ಕರ್ನಾಟಕ ರಣಧೀರ ವೇದಿಕೆಯ ರಾಜ್ಯಾಧ್ಯಕ್ಷರಾದ ಶಂಕರ್ ಗೌಡ್ರು ಕೆ.ಆರ್ ರವರು ಸಂಸ್ಕೃತ ವಿಶ್ವವಿದ್ಯಾನಿಲಯದ ಅಗತ್ಯ ಏನು ಇಲ್ಲ ಎಂದು ಗುಡುಗಿದರು 

ವರದಿ-ಕುಮಾರ್ ನಾಯ್ಕ ,ಉಪ ಸಂಪಾದಕರು

ರಾಜ್ಯ ಸುದ್ದಿಗಳು 

ಮಂಗಳೂರು

ಕರ್ನಾಟಕ ರಣಧೀರರ ವೇದಿಕೆ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಶಂಕರ್ ಗೌಡ್ರು ಕೆ.ಆರ್ ರವರು ಸರ್ಕಾರ ಸ್ಥಾಪಿಸುತ್ತಿರುವ ಸಂಸ್ಕೃತ ವಿಶ್ವವಿದ್ಯಾನಿಲಯದ ಕುರಿತು ನಮ್ಮ ಮಾಧ್ಯಮಕ್ಕೆ/ ಪತ್ರಿಕೆಗೆ ಈ ರೀತಿಯ ಹೇಳಿಕೆ ನೀಡಿದರು ಕರ್ನಾಟಕದಲ್ಲಿ ಹಿಂದೆಂದೂ ಕಾಣದ ಮಟ್ಟಿಗೆ ಕನ್ನಡ ವಿರೋಧಿ ಆಡಳಿತ ನಡೆಯುತ್ತಿರುವುದು ಖಂಡನೀಯ ವಾದಂತಹ ವಿಚಾರ, ತಮ್ಮ ಗೆಲುವಿನ ಮತಗಳಿಗಾಗಿ ರಾಜಕಾರಣ ಮಾಡುತ್ತಿರುವುದು ಸಮಾಜಕ್ಕೆ ಮಾರಕವಾದ ಅಂತಹ ವಿಚಾರವಾಗಿದೆ, 6.5 ಕೋಟಿ ಜನರಿಗೆ ಇರುವುದೊಂದೆ ಹಂಪಿ ವಿಶ್ವವಿದ್ಯಾನಿಲಯ ಅಂತಹ ವಿಶ್ವವಿದ್ಯಾನಿಲಯಕ್ಕೆ ನಿರ್ವಹಣೆ ಮಾಡಲು 2 ಕೋಟಿ ಕೊಡಲು ಕರ್ನಾಟಕ ಸರ್ಕಾರದ ಬಳಿ ಹಣವಿಲ್ಲ ಆದರೆ ಒಕ್ಕೂಟ ಭಾರತದ್ಯಾಂತ 24000 ಜನ ಇರುವ ಸಂಸ್ಕೃತಕ್ಕೆ ಈಗಾಗಲೇ 18 ವಿಶ್ವವಿದ್ಯಾನಿಲಯಗಳಿಂದ ಅದರ ಜೊತೆಗೆ ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ ತಿಪ್ಪಸಂದ್ರ ಹೋಬಳಿಯಲ್ಲಿ 356 ಕೋಟಿ ಅನುದಾನದ ಅಡಿಯಲ್ಲಿ ಸಂಸ್ಕೃತ ವಿಶ್ವವಿದ್ಯಾನಿಲಯವನ್ನು ಬಸವರಾಜ್ ಬೊಮ್ಮಾಯಿ ರವರ ನೇತೃತ್ವದ ಕರ್ನಾಟಕ ರಾಜ್ಯ ಸರ್ಕಾರ ಶಂಕುಸ್ಥಾಪನೆ ಮಾಡಿರುವುದು ಕನ್ನಡಿಗರಿಗೆ ಕರ್ನಾಟಕಕ್ಕೆ ಮಾಡಿರುವಂತಹ ಬಹುದೊಡ್ಡ ಮೋಸವಾಗಿದೆ, ಸಂಸ್ಕೃತ ಕಲಿಯುವುದರಿಂದ ನಮಗೆ ಯಾವುದೇ ರೀತಿಯ ಉದ್ಯೋಗಗಳು ಲಭಿಸುವುದಿಲ್ಲ, ಈ ಸಾಮಾನ್ಯ ಜ್ಞಾನವಿಲ್ಲದ ಸಚಿವರುಗಳಿಗೆ ಮುಖ್ಯಮಂತ್ರಿಗೆ ಸರ್ಕಾರ ನಡೆಸಲು ಯೋಗ್ಯತೆ ಇಲ್ಲ, ಜನರು ಜೀವನ ನಡೆಸಲು ಬೇಕಾದ ವೈದ್ಯಕೀಯ,ಕೃಷಿ, ತಾಂತ್ರಿಕ, ತಂತ್ರಜ್ಞಾನ,ವಿಜ್ಞಾನ, ಕಲೆ, ಕ್ರೀಡೆ, ಕರಕುಶಲತೆ ಇನ್ನಿತರ ಅನುಕೂಲ ಪದವಿಯ ವಿದ್ಯಾಭ್ಯಾಸ ಪಡೆಯಲು ವಿಶ್ವವಿದ್ಯಾನಿಲಯವನ್ನು ಸ್ಥಾಪಿಸಬೇಕಾದದ್ದು ಸರ್ಕಾರದ ಆದ್ಯ ಕರ್ತವ್ಯವಾಗಿರುತ್ತದೆ ಆದರೆ ಅದನ್ನು ಹೊರತುಪಡಿಸಿ ಅಗತ್ಯವಿಲ್ಲದ ಸಂಸ್ಕೃತ ವಿಶ್ವವಿದ್ಯಾನಿಲಯವನ್ನು ಮಾಡಲು ಹೊರಟಿರುವುದು ಸರ್ಕಾರದ ಮೂರ್ಖತನ ವಾಗಿರುತ್ತದೆ, ಇಂತಹ ಮೂರ್ಖತನದ ಕೆಲಸಕ್ಕೆ ಈಗಿನ ಸರ್ಕಾರವಲ್ಲದೆ ಈ ಹಿಂದೆ ಇದ್ದ ಸಿದ್ದರಾಮಯ್ಯನವರ ನೇತೃತ್ವದ ಕರ್ನಾಟಕ ರಾಜ್ಯ ಸರ್ಕಾರವು 2013-2014 ರ ಸಾಲಿನಲ್ಲಿ ಸಂಸ್ಕೃತ ವಿಶ್ವವಿದ್ಯಾನಿಲಯಕ್ಕೆ 100 ಎಕರೆ ಜಮೀನನ್ನು ಮಂಜೂರು ಮಾಡಿರುವುದು ನಾವುಗಳು ಮರೆಯುವಂತಿಲ್ಲ, ಬಿಜೆಪಿ ಹಾಗೂ ಕಾಂಗ್ರೆಸ್ ಹಾಗೂ ಇನ್ನಿತರ ರಾಷ್ಟ್ರೀಯ ಪಕ್ಷಗಳು ನಮ್ಮ ಕನ್ನಡದ ಹಾಗೂ ಕರ್ನಾಟಕದ ಅಸ್ಮಿತೆಗೆ ಮಾರಕವಾಗಿದೆ ಎಂದು ನಾವು ಮನವರಿಕೆ ಮಾಡಿಕೊಳ್ಳಬೇಕಾಗಿದೆ, ನಾನು ಕನ್ನಡಿಗರ ಪರ ಎಂದು ಹೇಳಿಕೊಳ್ಳುವ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಸಂಸ್ಕೃತ ವಿಶ್ವವಿದ್ಯಾನಿಲಯಕ್ಕೆ 100 ಎಕರೆ ಜಮೀನನ್ನು ಮಂಜೂರು ಮಾಡಿರುವುದು ಕನ್ನಡದ ವಿರೋಧಿತನ ನಡೆಯಾಗಿದೆ, ಈ ಕೂಡಲೇ ಈಗಿನ ಬಸವರಾಜ ಬೊಮ್ಮಾಯಿ ರವರ ನೇತೃತ್ವದ ಕರ್ನಾಟಕ ರಾಜ್ಯ ಸರ್ಕಾರ ಸಂಸ್ಕೃತ ವಿಶ್ವವಿದ್ಯಾನಿಲಯದ ವಿಚಾರವನ್ನು ಕೈಬಿಟ್ಟು ಅದೇ ಜಮೀನಿನಲ್ಲಿ ಅದೇ 350 ಕೋಟಿ ವೆಚ್ಚದಲ್ಲಿ ಅನುದಾನದಲ್ಲಿ ನಮ್ಮ ಕನ್ನಡಮ್ಮನ ಮಕ್ಕಳಿಗೆ ಬೇಕಾದ ವೈದ್ಯಕೀಯ, ತಂತ್ರಜ್ಞಾನ, ವಿಜ್ಞಾನ, ಕೃಷಿ,ಕ್ರೀಡೆ ಇನ್ನಿತರ ವಿಶ್ವವಿದ್ಯಾನಿಲಯಗಳನ್ನು ಸ್ಥಾಪಿಸಿ ಕನ್ನಡಿಗರ ಭವಿಷ್ಯ ರೂಪಿಸುವ ಕೆಲಸಕ್ಕೆ ಮುಂದಾಗಬೇಕೆಂದು ಆಗ್ರಹಿಸುತ್ತೇವೆ ಅಲ್ಲದೆ ಈಗಾಗಲೇ ಕರ್ನಾಟಕ ರಣಧೀರರ ವೇದಿಕೆಯು ನಮ್ಮ ನೆಲ ನಮ್ಮ ಭಾಷೆ ಎಂಬ ಅಭಿಯಾನದ ಅಡಿಯಲ್ಲಿ ಹೋರಾಟವನ್ನ ರೂಪಿಸಿದ್ದು, ಸಂಸ್ಕೃತ ವಿಶ್ವವಿದ್ಯಾನಿಲಯವನ್ನು ಕೈಬಿಟ್ಟು ಕನ್ನಡಿಗರ ವಿದ್ಯೆ ಉದ್ಯೋಗಕ್ಕೆ ಸೂಕ್ತವಾದ ವಿಶ್ವವಿದ್ಯಾನಿಲಯಗಳನ್ನು ಸ್ಥಾಪಿಸದೆ ಹೋದಲ್ಲಿ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಬೃಹತ್ ಮಟ್ಟದ ಹೋರಾಟವನ್ನು ಕರ್ನಾಟಕ ರಣಧೀರರ ವೇದಿಕೆ ಮಾಡುತ್ತದೆ ಸರ್ಕಾರಕ್ಕೆ ಎಚ್ಚರಿಕೆಯನ್ನು ನೀಡಿದರು.

CHETAN KENDULI

Be the first to comment

Leave a Reply

Your email address will not be published.


*