ಜಿಲ್ಲಾ ಸುದ್ದಿಗಳು
ಮುದ್ದೇಬಿಹಾಳ:
ಗ್ರಾಮೀಣ ಭಾಗದಲ್ಲಿ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರ ಸೇವೆಯನ್ನು ಪರಿಗಣಿಸಿ ಅವರನ್ನು ಅಭಿನಂದಿಸಲು ರಾಜ್ಯ ಸರಕಾರ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದೆ. ಗ್ರಾಮೀಣ ಮಟ್ಟದಲ್ಲಿ ಇನ್ನೂ ಹೆಚ್ಚಿನ ಜನ ಜಾಗೃತಿಯನ್ನು ಮೂಡಿಸುವ ಮೂಲಕ ನಮ್ಮ ಫ್ರೇಂಟಲೈನ್ ವಾರಿಯರ್ಸಗಳು ಹೆಚ್ಚಿನ ಪ್ರಯತ್ನವನ್ನು ಮಾಡಬೇಕಿದೆ. ಅಲ್ಲದೇ ಜನರಲ್ಲಿ ಕೊರೊನಾ ಲಸಿಕೆ ಬಗ್ಗೆ ಕೆಲವರು ಅಪಪ್ರಚಾರದ ಬಗ್ಗೆ ಜನರು ತೆಲೆ ಕೆಡಿಸಿಕೊಳ್ಳದೇ ಲಸಿಕೆ ಹಾಕಿಸಿಕೊಳ್ಳುವಲ್ಲಿ ಮುಂದಾಗಬೇಕು.
-ಎ.ಎಸ್.ಪಾಟೀಲ ನಡಹಳ್ಳಿ, ಅಧ್ಯಕ್ಷರು, ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ಬೆಂಗಳೂರು.
ಕೊರೊನಾ ಅಂತಹ ಅನೇಕ ರೋಗಗಳು ಹಿಂದೇ ದೇಶಕ್ಕೆ ಆವರಿಸಿದ್ದವು. ಅದರಂತೆ ಈಗ ಕೊರೊನಾ ಎಂಬ ವೈರಾಣು ಜನರನ್ನು ತತ್ತರಿಸುತ್ತಿದೆ. ಇದಕ್ಕೆ ಹೆದರುವ ಅವಶ್ಯಕತೆ ಇಲ್ಲಾ. ಆದರೆ ಜಾಗೃತರಾಗುವುದು ಅವಶ್ಯವಾಗಿದೆ ಎಂದು ಕರ್ನಾಟಕ ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ಅಧ್ಯಕ್ಷ ಹಾಗೂ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಹೇಳಿದರು.
ತಾಲೂಕಿನ ಮಡಿಕೇಶ್ವರ ಗ್ರಾಮ ಪಂಚಾಯತ ವ್ಯಾಪ್ತಿಯ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೆ ಆಹಾರ ಕಿಟ್ ಹಾಗೂ ಸಿರೆ ಮತ್ತು ನಿರ್ಗತಿಕ ವಲಸೆ ಕಾರ್ಮಿಕರಿಗೆ ಆಹಾರ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಸೋಮವಾರ ಮುದ್ದೇಬಿಹಾಳ ತಾಲೂಕಿನ ರೂಢಗಿ, ಮಡಿಕೇಶ್ವರ ಹಾಗೂ ಢವಳಗಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಗೆ ಆಹಾರ ಕಿಟ್, ಸಿರೆ ಮತ್ತು ವಲಸೆ ನಿರ್ಗತಿಕರಿಗೆ ಆಹಾರ ಕಿಟ್ ಗಳನ್ನು ಶಾಸಕರು ವಿತರಣೆ ಮಾಡಿದರು.
ಹಿಂದೆ ಬಂದಂತಹ ಎಲ್ಲ ವೈರಾಣುಗಳಿಗಿಂತ ಕೊರೊನಾ ತುಂಬಾ ಅಪಾಯಕಾರಿಯಾಗಿದೆ. ವೈರಾಣು ಮನುಷ್ಯನ ದೇಹದಲ್ಲಿ ಪ್ರವೇಶಿಸಿದ ಸಂದರ್ಭದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿರುವ ವ್ಯಕ್ತಿಗೆ ಯಾವುದೇ ರೋಗ ಲಕ್ಷಣಗಳು ಕಂಡು ಬರುವುದಿಲ್ಲ. ಆದರೆ ಕೆಲ ದಿನಗಳ ನಂತರ ಏಕಾಏಕಿ ವೈರಾಣು ತನ್ನ ಪ್ರಾಭಲ್ಯವನ್ನು ತೋರಿಸುತ್ತದೆ. ಆದ್ದರಿಂದ ಈಗಾಗಲೇ ಆರೋಗ್ಯ ಇಲಾಖೆ ಸೂಚಿಸಿದಂತೆ ಕೊರೊನಾ ಲಕ್ಷಣಗಳು ಸಲ್ಪಮಟ್ಟಲ್ಲಿಯೇ ಕಂಡರೂ ವೈದ್ಯರನ್ನು ಸಂಪರ್ಕಿಸಿ ಹಾಗೂ ಗ್ರಾಮೀಣ ಭಾಗದಲ್ಲಿ ಪ್ರತಿಯೊಬ್ಬರೂ ಕೊರೊನಾ ಪರೀಕ್ಷೆಗೆ ಒಳಪಟ್ಟು ರೋಗ ತಡೆಗಟ್ಟುವಲ್ಲಿ ಸಹಕರಿಸಬೇಕು ಎಂದು ಅವರು ಹೇಳಿದರು.
ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರ ಜವಾಬ್ದಾರಿ ಹೆಚ್ಚಿದೆ:
ಗ್ರಾಮೀಣ ಭಾಗದಲ್ಲಿ ಜನರನ್ನು ಕೊರೊನಾ ವೈರಾಣು ಬಗ್ಗೆ ತಿಳುವಳಿಕೆ ಹೇಳಿ ಅವರನ್ನು ಜಾಗೃತಿ ಪಡಿಸುವುದು ಅವಶ್ಯಕವಾಗಿದೆ. ಈ ನಿಟ್ಟಿನಲ್ಲಿ ಗ್ರಾಮೀಣ ಭಾಗದ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯವರು ಪ್ರತಿಯೊಂದು ಮನೆಗೆ ತೆರಲಿ ತಿಳುವಳಿಕೆ ನೀಡಬೇಕು. ಈಗಾಗಲೇ ಸಾಕಷ್ಟು ಗ್ರಾಮೀಣ ಜನರಲ್ಲಿ ಕೆಲವರು ಕೊರೊನಾ ಲಸಿಕೆ ಬಗ್ಗೆ ಅಪನಂಬಿಕೆಯನ್ನು ಮೂಡಿಸಲಾಗಿದೆ. ಇದರ ಬಗ್ಗೆ ಜನರು ಯಾವುದೇ ಮಹತ್ವ ನೀಡಬಾರದು ಎಂದು ಶಾಸಕ ನಡಹಳ್ಳಿ ಹೇಳಿದರು.
ಲಸಿಕಾ ಅಭಿಯಾನ ಪೂರ್ಣಪ್ರಮಾಣವಾದರೆ ಲಸಿಕೆಗಳನ್ನು ಉತ್ಪಾದಿಸಲು ಸಹಕಾರಿ:
ಹಿಂದೆ ಕೊರೊನಾ ಲಸಿಕೆಯನ್ನು ಕಡ್ಡಾಯವಾಗಿ ಹಾಕಿಸಿಕೊಳ್ಳಿರಿ ಎಂದು ಕೇಂದ್ರ ಹಾಗೂ ರಾಜ್ಯ ಸರಕಾರಗಳು ಜನ ಜಾಗೃತಿ ಮೂಡಿಸಿದರೆ ಕೆಲವರ ಅಪನಂಬಿಕೆಗಳನ್ನು ನಂಬಿದ ಜನರು ಲಸಿಕೆ ಹಾಕಿಸಿಕೊಳ್ಳಲು ಮುಂದಾಗಲಿಲ್ಲಾ. ಇದರಿಂದ ಸಾಕಷ್ಟು ಲಸಿಕೆಗಳು ಉಪಯುಕ್ತವಾಗದೇ ನಾಶವಾದವು. ಕೊರೊನಾ ಲಸಿಕೆಗಳನ್ನು ಇಂತಿಷ್ಟು ಕನಿಷ್ಠ ಹವಾಮಾನದಲ್ಲಿ ಇಡಬೇಕು. ಇಲ್ಲವಾದರೆ ಲಸಿಕೆ ಹಾಳಾಗುತ್ತದೆ. ಆದ್ದರಿಂದ ಕೂಡಲೇ ಎಲ್ಲರೂ ಲಸಿಕೆಗಳನ್ನು ಹಾಕಿಸಿಕೊಳ್ಳಲು ಮುಂದಾಗಬೇಕು ಎಂದು ಶಾಸಕರು ಹೇಳಿದರು.
Be the first to comment