ರಾಜ್ಯ ಸುದ್ದಿಗಳು
ದೇವನಹಳ್ಳಿ
ಕರಾಟೆ ವಿದ್ಯೆ ಸ್ವಯಂ ರಕ್ಷಣೆಯ ಒಂದು ಕಲೆಯಾಗಿದೆ. ಶಾಲಾ ಹಂತದಲ್ಲಿಯೇ ವಿದ್ಯಾರ್ಥಿಗಳು ಇಂತಹ ಕಲೆಗಳನ್ನು ಮುಖ್ಯವಾಗಿ ಹೆಣ್ಣುಮಕ್ಕಳು ಈ ವಿದ್ಯೆಯನ್ನು ಮೈಗೂಡಿಸಿಕೊಳ್ಳಬೇಕು ಎಂದು ಕರಾಟೆ ಶಿಕ್ಷಕ ಎಂ.ಎನ್.ಗೋಪಾಲಕೃಷ್ಣ ಯಾದವ್ ತಿಳಿಸಿದರು.ದೇವನಹಳ್ಳಿ ತಾಲೂಕಿನ ಇಲತೊರೆ ಗ್ರಾಮದಲ್ಲಿ ಇತ್ತಿಚೆಗೆ ನಡೆದ ೫ದಿನದ ಅಂತಾರಾಷ್ಟ್ರೀಯ ಕರಾಟೆ ಚಾಂಪಿಯನ್ ಶಿಪ್ (ಆನ್‌ಲೈನ್) ಪಂದ್ಯಾವಳಿಯಲ್ಲಿ ಸ್ಪರ್ಧಿಸಿ ವಿಜೇತರಾಗಿರುವ ಶಾಲಾ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿ ಅವರು ಮಾತನಾಡಿದರು. ಇಲತೊರೆ ಗ್ರಾಮದ ವಿದ್ಯಾರ್ಥಿಗಳು ಅಂತಾರಾಷ್ಟ್ರೀಯ ಕರಾಟೆ ಚಾಂಪಿಯನ್ ಶಿಪ್ ಪಂದ್ಯಾವಳಿಯಲ್ಲಿ ನೊಂದಾಯಿಸಿಕೊಂಡು ಉತ್ತಮ ಕರಾಟೆ ಪ್ರದರ್ಶನವನ್ನು ನೀಡುವುದರ ಮೂಲಕ ಬಹುಮಾನ ಪಡೆದುಕೊಂಡಿರುವುದು ಇಡೀ ತಾಲೂಕಿಗೆ ಹಾಗೂ ಮಾತೃವಿದ್ಯಾನಿಕೇತನ ಶಾಲೆಗೆ ಕೀರ್ತಿಯನ್ನು ತಂದುಕೊಟ್ಟಿರುತ್ತದೆ. ವಿದ್ಯಾರ್ಥಿಗಳಾದ ಸ್ವೀಕೃತಿಗೌಡ ಹಾಗೂ ನಿಖಿತ್‌ಗೌಡ ಪ್ರಥಮ ಬಹುಮಾನ, ಗೌತಮ್, ಶರಣ್ ದ್ವಿತೀಯ ಬಹುಮಾನ ಮತ್ತು ಪ್ರಜ್ವಲ್‌ಗೌಡ, ಯುಕ್ತಿ.ಕೆ.ಗೌಡ, ಪ್ರತೀಕ್ ತೃತೀಯ ಬಹುಮಾನಗಳನ್ನು ಪಡೆದುಕೊಂಡಿರುತ್ತಾರೆ. ಪ್ರತಿಯೊಬ್ಬ ವಿದ್ಯಾರ್ಥಿಗಳು ಕರಾಟೆ ಕ್ರೀಡಾ ಸ್ಪರ್ಧೆಗಳಲ್ಲಿ ಭಾಗವಹಿಸಿ ತಮ್ಮ ಪ್ರತಿಭೆಯನ್ನು ಹೊರಹಾಕಲು ಶಾಲೆಯಿಂದ ಹೆಚ್ಚಿನ ಪ್ರೋತ್ಸಾಹ ನೀಡಲಾಗುತ್ತಿದೆ ಎಂದು ಹೇಳಿದರು. ಈವೇಳೆ ಗ್ರಾಮಸ್ಥರಾದ ಚನ್ನಕೇಶವ ಮುನೇಗೌಡ, ಕಿಶೋರ್, ಮೂರ್ತಿ, ಮುನಿರಾಜು, ಮಂಜುನಾಥ್ ಹಾಗೂ ಮಹೇಶ್ ಮತ್ತಿತರರು ಇದ್ದರು.
Be the first to comment