ಕೆ.ಪಿ.ಸಿ.ಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಕೆಯನ್ನು ಖಂಡಿಸಿ ಸೈಕಲ್ ಜಾಥಾ ಪ್ರತಿಭಟನೆ.

ವರದಿ : ಸ್ಪೂರ್ತಿ ಎನ್ ಶೇಟ್

ಜಿಲ್ಲಾ ಸುದ್ದಿ 

CHETAN KENDULI

ಹೊನ್ನಾವರ : ಕೇಂದ್ರ ಸರಕಾರದ ಜನವಿರೋಧಿ ನೀತಿ ಮತ್ತು ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಕೆಯನ್ನು ಖಂಡಿಸಿ ಶಿರಸಿಯಲ್ಲಿ ಉತ್ತರ ಕನ್ನಡ ಜಿಲ್ಲಾ ಕಾಂಗ್ರೆಸ್ ಹಮ್ಮಿಕೊಂಡಿರುವ ಸೈಕಲ್ ಜಾಥಾ ಪ್ರತಿಭಟನೆಯಲ್ಲಿ ಬುಧವಾರ ಪಾಲ್ಗೊಳ್ಳಲಾಗಿದ್ದು,ಉಡುಪಿಯಿಂದ ಹೊನ್ನಾವರ ಮಾರ್ಗದಲ್ಲಿ ತೆರಳುತ್ತಿರುವ ಸಂದರ್ಭದಲ್ಲಿ ನಗರದ ಶರಾವತಿ ಸರ್ಕಲ್ ಬಳಿ ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಶ ಎನ್ ಕೆಂಗೇರಿ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಭವ್ಯ ಸ್ವಾಗತ ನೀಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ರವಿ ಶೆಟ್ಟಿ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪ ಮಹೇಶ್, ಯುವ ಕಾಂಗ್ರೆಸ್ ಅಧ್ಯಕ್ಷ ಸಂದೇಶ ಶೆಟ್ಟಿ, ಇಂಟೆಕ್ ಅಧ್ಯಕ್ಷ ಆಗ್ನೇಯ ಡಯಾಸ್, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಜಕ್ರಿಯ ಶೇಖ್, ಸೇವಾದಳ ಅಧ್ಯಕ್ಷ ಸಂತೋಷ ಮೇಸ್ತ, ಪಕ್ಷದ ಮುಖಂಡರಾದ ದಾಮೋದರ ನಾಯ್ಕ್,ಬಾಲಚಂದ್ರ ನಾಯ್ಕ, ಹನೀಫ್ ಶೇಖ್, ಚಂದ್ರಶೇಖರ್ ಚರೋಡಿ, ಉದಯ ಮೇಸ್ತ, ಕೃಷ್ಣ ಹರಿಜನ್, ನೆಲ್ಸನ್ ರೋಡ್ರಗಿಸ್, ಜೋಸೆಫ್ ಡಿಸೋಜಾ, ಗಜು ನಾಯ್ಕ, ಮಂಜು ಖಾರ್ವಿ, ಕೃಷ್ಣ ಮಾರಿ ಮನೆ,ನೂರಾರು ಕಾರ್ಯಕರ್ತರು ಪಾಲ್ಗೊಂಡು ಕೆ.ಪಿ.ಸಿ.ಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರಿಗೆ ಸ್ವಾಗತಿಸಲಾಯಿತು.

Be the first to comment

Leave a Reply

Your email address will not be published.


*