ಜಿಲ್ಲಾ ಸುದ್ದಿಗಳು
ಮುದ್ದೇಬಿಹಾಳ:
ನಾನು ಚುನಾವಣೆಯಲ್ಲಿ ಮಾತ್ರ ರಾಜಕೀಯ ಮಾಡುತ್ತೇನೆ. ನಂತರ ಯಾವುದೇ ಪಕ್ಷಬೇದ, ಜಾತಿ ಬೇದ ಮಾಡುವುದಿಲ್ಲ. ಚುನಾವಣೆಯ ನಂತರ ಎಲ್ಲರೂ ನಮ್ಮವರೇ ಎಂದೇ ನಾನಿದ್ದೇನೆ. ಹಿಂದಿನ ನನ್ನ ೧೦ ವರ್ಷದ ರಾಜಕೀಯವನ್ನೂ ನಾನು ಹೀಗೆ ಮಾಡಿದ್ದೇನೆ. ನನಗೆ ನನ್ನನ್ನು ಆಯ್ಕೆ ಮಾಡಿದ ಜನರ ಕ್ಷೇತ್ರವನ್ನು ಅಭಿವೃದ್ಧಿ ಪಡಿಸುವುದೊಂದೆ ಗುರಿಯಾಗಿದೆ.
-ಎ.ಎಸ್.ಪಾಟೀಲ ನಡಹಳ್ಳಿ, ಅಧ್ಯಕ್ಷರು, ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ಹಾಗೂ ಶಾಸಕರು, ಮುದ್ದೇಬಿಹಾಳ ಮತಕ್ಷೇತ್ರ.
ಒಳ್ಳೆಯ ಸಂಸ್ಕಾರವುಳ್ಳವನಿಗೆ ಸಂಸಾರದ ಸಮಸ್ಯೆಗಳಿಗೆ ಪರಿಹಾರ ಹುಡಿಕಿ ಬಗೆಹರಿಸುವಲ್ಲಿ ಯಾವುದೇ ತೊಂದರೆಯಾಗುವುದಿಲ್ಲ. ಅದರಂತೆ ವಿದ್ಯಾವಂತರ ಆಯ್ಕೆಯಿಂದ ಮಾತ್ರ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತವೆ. ಇಂತಹ ವ್ಯಕ್ತಿಯನ್ನಾಗಿ ನನ್ನನ್ನು ಆಯ್ಕೆ ಮಾಡಿದ್ದು ನನ್ನ ಜವಾಬ್ದಾರಿಯನ್ನು ಸಮರ್ಥವಾಗಿ ನಿಬಾಯಿಸುತ್ತಿದ್ದೇನೆ ಎಂದು ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ಅಧ್ಯಕ್ಷ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಹೇಳಿದರು.
ಮುದ್ದೇಬಿಹಾಳ ತಾಲೂಕಿನ ಮದರಿ, ಗರಸಂಗಿ, ವಿರೇಶನಗರ ಹಾಗೂ ಅರೇ ಶಂಕರ ಗ್ರಾಮಗಳಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಮುದ್ದೇಬಿಹಾಳ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳು ಆಗಬೇಕಾಗಿದ್ದು ಕ್ಷೇತ್ರ ಅಂದಾಜು ೫೦ ಕೋಟಿ ಅಭಿವೃದ್ಧಿ ಹಣ ನೀಡುವಂತೆ ಸಿಎಂ ಅವರಿಗೆ ಮನವಿ ಮಾಡಿದ್ದೆ. ಆದರೆ ಕೊರೊನಾ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲ ಅಭಿವೃದ್ಧಿ ಕಾರ್ಯಗಳಿಗೆ ಇಟ್ಟ ಹಣವನ್ನು ಬಿಡುಗಡೆ ಮಾಡಲು ಸಾದ್ಯವಾಗಿರಲಿಲ್ಲ. ಆದರೆ ಇಂತಹ ಸಂದರ್ಭದಲ್ಲಿ ಸಿಎಂ ಅವರು ಮುದ್ದೇಬಿಹಾಲ ಕ್ಷೇತ್ರಕ್ಕೆ ಮೊದಲ ಹಂತವಾಗಿ ೨೫ ಕೋಟಿ ಹಣವನ್ನು ಮಂಜೂರು ಮಾಡಿದ್ದಾರೆ ಎಂದು ಅವರು ಹೇಳಿದರು.
ಬಿಜೆಪಿ ಧುರೀಣ ಎಂ.ಎಸ್.ಪಾಟೀಲ ಮಾತನಾಡಿ, ಹಿಂದೆ ಮುದ್ದೇಬಿಹಾಳ ಕ್ಷೇತ್ರದ ರಾಜಕೀಯ ರಂಗದಲ್ಲಿ ಸಾಕಷ್ಟು ಏಳುಬೀಳುಗಳನ್ನು ನೋಡಿದ್ದೇನೆ. ಅಲ್ಲದೇ ೩೦ ವರ್ಷಗಳ ಕಾಲ ಶಾಸಕರಾಗಿದ್ದ ನಾಡಗೌಡ ಅವರು ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ಎಷ್ಟ ಕಾಳಜಿ ವಹಿಸಿದ್ದರು ಎನ್ನುವುದಕ್ಕೆ ಪುನಸತಿ ಕೇಂದ್ರದಿಂದ ಲೋಟಗೇರಿಯ ಸ್ಪಶಾನಕ್ಕೆ 80 ಲಕ್ಷ ಬಿಟ್ಟರೆ ನಯ್ಯಾ ಪೈಸೆಯೂ ಕ್ಷೇತ್ರಕ್ಕೆ ಅಭಿವೃದ್ಧಿ ಅನುದಾನ ತಂದಿಲ್ಲ ಎನ್ನುವುದು ಕ್ಷೇತ್ರದ ಜನತೆ ತಿಳಿದುಕೊಳ್ಳುವುದು ಅಗತ್ಯವಿದೆ. ಇಂದಿನ ಶಾಸಕರ ಅಭಿವೃದ್ಧಿ ಕಾರ್ಯ ಎಲ್ಲರ ಕಣ್ಣಿಗೂ ಕಾಣುತ್ತಿದೆ. ಮುಂದಿನ ದಿನಗಳ್ಳಿಯೂ ನಡಹಳ್ಳಿ ಅವರಿಗೆ ಹೆಚ್ಚಿನ ಬೆಂಬಲವನ್ನು ಸೂಚಿಸಿದರೆ ಮುದ್ದೇಬಿಹಾಳ ಕ್ಷೇತ್ರ ಮಾದರಿ ಕ್ಷೇತ್ರವಾಗಲಿದೆ ಎಂದು ಅವರು ಹೇಳಿದರು.
ಜಲ ಜೀವನ ಯೋಜನೆಗೆ ಚಾಲನೆ:
ಮುದ್ದೇಬಿಹಾಳ ಕ್ಷೇತ್ರದ ಪ್ರತಿಯೊಂದು ಗ್ರಾಮ ಮನೆಗೂ ಶುದ್ಧ ಕುಡಿಯುವ ನೀರನ್ನು ಒದಗಿಸಬೇಕು ಎಂದು ಕೇಂದ್ರ ಸರಕಾರದ ಜಲಜೀವನ ಯೋಜನೆಯಡಿಯಲ್ಲಿ 1027 ಕೋಟಿ ಹಣ ಬಿಡುಗಡೆ ಮಾಡಿಸಲಾಗಿದೆ. ಇನ್ನೂ ಜಲಧಾರೆ ಯೋಜನೆಯಡಿಯಲ್ಲಿ ೮೩೪ ಕೋಟಿ ಹಣ ಬಿಡುಗಡೆ ಮಾಡಿಸಲಾಗಿದೆ. ಇದರಿಂದ ಪ್ರತಿಯೊಬ್ಬರ ಮನೆಯಲ್ಲಿ ಶುದ್ಧ ನೀರಿನ ಒದಗಿಸಿದಂತಾಗುತ್ತದೆ. ಈಗಾಗಲೇ ಈ ಯೋಜನೆಯಡಿಯಲ್ಲಿ ಕಾಮಗಾರಿಯು ತಾಲೂಕಿನಲ್ಲಿ ಪ್ರಾರಂಭಗೊಂಡಿದ್ದು ಮೊದಲನೇ ಹಂತದಲ್ಲಿ ಮನೆ ಮನೆಗೂ ಪೈಪಲೈನ್ ನೀಡಲಾಗುತ್ತದೆ. ನಂತರ ಶುದ್ಧ ನೀರನ್ನು ಓರಲ್ ಟ್ಯಾಂಕ್ ಮೂಲಕ ನಳ್ಳಿಯ ಮೂಲಕ ಮನೆ ಮನೆಗೂ ತಲುಪುವಂತೆ ಮಾಡಲಾಗುತ್ತಿದೆ. ಈ ಎಲ್ಲ ಕಾರ್ಯಗಳು ಮುಂದಿನ 30 ತಿಂಗಳಲ್ಲಯೇ ಪೂರ್ಣಗೊಳ್ಳಲಿದೆ ಎಂದು ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ತಿಳಿಸಿದರು.
ಗ್ರಾಮೀಣ ಮಹಿಳೆಯರಿಗೆ ಸಿರೆ ವಿತರಣೆ:
ಜು.೨೨ ರಂದು ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಅವರ ಜನ್ಮ ದಿನದ ನಿಮಿತ್ಯವಾಗಿ ಕ್ಷೇತ್ರದ ವಿವಿಧ ಗ್ರಾಮೀಣ ಮಹಿಳೆಯರಿಗೆ ತಮ್ಮ ಸ್ವಂತ ಹಣದಲ್ಲಿಯೇ ಸಿರೆಗಳನ್ನು ವಿತರಿಸಲಾಯಿತು.
ವಿದ್ಯಾರ್ಥಿಗಳಿಗೆ ೩ ಕೋಟಿ ಹಣದಲ್ಲಿ ಪುಸ್ತಕ ವಿತರಣೆ:
ಮುದ್ದೇಬಿಹಾಳ ಕ್ಷೇತ್ರದಲ್ಲಿ 70 ಸಾವಿರ ಮಕ್ಕಳಿಗೆ ಮಕ್ಕಳಿದ್ದಾರೆ. ಇದಕ್ಕಾಗಿ ಜು.26 ರಿಂದ 1 ರಿಂದ 4ನೇ ತರಗತಿಯ ಪ್ರತಿಯೊಂದು ವಿದ್ಯಾರ್ಥಿಗಳಿಗೆ 200 ರೂಪಾಯಿಯ ನೋಟ್‌ಬುಕ್, 4 ರಿಂದ 10ನೇ ತರಗತತಿಯ ವಿದ್ಯಾರ್ಥಿಗಳಿಗೆ 350 ರೂಪಾಯಿಯ ನೋಟ್‌ಬುಕ್‌ಗಳು, 10 ಸಾವಿರ ಪಿಯುಸಿ ವಿದ್ಯಾರ್ಥಿಗಳಿಗೆ ತಲಾ 1 ಸಾವಿರದ ನೋಟ್‌ಬುಕ್ ಹಾಗೂ ಪುಸ್ತಕಗಳು ಮತ್ತು ಆಗಸ್ಟ್ 15 ರಿಂದ ಡಿಗ್ರಿ ವಿದ್ಯಾರ್ಥಿಗಳಿಗೆ ತಲಾ 1 ಸಾವಿರದಂತೆ ಅಗತ್ಯವಿರುವ ಕಲಿಕಾ ಸಾಮಗ್ರಿಗಳನ್ನು ಸ್ವಂತ ಹಣದಲ್ಲಿಯೇ ವಿತರಿಸಲಾಗುತ್ತದೆ ಎಂದು ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ತಿಳಿಸಿದ್ದಾರೆ.
350 ಕೋಟಿಯಲ್ಲಿ ಇಥನಾಲ್ ಫ್ಯಾಕ್ಟರಿ ಪ್ರಾರಂಭ:
ಮುದ್ದೇಬಿಹಾಳ ಕ್ಷೇತ್ರದಲ್ಲಿ ಸಾಕಷ್ಟು ವಿದ್ಯಾವಂತರಿದ್ದಾರೆ. ಆದರೆ ಇಂತವರಿಗೆ ಸ್ಥಳೀಯವಾಗಿ ಕೆಲಸ ಮಾಡಲು ಆಗುತ್ತಿಲ್ಲ. ಇದಕ್ಕಾಗಿ ಈಗಾಗಲೇ ಕೇಂದ್ರ ಸರಕಾರದಿಂದ ಪರವಾಣಿಗೆ ಪಡೆದುಕೊಂಡು ಇನ್ನೂ ಮುಂದಿನ 2.5 ವರ್ಷಗಳಲ್ಲಿ ತಾಲೂಕಿನ ಬಸರಕೋಡ ಗ್ರಾಮದಲ್ಲಿ ಇಥನಾಲ್ ಫ್ಯಾಕ್ಟರಿ ಪ್ರಾರಂಬಿಸಲಾಗುತ್ತಿದೆ. ಇದರಿಂದ ಸುಂಆರು 10 ಸಾವಿರ ಉದ್ಯೋಗ ಸೃಷ್ಠಿಯಾಗಲಿದೆ. ಅಲ್ಲದೇ ನಾಲತವಾಡ ಭಾಗದಲ್ಲಿಯೂ ಒಂದು ಯೋಜನೆ ಮಾಡಿದ್ದು ಶೀಘ್ರದಲ್ಲಿಯೇ ಅದೇ ಭಾಗದಲ್ಲಿಯೇ ಉದ್ಯೋಗ ಸೃಷ್ಠಿಸುವ ಯೋಜನೆ ಜಾರಿಯಾಗಲಿದೆ ಎಂದು ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಹೇಳಿದರು.
ಮಕ್ಕಳೊಂದಿಗೆ ಜನ್ಮದಿನ ಆಚರಿಸಿಕೊಂಡ ಶಾಸಕ ನಡಹಳ್ಳಿ:
ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಅಭಿಮಾನಿಗಳು ಶಾಸಕರ 53ನೇ ಜನ್ಮ ದಿನದ ನಿಮಿತ್ಯವಾಗಿ ಗ್ರಾಮೀಣ ಪ್ರದೇಶದಲ್ಲಿ ಕೇಕ್ ತರಿಸಿದ್ದನ್ನು ಶಾಸಕರು ಗ್ರಾಮೀಣ ಮಕ್ಕಳೊಂದಿಗೆ ಕೇಕ್ ಕತ್ತಿರಿಸುವ ಮೂಲಕ ಜನ್ಮದಿನವನ್ನು ಆಚರಿಸಿದರು.
ತಾಲೂಕಿನ ಮದರಿ, ಗರಸಂಗಿ, ವಿರೇಶನಗರ, ಅರೇ ಶಂಕರ ಗ್ರಾಮಗಳಿಗೆ ವಿವಿಧ ಅಭಿವೃದ್ಧಿ ಕಾಮಗಾರಿಗಳ ಭೂಮಿ ಪೂಜೆಗೆ ತೆರಲಿದ ಶಾಸಕರಿಗೆ ಗ್ರಾಮೀಣ ಜನತೆಯಿಂದ ಡೊಳ್ಳು, ಧ್ವನಿ ವರ್ಧಕ ಹಾಗೂ ಆರತಿ ಬೆಳಗುವ ಮೂಲಕ ಅಭೂತಪೂರ್ವ ಸ್ವಾಗವನ್ನು ಕೋಡಲಾಯಿತು. ತಾಲೂಕಿನ ಮದರಿ, ಗರಸಂಗಿ, ವಿರೇಶನಗರ, ಅರೇ ಶಂಕರ ಗ್ರಾಮಗಳಿಗೆ ವಿವಿಧ ಅಭಿವೃದ್ಧಿ ಕಾಮಗಾರಿಗಳ ಭೂಮಿ ಪೂಜೆಗೆ ತೆರಲಿದ ಶಾಸಕರಿಗೆ ಗ್ರಾಮೀಣ ಜನತೆಯಿಂದ ಡೊಳ್ಳು, ಧ್ವನಿ ವರ್ಧಕ ಹಾಗೂ ಆರತಿ ಬೆಳಗುವ ಮೂಲಕ ಅಭೂತಪೂರ್ವ ಸ್ವಾಗವನ್ನು ಕೋಡಲಾಯಿತು.
ಈ ಸಂದರ್ಭದಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಸೋಮನಗೌಡ ಬಿರಾದಾರ, ಬಿಜೆಪಿ ಮುಖಂಡ ಮಲಕೇಂದ್ರರಾಯಗೌಡ ಪಾಟೀಲ, ಎಪಿಎಂಸಿ ಸದಸ್ಯ ಪ್ರಭು ಡೇರೆದ, ಪ್ರಥಮ ದರ್ಜೆ ಗುತ್ತಿಗೆದಾರ ಅಪ್ಪು ಮೈಲೇಶ್ವರ, ಗ್ರಾಪಂ ಸದಸ್ಯ ಜಗದೀಶ ಪಂಪಣ್ಣವರ, ಲಕ್ಷ್ಮಣ ಬಿಜ್ಜೂರ ವೇಧಿಕೆಯಲ್ಲಿದ್ದರು.
ಮದರಿ ಗ್ರಾಮದ ಮುಖಂಡ ಯಮನಪ್ಪ ವಡ್ಡರ, ಶರಣಪ್ಪ ವಡ್ಡರ, ಶಿವು ಕನ್ನೊಳ್ಳಿ ಸೇರಿದಂತೆ ಗ್ರಾಮ ಪಂಚಾಯತ ಉಪಾಧ್ಯಕ್ಷರು ಸದಸ್ಯರು ಇದ್ದರು.
Be the first to comment