ರಾಜ್ಯ ಸುದ್ದಿಗಳು
ದೇವನಹಳ್ಳಿ
ಸರಕಾರ ಕಾವೇರಿ ಕೂಗು ಕಾರ್ಯಕ್ರಮದಲ್ಲಿ ರೈತರಿಗೆ ಅತೀ ಕಡಿಮೆ ಬೆಲೆಯಲ್ಲಿ ಸಸಿಗಳನ್ನು ವಿತರಿಸಿ, ದೊಡ್ಡಮೊತ್ತದ ಹಣವನ್ನು ಸಂಪಾದಿಸಿಕೊಳ್ಳಲು ಸಾಕಷ್ಟು ಸಹಕಾರ ನೀಡುತ್ತಿದೆ. ಪ್ರತಿ ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕನ್ನಮಂಗಲ ಗ್ರಾಪಂ ಅಧ್ಯಕ್ಷ ಕೆ.ಆರ್.ನಾಗೇಶ್ ತಿಳಿಸಿದರು.ತಾಲೂಕಿನ ಕನ್ನಮಂಗಲ ಗ್ರಾಮದ ಸರಕಾರಿ ಶಾಲೆಯ ಆವರಣದಲ್ಲಿ ಈಶಾ ಫೌಂಡೇಷನ್ ವತಿಯಿಂದ ಹಮ್ಮಿಕೊಂಡಿದ್ದ ಕಾವೇರಿಕೂಗು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ರೈತರು ಜಮೀನಿನಲ್ಲಿ ಮರಗಲನ್ನು ನೆಡುವುದರಿಂದ ಬಾರಿ ಆರ್ಥಿಕ ಲಾಭವನ್ನು ಕಂಡುಕೊಳ್ಳವುದರ ಜೊತೆಗೆ ಭೂಮಿ ಫಲವತ್ತತೆ ಕಾಪಾಡಬಹುದಾಗಿದೆ. ಜಮೀನಿನ ಒಂದು ಭಾಗದಲ್ಲಿ ಮರಗಳನ್ನು ನೆಡುವುದರ ಮೂಲಕ ದೊಡ್ಡ ಸಂಪತ್ತನ್ನು ಗಳಿಸಲು ಈ ಕಾರ್ಯಕ್ರಮಸಹಕಾರಿಯಾಗುತ್ತದೆ.
ಸ್ಥಿರವಾದ ಆದಾಯ ಪಡೆಯಲು ಜಮೀನಿನಲ್ಲಿ ಸಸಿಗಳನ್ನು ಅಂತರ ಇಟ್ಟುಕೊಂಡು ಬೆಳೆಯುವುದನ್ನು ರೂಢಿಸಿಕೊಳ್ಳಬೇಕು. ಅರಣ್ಯ ಇಲಾಖೆಯಿಂದ ವಿವಿಧ ಜಾತಿಯ ಗಿಡಗಳನ್ನು ಪ್ರತಿ ಸಸಿಗೆ ೧ ರೂ.ದಿಂದ ೩ರೂ.ಗಳವರೆಗೆ ಇದೆ. ರೈತರು ಪಂಚಾಯಿತಿಯಲ್ಲಿ ಇಂತಿಷ್ಟು ಗಿಡಗಳು ಬೇಕು ಎಂದು ನೊಂದಣಿ ಮಾಡಿಸಿ, ಹಣ ಪಾವತಿಸಿದರೆ, ಸರಕಾರದಿಂದ ಸಸಿಗಳನ್ನು ವಿತರಿಸಲಾಗುತ್ತದೆ. ಮೂರು ವರ್ಷ ರೈತರಿಗೆ ಪ್ರೋತ್ಸಾಹಧನವನ್ನು ನೀಡುತ್ತಿದೆ. ಯಾವ್ಯಾವ ರೈತರು ಆಸಕ್ತರಾಗಿದ್ದಾರೆ ಅವರು ಕೂಡಲೇ ಪಂಚಾಯಿತಿಗೆ ಬಂದು ತಿಳಿಸಬೇಕು ಎಂದು ಹೇಳಿದರು.
ಮಣ್ಣಿನ ಫಲವತ್ತೆತೆ ಹಾನಿ ಮಾಡುವ ಹಾಗೂ ನೀರನ್ನು ಗರಿಷ್ಠ ಪ್ರಮಾಣದಲ್ಲಿ ಹೀರಿಕೊಳ್ಳುವ ಮರಗಳನ್ನು ಕೂಡಲೇ ತೆರವುಗೊಳಿಸಿ ಆ ಜಾಗದಲ್ಲಿ ಆರ್ಥಿಕವಾಗಿ ಲಾಭ ಕಾಣುವಂತಹ ರಕ್ತಚಂದನ, ಸಂಪಿಗೆ, ಹೆಬ್ಬೇವು, ತೇಗ, ಹೊನ್ನೆ, ಹಲಸು, ಬೀಟೆ, ಅರಿಶಿನ ತೇಗ, ಮತ್ತಿ, ಶಿವನೆ, ಮಹಾಗನಿ, ಶ್ರೀಗಂಧ, ನೇರಳೆ ಹೀಗೆ ಹಲವಾರು ಮರಗಳನ್ನು ವಿತರಿಸಲಾಗುತ್ತಿದೆ. ಅದರ ಸದುಪಯೋಗವನ್ನು ಪ್ರತಿ ರೈತರು ಪಡೆದುಕೊಳ್ಳಬೇಕು ಎಂದರು.ಈ ವೇಳೆಯಲ್ಲಿ ಈಶಾ ಫೌಂಡೇಷನ್‌ನ ನವೀನ್, ಗ್ರಾಪಂ ಉಪಾಧ್ಯಕ್ಷೆ ನಿವಿತ.ಆರ್.ಮಂಜುನಾಥ್, ಸದಸ್ಯರಾದ ಲಕ್ಷ್ಮೀಕಾಂತ್, ಕೃಷ್ಣಯ್ಯ, ಎಸ್.ಜಿ.ಮಂಜುನಾಥ್, ನರಸಿಂಹಮೂರ್ತಿ, ನಾಗೇಶ್, ಸೋಮಶೇಖರ್, ಶಾಲಿನಿ, ಪವಿತ್ರ.ಎಸ್, ರಶ್ಮಿ, ಗೌರಮ್ಮ, ಅಂಬರೀಶ್, ವೆಂಕಟಸ್ವಾಮಿ, ವನಜಾಕ್ಷಿ, ಆಶಾ, ನಂದಿನಿ, ನೇತ್ರಾವತಿ, ಅಂಬುಜ.ಸಿ.ಕೃಷ್ಣಪ್ಪ, ವೆಂಕಟೇಶ್, ಮುಖಂಡ ರವಿ, ಪಿಡಿಒ ಆದರ್ಶ್‌ಕುಮಾರ್, ಕಾರ್ಯದರ್ಶಿ ಚಂದ್ರಪ್ಪ, ಗ್ರಾಪಂ ಸಿಬ್ಬಂದಿ, ರೈತರು, ಇದ್ದರು.
Be the first to comment