ಅಂಬಿಗ್ ಫಲಶೃತಿ: ಕೂಡ್ಲಿಗಿ ಗ್ರಾಮಸ್ಥರಿಗೆ ಶಾಸಕ ಎನ್.ವೈ.ಗೋಪಾಲಕೃಷ್ಣ ಸ್ಪಂದನೆ

ವರದಿ : ವಿ.ಜಿ.ವೃಷಭೇಂದ್ರ ಕೂಡ್ಲಿಗಿ

ರಾಜ್ಯ ಸುದ್ದಿಗಳು

ವಿಜಯನಗರ:

CHETAN KENDULI

ಜಿಲ್ಲೆಯ ಕೂಡ್ಲಿಗಿ ಪಟ್ಟಣದ 15ನೇವಾರ್ಡ್ ನಿವಾಸಿಗಳ ಕೋರಿಕೆಯಂತೆ, “ಶಾಸಕರೇ ಇತ್ತ ಗಮನಿಸಿ” ತಲೆ ಬರಹದಡಿ ಅಂಬಿಗ್ಪ್ರ ನ್ಯೂಸ್ಸಾ ಪ್ರಸಾರಿಸಿದ್ದ ವರದಿಗೆ ಶಾಸಕ ಎನ್.ವೈ.ಗೋಪಾಲಕೃಷ್ಣ ರವರು ಸ್ಪಂಧಿಸಿ, 15ನೇವಾರ್ಡ್ ನ ನಾಗರೀಕರು ಶಾಸಕರ ಸ್ಪಂದನೆಗೆ ಜನಪರ ಕಾಳಜಿಗರ ನಾಗರೀಕರು ಕೃತಜ್ಞತೆಗಳನ್ನ ಅರ್ಪಿಸಿದ್ದಾರೆ.


                     ಅಂಬಿಗ್ ನ್ಯೂಸ್ ಪ್ರಕಟಿಸಿದ ವರದಿ

ಪಟ್ಟಣದ 15ನೇ ವಾರ್ಡ್ಗೆ ಶಾಸಕರ ಆಪ್ತ ಸಾಹಾಯಕ ಶ್ರೀಕಾಂತರ ಮತ್ತು ಮುಖ್ಯಾಧಿಕಾರಿ ನೇತೃತ್ವದಲ್ಲಿ ಕೆಲ ಜನಪ್ರತಿನಿಧಿಗಳು ಹಾಗೂ ಮುಖಂಡರ ತಂಡ ಸ್ಥಳಕ್ಕೆ ಬೆಟ್ಟಿ ನೀಡಿ ಪರಿಶೀಲಿಸಿದ್ದಾರೆ. ಜನಪ್ರತಿನಿಧಿಗಳು ಪಪಂ ಮುಖ್ಯಾಧಿಕಾರಿ ಜೊತೆ ಚರ್ಚಿಸಿ ಸಮಸ್ಯೆಗೆ ಖಾಯಂ ಪರಿಹಾರ ಕಂಡುಕೊಳ್ಳುವ ಪ್ರಯತ್ನ ನಡೆಸಿದ್ದಾರೆ.



ತುರ್ತಾಗಿ ಚರಂಡಿ ನೀರು ಹರಿದು ಹೋಗುವಂತೆ ತಾತ್ಕಾಲಿಕ ಪರಿಹಾರ ಕ್ರಮ ನಾಳೆ ಕೈಗೊಳ್ಳಲಾಗುವುದು, ಮತ್ತು ಶೀಘ್ರವೇ ಚರಂಡಿ ಸ್ವಚ್ಛಗೊಳಿಸುವಂತೆ ಕ್ರಮಕೈಗೊಳ್ಳಲು ನಿರ್ಧರಿಸಲಾಯಿತು. ಈಗಿರುವ ಸಾಮೂಹಿಕ ಮಹಿಳಾ ಶೌಚಾಲಯವನ್ನು ಕೆಲದಿನಳಲ್ಲಿ ತೆರವುಗೊಳಿಸಲಾಗುವುದು, ಅದೇ ಸ್ಥಳದಲ್ಲಿ ಸಾರ್ವಜನಿಕ ಗ್ರಂಥಾಲಯ ಹಾಗೂ ಎರೆಡು ಅಂಗನವಾಡಿ ಕೇಂದ್ರಗಳಿಗೆ ಕಟ್ಟಡಗಳನ್ನು ನಿರ್ಮಿಸಲಾಗುವುದು.

ಪಟ್ಟಣದ ಜನವಸತಿಯಿಂದ ಅನತಿ ದೂರದಲ್ಲಿರುವ ಈಗಗಲೇ ಬಳೆಕೆಯಲ್ಲಿರುವ ಮಹಿಳಾ ಸಾಮೂಹಿಕ ಶೌಚಾಲಯವನ್ನು, ಮೂಲಭೂತ ಹಾಗೂ ಅಗತ್ಯ ಹೆಚ್ಚುವರಿ ಸೌಕರ್ಯಗಳನ್ನ ಒದಗಿಸಿ ಅಭಿವೃದ್ಧಿಗೊಳಿಸಲು ಶಾಸಕರ ನಿರ್ದೇಶನದಂತೆ ಯೋಜನೆಗಳನ್ನ ರೂಪಿಸಲಾಗಿದೆ.

ಈ ಯೋಜನೆಗಳನ್ನು ಶೀಘ್ರದಲ್ಲಿಯೇ ಕಾರ್ಯರೂಪಕ್ಕೆ ಕಾರಣ ನಾಗರೀಕರು ಸ್ಪಂಧಿಸಬೇಕೆಂದು ಜನಪ್ರತಿನಿಧಿಗಳು ಸಾರ್ವಜನಿಕರಲ್ಲಿ ಕೋರಿದರು. ಕೋವಿಡ್ 2ನೇ ಅಲೆಯಿದ್ದು,ಕೋವಿಡ್ ನಿಯಮಗಳನ್ನ ಎಲ್ಲರೂ ಪಾಲಿಸುವಂತೆ ಹಾಗೂ ನೈರ್ಮಲ್ಯತೆಗೆ ಆಧ್ಯತೆ ನೀಡಬೇಕೆಂದು. ಪಪಂ ಸದಸ್ಯರು ಹಾಗೂ ಮುಖ್ಯಾಧಿಕಾರಿ ಈ ಮೂಲಕ ನಾಗರೀಕರಲ್ಲಿ ಜಾಗೃತಿ ಮೂಡಿಸಿದರು.

ಪಪಂ ಅಧ್ಯಕ್ಷೆ ಎಮ್.ಶಾರದಾಬಾಯಿ, ಉಪಾಧ್ಯಕ್ಷೆ  ಊರಮ್ಮ, ಸದಸ್ಯರಾದ ರೇಣುಕಮ್ಮ, ಸರಸ್ವತಿ, ಕಾಲ್ಚೆಟ್ಟಿ ಈಶಪ್ಪ, ಸಿರಿಬಿ ಮಂಜುನಾಥ, ಪಿ.ಚಂದ್ರಶೇಖರ, ಕೆ.ಹೆಚ್ಎಮ್.ಸಚಿನ್ ಕುಮಾರ, ದಲಿತ ಮುಖಂಡ ಎಸ್.ದುರುಗೇಶ, ರಮೇಶ, ವಾಲ್ಮಿಕಿ ಮುಖಂಡರಾದ ಬಿ.ಭೀಮೇಶ, ಕೊಂಡಯ್ಯನವರ ರಾಘವೇಂದ್ರ ಸೇರಿದಂತೆ ವಿವಿದ ಮುಖಂಡರು ಹಾಗೂ15ನೇ ವಾರ್ಡ್ ನಾಗರೀಕರು ಉಪಸ್ಥಿತರಿದ್ದರು.

Be the first to comment

Leave a Reply

Your email address will not be published.


*