯತಲ್ಲಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಸಂಜೆ ಸರಳಿ ರೀತಿಯಲ್ಲಿ ನೂತನ ಪಾಕ್ಷೀಕ ಪತ್ರಿಕೆಯ ಬಿಡಗುಡೆ ಸಮಾರಂಭದಲ್ಲಿ ಅವರು ಮಾತನಾಡಿದರು.



 



12ನೇ ಶತಮಾನದಲ್ಲಿಯೇ ಬಸವಣ್ಣನವರು ಜಾತಿ ವ್ಯವಸ್ಥೆಯನ್ನು ತೊಲಗಿಸಲು ಸಾಕಷ್ಟು ಶ್ರಮಿಸಿದ್ದರು. ಆದರೂ ಇಂದಿನ ದಿನಗಳಲ್ಲಿ ಜಾತಿ ವ್ಯವಸ್ಥೆಯಲ್ಲಿ ಬದಲಾವಣೆ ಕಂಡಿಲ್ಲ. ಯಾವುದೇ ಚುನಾವಣೆ ಬಂದರೂ ಅದರಲ್ಲಿ ಜಾತಿಯ ಮತಗಳ ಪ್ರಚಾರವನ್ನು ಕೈಗೊಂಡು ಪ್ರಜಾಪ್ರಭುತ್ವಕ್ಕೆ ದಕ್ಕೆ ತರುವಂತಹ ಕೆಲಸವಾಗುತ್ತಿದೆ. ಇಂತಹ ಪದ್ಧತಿಯನ್ನು ಎಲ್ಲರೂ ಒಗ್ಗೂಡಿ ಹೋಗಲಾಡಿಸಬೇಕು ಎಂದು ಅವರು ಕರೆ ನೀಡಿದರು.
ಕಸಾಪ ಸಮಾನ ಮನಸ್ಕರ ಮುಖ್ಯಸ್ಥ ಕಾಮರಾಜ ಬಿರಾದಾರ ಮಾತನಾಡಿ, ರಾಜ್ಯಾದ್ಯಂತ ಕೊರೊನಾ ಹಾವಲಿ ಹೆಚ್ಚಾದ ಪರಿಣಾಮ ರಾಜ್ಯದ ಸಿಎಂ ಯಡಿಯೂರಪ್ಪನವರು ಎಲ್ಲ ಚುನಾವಣೆಗಳನ್ನು ಮುಂದೋಡಿಸಿದ್ದ ಸ್ವಾಗತಾರ್ಹವಾಗಿದೆ. ಇನ್ನೂ ವಿಜಯಪುರ ಜಿಲ್ಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತನ ಚುನಾವಣೆಯಲ್ಲಿ ತಾಲೂಕಾ ಸಮಾನ ಮನಸ್ಕರು ಬದಲಾವಣೆ ತರಬೇಕು ಎಂಬ ನಿರ್ಧಾರವನ್ನು ಮುಂಬರುವ ಚುನಾವಣೆಯಲ್ಲಿ ಮಾಡಿಯೇ ತೀರುತ್ತೇವೆ. ಇನ್ನೂ ಏ.27 ರಂದು ಸಮಾನ ಮನಸ್ಕರರ ಜಿಲ್ಲಾಧ್ಯಕ್ಷ ಸ್ಥಾನದ ಅಧಿಕೃತ ಅಭ್ಯರ್ಥಿಯೊಂದಿಗೆ ನಡೆಯಬೇಕಾದ ಸಭೆಯನ್ನೂ ಮುಂದೊಡಿದ್ದು ಶೀಘ್ರದಲ್ಲಿಯೇ ಮುಂದಿನ ದಿನಗಳಲ್ಲಿ ಸಭೆ ನಡೆಸಲಾಗುವುದು ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಕಸಾಪ ಸಮಾನ ಮನಸ್ಕರ ಸದಸ್ಯರಾದ ಅಬ್ದುಲ್‍ರೇಹಮಾನ ನಾಯ್ಕೋಡಿ, ಮನು ರಾಯಚೂರ, ವಿಜಯಮಹಾಂತೇಶ ಬಂಗಾರಗುಂಡ, ಬಾದರಬಂಡಿ ಸೇರಿದಂತೆ ಇತರರಿದ್ದರು.

Be the first to comment

Leave a Reply

Your email address will not be published.


*