ಒಂದು ರೂಪಾಯಿ ಪೆಟ್ರೋಲ್ ಹಾಕುವಂತೆ ಒತ್ತಾಯಿಸಿ ಏ ರವೀಂದ್ರ ನಾಯ್ಕ ನೇತೃತ್ವದಲ್ಲಿ ವಿನೂತನ ಪ್ರತಿಭಟನೆ

ವರದಿ-ಕುಮಾರ್ ನಾಯ್ಕ.ಭಟ್ಕಳ

ಜಿಲ್ಲಾ ಸುದ್ದಿ 

CHETAN KENDULI

ಯಲ್ಲಾಪುರ: ಪೆಟ್ರೋಲ್ ಬೆಲೆ ನೂರರ ಗಡಿ ದಾಟಿರುವ ಹಿನ್ನೆಲೆಯಲ್ಲಿ ಯಲ್ಲಾಪುರ ತಾಲೂಕಿನ ಕಾಂಗ್ರೇಸ್ ಪಕ್ಷದ ಧುರೀಣರು ಪೆಟ್ರೋಲ್ ಬಂಕ್‍ನಲ್ಲಿ ಒಂದು ರೂಪಾಯಿ ನಾಣ್ಯ ಪ್ರದರ್ಶಿಸುತ್ತ ಒಂದು ರೂಪಾಯಿ ಪೆಟ್ರೋಲ್ ಹಾಕುವಂತೆ ಒತ್ತಾಯಿಸಿ ಕೇಂದ್ರ ಸರಕಾರದ ಇಂಧನ ಬೆಲೆ ಏರಿಕೆಯ ವಿರುದ್ಧ ವಿನೂತನ ರೀತಿಯ ಪ್ರತಿಭಟನೆಯ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.ಕೆಪಿಸಿಸಿ ನಿರ್ದೇಶನದಂತೆ ರಾಜ್ಯವ್ಯಾಪಿ ತಾಲೂಕಾ ಕೇಂದ್ರದಲ್ಲಿ ಹಮ್ಮಿಕೊಂಡ ಪೆಟ್ರೋಲ್ 100 – ನಾಟೌಟ ಎಂಬ ಕೇಂದ್ರ ಸರಕಾರದ ಬೆಲೆ ಏರಿಕೆ ವಿರೋಧಿ ನೀತಿಯನ್ನು ಖಂಡಿಸುವ ಸಲುವಾಗಿ ತಾಲೂಕಾ ಕಾಂಗ್ರೇಸ್ ಸಮಿತಿಯ ಆಶ್ರಯದಲಿ,್ಲ ಸ್ಥಳೀಯ ಕಾಮಾಕ್ಷೀ ಪೆಟ್ರೋಲ್ ಬಂಕ್ ಆವರಣದಲ್ಲಿ ಜಿಲ್ಲಾ ವೀಕ್ಷಕ ಏ ರವೀಂದ್ರ ನಾಯ್ಕ ನೇತ್ರತ್ವದಲ್ಲಿ ಪ್ರತಿಭಟನೆ ಜರುಗಿದವು.

ಕೋರೋನಾ ಲಾಕ್‍ಡೌನ್‍ನಿಂದ ಆರ್ಥೀಕ ಸಮಸ್ಯೆ ಎದುರಾದ ಸಂದರ್ಭದಲ್ಲಿ ಇಂಧನ ಬೆಲೆ ಹೆಚ್ಚಿಸುತ್ತಿರುವುದು ಹಾಗೇ ಇಂತಹ ಸಂಕಷ್ಟದ ಸಮಯದಲ್ಲಿ ಕೇಂದ್ರ ಸರಕಾರ ಜನರ ಜೀವನದ ಜೊತೆ ಚೆಲ್ಲಾಟ ಆಡುತ್ತಿರುವ ಕ್ರಮಕ್ಕೆ ಸಭೆಯಲ್ಲಿ ಖಂಡಿಸಲಾಯಿತು.ಸಭೆಯನ್ನು ಉದ್ದೇಶಿಸಿ ಮಾಜಿ ಬ್ಲಾಕ್ ಅಧ್ಯಕ್ಷ ಎನ್.ಕೆ ಭಟ್ಟ ಮಾತನಾಡಿದರು. ಪ್ರಶಾಂತ ಸಭಾಯಿತ ಸ್ವಾಗತಿಸಿ ವಂದಿಸಿದರು. ಕಾರ್ಯಕ್ರಮದಲ್ಲಿ ಮಹಿಳಾ ಕ್ರಾಂಗ್ರೇಸ್ ಅಧ್ಯಕ್ಷೆ ಪೂಜಾ ನೇತ್ರೆಕರ, ವಿವಿಧ ಘಟಕದ ಅಧ್ಯಕ್ಷರಾದ ರಾಘು ನಾಯ್ಕ ಇಡಗುಂದಿ, ವಾಸುದೇವ ಶೇಟ ಕುಂದರಗಿ, ಶೇಖರ್ ಸಿದ್ಧಿ ಹಿತ್ಲಳ್ಳಿ, ಇಂದಿರಾಗಾಂಧಿ ಪ್ರಿಯದರ್ಶಿನಿ ಜನರಲ್ ಸೆಕ್ರೆಟರಿ ಸರಸ್ವತಿ ಗುನಗ, ಬ್ಲಾಕ್ ಪ್ರಧಾನ ಕಾರ್ಯದರ್ಶಿ ಅನಿಲ ಮರಾಠೆ, ರಾಮೇಜಾ ಶೇಖ್, ಪಟ್ಟಣ ಪಂಚಾಯಿತ ಸದಸ್ಯ ಕೈಸರಿ ಸೈಯದ್, ಪ್ರಸನ್ನ ನಾಯ್ಕ, ಕಿಸಾನ್ ಘಟಕ ಅಧ್ಯಕ್ಷ ಅಣ್ಣ್ಪಪ ನಾಯ್ಕ, ನರಸಿಂಹ ಗಣಪುಮನೆ, ಇಂದಿರಾಗಾಂಧಿ ಪ್ರಿಯದರ್ಶಿನಿ ಧುರೀಣಿ ಮೊಷರತ್ ಶೇಖ್ ಮುಂತಾದವರು ಭಾಗವಹಿಸಿದ್ದರು.

ತೆರಿಗೆ ಶೇ. 260:
ಮೂಲ ಬೆಲೆಗೆ ಶೇ. 260 ರಷ್ಟು ಕೇಂದ್ರ ಮತ್ತು ರಾಜ್ಯ ಸರಕಾರ ತೆರಿಗೆ ನಿಗದಿಗೊಳಿಸಿರುವದೇ ಪೆಟ್ರೋಲ್ ಬೆಲೆ ಪ್ರತಿ ಲೀಟರ್ ಗೆ ರೂ. ನೂರು ದಾಟಲು ಕಾರಣ. ಹಿಂದಿನ ಫೇಬ್ರವರಿಯಿಂದ ಇಂದಿನವರೆಗೆ 21 ಸಾರೇ ಇಂಧನ ಬೆಲೆ ಏರಿಸಿ ಸರಕಾರದ ಬೊಕ್ಕಸಕ್ಕೆ 21 ಲಕ್ಷ 60 ಸಾವಿರ ಕೋಟಿ ಸಂಗ್ರಹಿಸಿದ್ದು ಅವೈಜ್ಞಾನಿಕ ಕ್ರಮ ಎಂದು ಜಿಲ್ಲಾ ವೀಕ್ಷಕ ಏ ರವೀಂದ್ರ ನಾಯ್ಕ ಕೇಂದ್ರ ಸರಕಾರದ ಕ್ರಮ ಖಂಡಿಸಿದರು.

Be the first to comment

Leave a Reply

Your email address will not be published.


*