ತಾಯಿ ಭುವನೇಶ್ವರಿಯ ಸೇವೆ ಮಾಡಲು ನಾನು ಸಿದ್ಧ – ನೆ ಲ ರಾಮ್ ಪ್ರಸಾದ್ ಗೌಡ

ವರದಿ ಹರೀಶ್ ದೊಡ್ಡಬಳ್ಳಾಪುರ

ರಾಜ್ಯ ಸುದ್ದಿಗಳು 

ದೊಡ್ಡಬಳ್ಳಾಪುರ 

ವಿಜಯ ಸೇನೆಯ ಕಾರ್ಮಿಕ ಘಟಕದ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಇಂದು ಬೆಂಗಳೂರಿನ ಗಾಂಧಿನಗರದ ಜಿಯಾನ ಹೋಟಲ್ ನಲ್ಲಿ ನೆರವೇರಿತು.ವಿಜಯ ಸೇನೆಯ ರಾಜ್ಯಾಧ್ಯಕ್ಷರಾದ ದೀಪಕ್ ಎಚ್ ಎನ್ ರವರು ರಾಜ್ಯ ಕಾರ್ಮಿಕ ಘಟಕದ ಅಧ್ಯಕ್ಷರಾಗಿ ನೆ ಲ ರಾಮ್ ಪ್ರಸಾದ್ ಗೌಡ ಅವರನ್ನು ನೇಮಿಸಿದರು ಮತ್ತು ರಾಜ್ಯ ಉಪಾಧ್ಯಕ್ಷರನ್ನಾಗಿ ನವೀನ್ ಗೌಡ ಮಂಜುನಾಥ ಗೌಡ ಮತ್ತು ವಿನಯ್ ಗೌಡ ರವರನ್ನು ನೇಮಿಸಿದರು.

CHETAN KENDULI

ಈ ಸಂದರ್ಭದಲ್ಲಿ ರಾಜ್ಯಾಧ್ಯಕ್ಷರಾದ ದೀಪಕ್ ಹೆಚ್ ಏನ್ ಅವರು ಮಾತನಾಡಿ ಕಾರ್ಮಿಕರ ಕ್ಷೇಮಾಭಿವೃದ್ಧಿಗಾಗಿ ಕಾರ್ಮಿಕ ಘಟಕವನ್ನು ಸ್ಥಾಪಿಸಿದ್ದೇವೆ ಮತ್ತು ಮೇ 1ಕಾರ್ಮಿಕರ ದಿನಾಚರಣೆ ಅಂಗವಾಗಿ ಅರಮನೆ ಮೈದಾನದಲ್ಲಿ ಕಾರ್ಮಿಕ ಘಟಕದ ಉದ್ಘಾಟನೆಯನ್ನು ಮಾಡಲಾಗುವುದು ಎಂದೂ ಹೇಳಿದರು.

 ನೂತನವಾಗಿ ಕರುನಾಡ ವಿಜಯ ಸೇನೆಯ ಕಾರ್ಮಿಕ ಘಟಕದ ಅಧ್ಯಕ್ಷರಾಗಿ ಆಯ್ಕೆಯಾದ ನೆ ಲ ರಾಮ್ ಪ್ರಸಾದ್ ಮಾತನಾಡಿ ಮೇ1ರಂದು ಅರಮನೆ ಮೈದಾನದಲ್ಲಿ ಅದ್ದೂರಿ ಕಾರ್ಯಕ್ರಮದ ಅವಶ್ಯಕತೆ ಇದೆ ಕಾರಣ ಕಾರ್ಮಿಕರು ಎಂದರೆ ಹಲವು ಜನರ ಮನಸ್ಸಿನಲ್ಲಿ ಅಸಡ್ಡೆಯ ಭಾವ ಮೂಡುತ್ತದೆ ಹಾಗಾಗಿ ಕಾರ್ಮಿಕ ದಿನಾಚರಣೆ ಎಂದರೆ ಅದು ಹಬ್ಬ ಹಾಗಾಗಿ ಕರುನಾಡ ವಿಜಯ ಸೇನೆ ಮೇ 1ರಂದು ಕಾರ್ಮಿಕ ದಿನಾಚರಣೆಯನ್ನು ಅದ್ದೂರಿಯಾಗಿ ಆಚರಿಸಲು ನಿರ್ಧರಿಸಿದೆ. ರಾಜ್ಯಧ್ಯಕ್ಷರು ಉತ್ತಮ ಜವಾಬ್ದಾರಿಯನ್ನು ನೀಡಿದ್ದಾರೆ ಪ್ರಾಮಾಣಿಕವಾಗಿ ನಿಷ್ಠಾವಂತನಾಗಿ ಜವಾಬ್ದಾರಿ ನಿರ್ವಹಿಸುತ್ತೇನೆ ತಾಯಿ ಭುವನೇಶ್ವರಿಯ ಸೇವೆ ಮಾಡಲು ಸದಾ ಸಿದ್ಧ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಕರುನಾಡ ವಿಜಯ ಸೇನೆಯ ಎಲ್ಲಾ ಪದಾಧಿಕಾರಿಗಳು ಸದಸ್ಯರು ಉಪಸ್ಥಿತರಿದ್ದರು.

Be the first to comment

Leave a Reply

Your email address will not be published.


*