ಜಿಲ್ಲಾ ಸುದ್ದಿಗಳು
ಮಸ್ಕಿ
ಫೆ.11.ತಾಲೂಕ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಕ್ಷೇತ್ರದ ಶಾಸಕ ಆರ್.ಬಸನಗೌಡ ತುರುವಿಹಾಳ ಅಧ್ಯಕ್ಷತೆಯಲ್ಲಿ ತಾಲೂಕ ಪಂಚಾಯ್ತಿ ಸಭಾಂಗಣದಲ್ಲಿ ಯಶಸ್ವಿಯಾಗಿ ನಡೆಯಿತು. ಮೊದಲಿಗೆ ನಾಡಗೀತೆ ಯೊಂದಿಗೆ ಆರಂಭಗೊಂಡು ನಾಮ ನಿರ್ದೇಶಿತ ಸದಸ್ಯರಿಗೆ ಸನ್ಮಾನ ಮಾಡುವ ಮೂಲಕ ಸಭೆಗೆ ಅಧಿಕೃತವಾಗಿ ಚಾಲನೆ ಮಾಡಿದರು. ವಿವಿಧ ಇಲಾಖೆವಾರು ತಾಲೂಕ ಅಧಿಕಾರಿಗಳ ಬದಲು ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ 60% ನಷ್ಟು ಸಹಾಯಕ ಅಧಿಕಾರಿಗಳು ಬಂದಿರುವ ಬಗ್ಗೆ ಮಾಹಿತಿ ತೆಗೆದುಕೊಂಡು ಸಭೆಗೆ ಬಂದಿದ್ದ ಸಹಾಯಕ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿ ನಿಮ್ಮ ಅಧಿಕಾರಿಗಳು ಯಾವ ಕಾರಣಕ್ಕೆ ಬಂದಿರುವುದಿಲ್ಲ, ಅವರುಗಳಿಗೆ ನೊಟೀಸ್ ತಲೂಪಿಲ್ಲವೇ ಅಥವಾ ಇದೇನು ಕಾಟಾಚಾರದ ಸಭೆ ಎಂದು ತಿಳಿದು ಗೈರಾಗಿದ್ದೀರಾ ಎಂದು ಹೇಳಿ ಕೂಡಲೇ ಬಂದಿರದ ಇಲಾಖೆಯ ಅಧಿಕಾರಿಗಳಿಗೆ ಸೋಕಾಸ್ ನೋಟಿಸ್ ಜಾರಿ ಮಾಡುವಂತೆ ತಾಲೂಕ ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಗೆ ತಿಳಿಸಿದರು.
ನಂತರ ಒಂದೊಂದೇ ಇಲಾಖೆವಾರಿ ಮಾಹಿತಿ ಕೇಳಿ ಪ್ರಗತಿ ಪರಿಶೀಲಿಸಿದರು ಆರೋಗ್ಯ ಇಲಾಖೆಯಲ್ಲಿ ಲಸಿಕೆಯ ವೇಗ ಹೆಚ್ಚಿಸಿ ಅದರಲ್ಲೂ ಮುಖ್ಯವಾಗಿ ಎರಡನೆಯ ಡೋಸ್ ಲಸಿಕೆ ವೇಗವಾಗಿ ನೀಡಿ ಎಂದು ತಾಕೀತು ಮಾಡಿದರು.ಕುಡಿಯುವ ನೀರು ಸರಬರಾಜು ಇಲಾಖೆ ಅಧಿಕಾರಿಗಳಿಂದ ಮಾಹಿತಿ ಪಡೆಯುತ್ತಾ ಜಿನ್ನಪೂರ, ಬೋಗಾಪೂರ ಗ್ರಾಮದಲ್ಲಿ ಕುಡಿಯುವ ನೀರಿನ ಸರಬರಾಜು ಮಾಡುವ ವಿಚಾರವನ್ನು ಚರ್ಚಿಸಿ ಅಧಿಕಾರಿಗೆ ಖಡಕ್ ಎಚ್ಚರಿಕೆ ನೀಡಿ ಆದಷ್ಟು ಬೇಗ ನೀರಿನ ವ್ಯವಸ್ಥೆ ಮಾಡಿ ಹಾಗೆಯೇ ಜೆಜೆಎಂ ಕಾಮಗಾರಿಯ ಮಾಹಿತಿ ಪಡೆದು ಕೆಲಸದ ವೇಗ ಹೆಚ್ಚಿಸಿ ಬೇಗನೆ ಕಾಮಗಾರಿ ಮುಗಿಸುವಂತೆ ತಿಳಿಸಿದರು.
ಸಭೆಯೂ ನಡೆಯುತ್ತಿದ್ದಂತೆಯೇ ಪ್ರೌಢಶಾಲೆ ಮಂಜೂರಾತಿಗೆ ಒತ್ತಾಯಿಸಿ ಬುದ್ಧಿನ್ನಿ, ಹೂವಿನಭಾವಿ, ಮುದಬಾಳ, ಬೆಂಚಮರಡಿ, ಇಲಲಾಪೂರ, ಹರ್ವಾಪೂರ,ಕಾಟಗಲ್ ಗ್ರಾಮಸ್ಥರ ಹೋರಾಟ ಸಮಿತಿಯೊಂದಿಗೆ ಈ ಭಾಗದ 106 ವಿದ್ಯಾರ್ಥಿಗಳು ಬಸ್ ವ್ಯವಸ್ಥೆ ಇಲ್ಲದೆ ಶಿಕ್ಷಣ ವಂಚಿತರಾಗುತ್ತಿದ್ದಾರೆ.ಹಾಗಾಗಿ ಬುದ್ದಿನ್ನಿ ಎಸ್. ಗ್ರಾಮಕ್ಕೆ ಪ್ರೌಢಶಾಲೆ ಮಂಜೂರಾತಿಗಾಗಿ ಸುಮಾರು 4 ವರ್ಷಗಳಿಂದ ಹೋರಾಟ ನಡೆಸುತ್ತಿದ್ದರೂ ಶಿಕ್ಷಣ ಇಲಾಖೆ ಮತ್ತು ಜನಪ್ರತಿನಿಧಿಗಳು ನಿರ್ಲಕ್ಷ್ಯ ತೋರುತ್ತಾ ಬಂದಿದ್ದಾರೆ. ಪ್ರೌಢ ಶಾಲೆ ಮಂಜೂರಾಗದಂತೆ ಮೇಲಾಧಿಕಾರಿಗಳಿಗೆ ತಪ್ಪು ಮಾಹಿತಿ ನೀಡಿದ ಅಧಿಕಾರಿಗಳನ್ನು ಸೇವೆಯಿಂದ ಅಮಾನತು ಮಾಡಬೇಕು. ಈಗಾಗಲೇ ನಿರ್ಮಿಸಿರುವ ಪ್ರೌಢಶಾಲಾ ಕಟ್ಟಡ ಪಾಳು ಬಿದ್ದು ಕಿಡಿಗೇಡಿಗಳಿಂದ ಹಾನಿಗೀಡಾಗಿದ್ದು, ಕಟ್ಟಡಕ್ಕೆ ರಕ್ಷಣೆ ನೀಡಬೇಕು ಎಂದು ಪ್ರತಿಭಟನಾ ನಿರತರು ಆಗ್ರಹಿಸಿದರು.
ಕೆಡಿಪಿ ಸಭೆ ಅರ್ಧದಲ್ಲೇ ಮೊಟಕುಗೊಳಿಸಿ ಬಂದು ವಿದ್ಯಾರ್ಥಿಗಳು. ಗ್ರಾಮಸ್ಥರು ಸಂಘಸಂಸ್ಥೆಗಳ ಮುಖಂಡರನ್ನುದ್ದೇಶಿಸಿ ಮಾತನಾಡಿದ ಶಾಸಕ ಆರ್ ಬಸನಗೌಡ ತುರುವಿಹಾಳ ಅವರು ಪ್ರತಿಭಟನೆಯನ್ನು ತಿಳಿಗೊಳಿಸಲು ಯತ್ನಿಸಿದರು.ಶಾಸಕರು, ಪ್ರತಿಭಟನಾಕಾರರು ಹಾಗೂ ಬಿಇಓ ನಡುವೆ ಕೆಲಕಾಲ ಮಾತಿನ ಚಕಮಕಿ ನಡೆಯಿತು. ಈ ವೇಳೆ ಶಾಸಕರು ಬಿಇಓ ಅವರಿಗೆ ಸಮಸ್ಯೆ ಇತ್ಯರ್ಥಗೊಳಿಸುತ್ತೆವೆಂದು ಲಿಖಿತವಾಗಿ ಬರೆದುಕೊಡಲು ಸೂಚಿಸಿದರು.ಬಿಇಓ ಹುಂಬಣ್ಣ ರಾಥೋಡ್ ಅವರು 2022-23 ನೇ ಶೈಕ್ಷಣಿಕ ವರ್ಷದಲ್ಲಿ 9 ನೇ ತರಗತಿ ಪ್ರಾರಂಭಗೊಳಿಸಲಾಗುವುದು. ಸೋಮವಾರದಿಂದಲೇ ಹೊಸ ಕಟ್ಟಡದಲ್ಲಿ7 ಮತ್ತು 8 ನೇ ತರಗತಿಯವರೆಗೆ ಪ್ರಾರಂಭಿಸಲಾಗುವುದು ಎಂದು ಲಿಖಿತವಾಗಿ ಬರೆದುಕೊಟ್ಟ ನಂತರ ಪ್ರತಿಭಟನೆಯನ್ನು ಕೈಬಿಡಲಾಯಿತು.ಮದ್ಯಾಹ್ನದ ಭೋಜನಕೂಟ ಮುಗಿದ ನಂತರ ಸಭೆಯನ್ನು ಮುಂದುವರೆಸಲಾಯಿತು.
ಇದೇ ಸಂದರ್ಭದಲ್ಲಿಬಾಬು ರಾಥೋಡ್ ಕಾರ್ಯನಿರ್ವಾಹಕ ಅಧಿಕಾರಿ ತಾ. ಪಂ ಮಸ್ಕಿ, ಕವಿತಾ.ಆರ್ ತಹಶೀಲ್ದಾರರು ಮಸ್ಕಿ, ವಿವಿಧ ಇಲಾಖೆಗಳ ಅಧಿಕಾರಿಗಳು, ರಾಜಕೀಯ ಮುಖಂಡರು,ಬುದ್ದಿನ್ನಿ ಎಸ್ ಗ್ರಾಮದ ಎಸ್ಟಿಎಂಸಿ ಅಧ್ಯಕ್ಷ ನಾಗರೆಡ್ಡೆಪ್ಪ ದೇವರಮನಿ, ಎಸ್ಎಫ್‌ಐ ರಾಜ್ಯ ಉಪಾಧ್ಯಕ್ಷ ಶಿವಕುಮಾರ ಮ್ಯಾಗಳಮನಿ, ಜಿಲ್ಲಾಧ್ಯಕ್ಷ ರಮೇಶ ವೀರಾಪೂರು, ಕಾರ್ಮಿಕ ಮುಖಂಡ ಡಿ.ಹೆಚ್ ಕಂಬಳಿ, ಎನ್ನಾರ್ಬಿಸಿ 5ಎ ಹೋರಾಟ ಸಮಿತಿಯ ಗೌರವಾಧ್ಯಕ್ಷ ತಿಮ್ಮನಗೌಡ ಚಿಲ್ಕರಾಗಿ, ಅಧ್ಯಕ್ಷ ಬಸವರಾಜಪ್ಪಗೌಡ ಹರ್ವಾಪೂರು, ದೇವೇಂದ್ರಪ್ಪಗೌಡ ಬುದ್ದಿನ್ನಿ,ಎಐಕೆಎಸ್ ನ ಚಂದ್ರಶೇಖರ್ ಕ್ಯಾತನಟ್ಟಿ, ಕೆಆರ್ ಎಸ್ ನ ಸಂತೋಷ ಹಿರೇದಿನ್ನಿ, ಕಾರ್ಮಿಕ ಮುಖಂಡ ಬಸವರಾಜ್ ಎಕ್ಕಿ, ಎಸ್ಎಫ್‌ಐ ನ ಮಸ್ಕಿ ತಾಲೂಕಾಧ್ಯಕ್ಷ ಬಸವಂತ ಹಿರೇಕಡಬೂರ್, ಬಸವರಾಜ್ ದೀನ ಸಮುದ್ರ ಶರಣಬಸವ, ಅಂಕುಶದೊಡ್ಡಿ ಗ್ರಾಪಂ ಅಧ್ಯಕ್ಷೆ ಚೆನ್ನಬಸಮ್ಮ ಭಜಂತ್ರಿ, ಸೇರಿದಂತೆ ವಿದ್ಯಾರ್ಥಿಗಳು ಸೇರಿದಂತೆ ವಿವಿಧ ಗ್ರಾಮಸ್ತರಿದ್ದರು.
Be the first to comment