ರಾಜ್ಯ ಸುದ್ದಿ
ಜನತೆಗೆ ದಿನಸಿ ಕಿಟ್ ವಿತರಿಸುತ್ತಿರುವ ತಾಲ್ಲೂಕಿನ ಕಾಂಗ್ರೆಸ್ ಗೆ ಅಭಿನಂದನೆಗಳು ತಿಳಿಸಿದರು ನಾಗೇಶ್ ಎ ಕೆ ಪಿತಾಲೂಕಿನ ಕಾಂಗ್ರೆಸ್ ಮುಖಂಡರುಗಳು ಸಾರ್ವಜನಿಕರಿಗೆ ಊಟ ಹಾಗೂ ದಿನಸಿ ಕಿಟ್ ವಿತರಣೆ ಮಾಡುತ್ತಿರುವುದು ಶ್ಲಾಘನೀಯ ಎಂದು ರಾಜ್ಯ ಬಿ.ಜೆ.ಪಿ ಎಸ್.ಸಿ.ಮೋರ್ಚಾ ಖಜಾಂಚಿ ಎಕೆಪಿ ನಾಗೇಶ್ ತಿಳಿಸಿದರು.ಅವರು ಪಟ್ಟಣದಲ್ಲಿ ಕೊರೋನಾ ವಾರಿಯರ್ಸ್, ಆಸ್ಪತ್ರೆ ಸಿಬ್ಬಂದಿ, ರೋಗಿಗಳ ಸಂಬಂಧಿಗಳಿಗೆ ಹೋಳಿಗೆ ಊಟದ ಬಾಕ್ಸ್ ತಯಾರಿ ಮಾಡಿ ಮಾತನಾಡಿ ಕರೋನ ಕಂಟಕದಿಂದ ಉಂಟಾಗಿರುವ ಲಾಕ್ ಡೌನ್ ಪರಿಣಾಮ ಹೋಟೆಲ್‌ಗಳಿಲ್ಲದೇ ಅದೆಷ್ಟೋ ಕೊರೋನಾ ವಾರಿಯರ್‍ಸ್ ಊಟಕ್ಕೆ ಪರಿತಪಿಸುತ್ತಿರುವ ಸಂದರ್ಭದಲ್ಲಿ ಪ್ರತಿನಿತ್ಯ ವಿವಿಧ ಬಗೆಯ ಊಟದ ಪಾಕೆಟ್ ನೀಡುತ್ತಿದ್ದು.
ಲಾಕ್ ಡೌನ್ ಸಮಯದಲ್ಲಿ ಪ್ರತಿನಿತ್ಯ ಉಪಹಾರ ನೀಡುತ್ತಾ ಬಂದಿದ್ದೇವೆ ಬಗೆ ಬಗೆಯ ಆಹಾರಗಳು ನೀಡಿದೆ ಆದರೆಇಂದು ವಿಶೇಷವಾಗಿ ನಮ್ಮ ಮಕ್ಕಳ ತಂದೆ-ತಾಯಿಯರ ಹಾಗೂ ಸ್ನೇಹಿತರ ಒತ್ತಾಸೆಯಂತೆ ಸುಮಾರು 500 ಕ್ಕೂ ಹೆಚ್ಚು ವಾರಿಯರ್‍ಸ್‌ಗಳಿಗೆ ಹೋಳಿಗೆ ಊಟವನ್ನು ನೀಡಲಾಗುತ್ತಿದೆ, ಇದರಲ್ಲಿ ಹೋಳಿಗೆ, ಚಿತ್ರಾನ್ನ ಪಕೋಡ, ಮೂರು ಬಗೆಯ ಪಲ್ಯ ಒಳಗೊಂಡಿದೆ ಎಂದರು.
ದೇವನಹಳ್ಳಿ ತಾಲೂಕಿನ ಪೋಲಿಸ್ ಸಿಬ್ಬಂದಿ, ಸಂಘ ಸಂಸ್ಥೆಗಳು ತಾಲೂಕಿನಾದ್ಯಂತ ಊಟ, ದಿನಸಿಕಿಟ್ ವಿತರಿಸಲಾಗುತ್ತಿದೆ, ತಾಲ್ಲೂಕಿನ ಕಾಂಗ್ರೆಸ್ ಸಮಿತಿ ಊಟ ದಿನಸಿ ವಿತರಿಸುವ ಉತ್ತಮ ಕಾರ್ಯ ಮಾಡುತ್ತಿರುವುದು ಸಂತಸದ ವಿಷಯ, ಜಿಲ್ಲಾ ಉಸ್ತುವಾರಿ ಆರ್.ಅಶೋಕ್ ಹಾಗೂ ಎಂ.ಟಿ.ಬಿ ನಾಗರಾಜ್ ಉತ್ತಮ ಕಾರ್ಯ ನಿರ್ವಹಿಸುತ್ತಿದ್ದಾರೆ, ಜೆಡಿಎಸ್ ಮುಖಂಡರುಗಳು ಇನ್ನೂ ಬಯಲಿಗೆ ಬರದೇ ಸುಮ್ಮನಿದ್ದಾರೆ, ಆದರೆ ಶಾಸಕರು ಉತ್ತಮ ಕೆಲಸ ಮಾಡುತ್ತಿದ್ದಾರೆ ಎಂದರು.
ಇದೇ ಸಂದರ್ಭದಲ್ಲಿ ಎ.ಕೃಷ್ಣಪ್ಪ, ರತ್ನಮ್ಮ, ಸರಸ್ವತಿ, ಯುವ ಮುಖಂಡ ಶ್ರೇಯಸ್, ಶ್ವೇತ, ಶಿಲ್ಪಿ ಹೆಚ್.ಮಧುಸೂಧನ್, ಬಿಜೆಪಿ ಜಿಲ್ಲಾ ಎಸ್.ಸಿ. ಪ್ರ. ಕಾರ್ಯದರ್ಶಿ ಗಣೇಶ್, ಎಸ್.ಟಿ. ಮೋರ್ಚಾದ ಅಮರನಾರಾಯಣ್, ಸೈನಿಕ ವೆಂಕಟೇಶ್, ತಾ|| ಎಸ್.ಸಿ. ಮೋರ್ಚಾ ಪ್ರ.ಕಾರ್ಯದರ್ಶಿ ಸಾಗರ್ ಹಾಜರಿದ್ದರು.
Be the first to comment