*ಪರಿಸರ ಉಳಿಸಿದರೆ, ಮನುಕುಲ ಉಳಿಯುತ್ತದೆ : ಶಾಸಕ ಎಲ್.ಎನ್.ನಾರಾಯಣಸ್ವಾಮಿ* *ಅಂತಾರಾಷ್ಟ್ರೀಯ ಜೀವ ವೈವಿದ್ಯ ದಿನಾಚರಣೆ ಅಂಗವಾಗಿ ಕೆರೆಯಲ್ಲಿ ಸ್ವಚ್ಚತಾ ಕಾರ್ಯ*

ವರದಿ: ಹೈದರ್ ಸಾಬ್, ಕುಂದಾಣ

ರಾಜ್ಯ ಸುದ್ದಿಗಳು 

ದೇವನಹಳ್ಳಿ

ಪರಿಸರ ಉಳಿಸಿದರೆ, ಮನುಕುಲ ಉಳಿಯುತ್ತದೆ. ಪರಿಸರ ಸರಂಕ್ಷಿಸುವುದು ಈಗಿನ ಪರಿಸ್ಥಿತಿಯಲ್ಲಿ ಅತ್ಯವಶ್ಯವಾಗಿದೆ. ಪ್ರತಿ ಜನರು ಸಸಿಗಳನ್ನು ನೆಟ್ಟು ಪೋಷಿಸುವ ಕೆಲಸ ಮಾಡಬೇಕು ಎಂದು ಶಾಸಕ ಎಲ್.ಎನ್.ನಾರಾಯಣಸ್ವಾಮಿ ತಿಳಿಸಿದರು.ಪಟ್ಟಣದ ಕೋಟೆ ಬಳಿ ಇರುವ ಸಿಹಿನೀರಿನ ಚಿಕ್ಕಕೆರೆ ಆವರಣದಲ್ಲಿ ಜಿಲ್ಲಾಡಳಿತ, ಪುರಸಭೆ ವತಿಯಿಂದ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಜೀವ ವೈವಿದ್ಯ ದಿನಾಚರಣೆಯ ಅಂಗವಾಗಿ ಹಿರಿಯ ಕೃಷಿಕರಿಗೆ ಅಭಿನಂದಿಸಿ ಅವರು ಮಾತನಾಡಿದರು. ಸರಕಾರಿ ಸ್ಥಳಗಳಲ್ಲಿ, ಕೆರೆ ಅಂಗಳದಲ್ಲಿ, ರಸ್ತೆ ಬದಿಯಲ್ಲಿ ಹೀಗೆ ಹಲವಾರು ಕಡೆಗಳಲ್ಲಿ ಸಸಿಗಳನ್ನು ನೆಟ್ಟು ಪೋಷಿಸಿದರೆ, ಮುಂದೊಂದು ದಿನದಲ್ಲಿ ಸಸಿ ಮರವಾಗಿ ಸಾಕಷ್ಟು ಅನುಕೂಲ ಮಾಡಿಕೊಡುತ್ತದೆ. ಬೆಳೆಯುತ್ತಿರುವ ನಗರದಲ್ಲಿ ಪರಿಸರವನ್ನು ಹಾಳು ಮಾಡುವ ಬದಲಿಗೆ ಹಸಿರೀಕರಣಗೊಳಿಸಿದರೆ ಮನುಕುಲ ಉಳಿವಿಗೆ ಸಹಕಾರಿಯಾಗಲಿದೆ ಎಂದರು.

CHETAN KENDULI

ಪುರಸಭಾ ಅಧ್ಯಕ್ಷೆ ರೇಖಾವೇಣುಗೋಪಾಲ್ ಮಾತನಾಡಿ, ಕೊರೊನಾ ಸಾಂಕ್ರಾಮಿಕ ರೋಗ ಹರಡದಂತೆ ಎಲ್ಲರೂ ಎಷ್ಟು ಜಾಗೃತರಾಗಿದ್ದೇವೆ. ಅಷ್ಟೇ ಜಾಗೃತರಾಗಿ ಪ್ರತಿಯೊಬ್ಬರು ಸಸಿಗಳನ್ನು ನೆಡುವ ಕೆಲಸ ಮಾಡಬೇಕು ಎಂದರು.
ಪುರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ಎಸ್.ನಾಗೇಶ್ ಮಾತನಾಡಿ, ಒಂದು ಮರ ಕಡಿದರೆ, ಹತ್ತು ಸಸಿಗಳನ್ನು ನೆಟ್ಟು ಪೋಷಿಸುವ ಕೆಲಸವಾಗಬೇಕು. ಮುಂದಿನ ಪಿಳೀಗೆಗೆ ನಾವು ಕೊಡುವ ಕೊಡುಗೆ ಶಾಶ್ವತವಾಗಿರಬೇಕು. ಕೆರೆ ಅಂಗಳದಲ್ಲಿ ಬೆಳೆದಿರುವ ಜಾಲಿ ಮರಗಳನ್ನು ತೆರವುಗೊಳಿಸುವ ಕೆಲಸವಾಗಬೇಕು. ನೀಲಗಿರಿ ಮರಗಳನ್ನು ತೆರವುಗೊಳಿಸಿದರೆ ಅಂತರ್ಜಲ ಹೆಚ್ಚಳವಾಗುತ್ತದೆ. ಕೆರೆಯನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು ಎಂದು ಸಲಹೆ ಮಾಡಿದರು.

ಈ ವೇಳೆಯಲ್ಲಿ ಪುರಸಭಾ ಉಪಾಧ್ಯಕ್ಷೆ ಪುಷ್ಪಲತಾಲಕ್ಷ್ಮೀನಾರಾಯಣ್, ಜೆಡಿಎಸ್ ಟೌನ್ ಅಧ್ಯಕ್ಷ ಮುನಿನಂಜಪ್ಪ, ಪ್ರಧಾನ ಕಾರ್ಯದರ್ಶಿ ಸಾಯಿಕುಮಾರ್ ಬಾಬು, ತಾಲೂಕು ಅಧ್ಯಕ್ಷ ಆರ್.ಮುನೇಗೌಡ, ಪುರಸಭಾ ಮುಖ್ಯಾಧಿಕಾರಿ ಎ.ಎಚ್.ನಾಗರಾಜ್, ಸದಸ್ಯರಾದ ಜಿ.ಎ.ರವೀಂದ್ರ, ವೈ.ಆರ್.ರುದ್ರೇಶ್, ಮುನಿಕೃಷ್ಣ, ಶಾಂತಮ್ಮ, ಜೇಸಿಐ ಪದಾಧಿಕಾರಿಗಳಾದ ಆನಂದ್, ನರಸಿಂಹಮೂರ್ತಿ, ಮುಖಂಡ ಬಿ.ಕೆ.ಶಿವಪ್ಪ, ನಾರಾಯಣಸ್ವಾಮಿ(ನಾಣಿ), ಲಕ್ಷ್ಮೀನಾರಾಯಣ್, ರವಿಕುಮಾರ್, ಯುವ ಜೆಡಿಎಸ್ ಅಧ್ಯಕ್ಷ ಆರ್.ಭರತ್, ಪುರಸಭಾ ಸಿಬ್ಬಂದಿಗಳಾದ ತೃಪ್ತಿ, ಗಂಗಾಧರ್, ಶ್ರೀದೇವಿ, ಮಂಜು, ಇತರರು ಇದ್ದರು.

Be the first to comment

Leave a Reply

Your email address will not be published.


*