ಅಧಿಕಾರಿಗಳ ಮಾತಿಗೆ ಕಿವಿಗೊಡದೇ ಕೋವಿಡ್-19 ನಿಯಮ ಉಲ್ಲಂಘಿಸಿದ ಯರಝರಿ ಗ್ರಾಮದ ಜಾತ್ರಾ ಕಮೀಟಿ…! ಡಿಸಿ ಸೂಚನೆಯ ಮೇರೆಗೆ ಜಾತ್ರೆಯನ್ನು ತಡೆಗಟ್ಟಲು ಆಗಮಿಸಿದ ಸ್ಥಳೀಯ ಪೊಲೀಸ ಅಧಿಕಾರಿಗಳು…!!!

ವರದಿ: ಚೇತನ ಕೆಂದೂಳಿ, ಸುದ್ದಿ ಸಂಪಾದಕರು

ಜಿಲ್ಲಾ ಸುದ್ದಿಗಳು

ಮುದ್ದೇಬಿಹಾಳ:

CHETAN KENDULI

ರಾಜ್ಯ ಸರಕಾರ ಕೊರೊನಾ ಹಿನ್ನೆಲೆಯಲ್ಲಿ ಯಾವುದೇ ಜಾತ್ರೆ ಸೇರಿದಂತೆ ಇನ್ನಿತರ ಜನ ಸಂಧನವಾಗುವ ಸಮಾರಂಭಗಳಿಗೆ ಬ್ರೇಕ್ ಹಾಕಿದ್ದರೂ ಗ್ರಾಮದ ಕೆಲ ಮುಖಂಡರು ಅದ್ದೂರಿಯಾಗಿ ನಡೆಸಿದ್ದ ಗ್ರಾಮದೇವತೆ ಜಾತ್ರೆಯನ್ನು ಜಿಲ್ಲಾಧಿಕಾರಿಗಳಿಂದ ರದ್ದುಗೋಳಿಸುವಂತೆ ಸ್ಥಳೀಯ ಪೊಲೀಸರಿಗೆ ತಿಳಿಸಿದ್ದರೂ ಸ್ವಲ್ಪ ಸಮಯದ ನಂತರ ಮತ್ತೇ ಜಾತ್ರೆಯನ್ನು ನಡೆಸಿರುವ ಘಟನೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಯರಝರಿ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.



ಹೌದು, ಪ್ರಿ ಮೂರು ವರ್ಷಕ್ಕೊಮ್ಮೆ ಗ್ರಾಮದಲ್ಲಿ ನಡೆಯಲಿದ್ದ ಜಾತ್ರೆಯನ್ನು ಈ ಬಾರಿಯೂ ಅದ್ದೂರಿಯಿಂದ ನಡೆಸಬೇಕು ಎಂದು ಗ್ರಾಮದ ಮುಖಂಡರು ನಿರ್ಮಾನಿಸಿ ಜಾತ್ರೆಗೆ ಸಕಲ ಸಿದ್ದತೆಗಳನ್ನು ಮಾಡಿಕೊಂಡಿದ್ದರು. ಶುಕ್ರವಾರ ದೇವಿ ಗಂಗಸ್ಥಳ ಪೂಜಾ ಕಾರ್ಯಕ್ರಮಕ್ಕೆ ಬೆಳಿಗ್ಗೆ ಚಾಲನೆ ನೀಡಿದ ವಿಯಷವನ್ನು ವಿಜಯಪುರ ಜಿಲ್ಲಾಧಿಕಾರಿಗಳಿಗೆ ಮಾಹಿತಿ ದೊರೆತ ನಂತರ ಸ್ಥಳೀಯ ಪೊಲೀಸ ಅಧಿಕಾರಿಗಳೊಂದಿಗೆ ದೂರವಾಣಿ ಮೂಲಕ ಸಂಪರ್ಕಿಸಿ ಜಾತ್ರೆಯನ್ನು ತಡೆಗಟ್ಟುವಂತೆ ಸೂಚಿಸಿದ್ದರು. ಜಿಲ್ಲಾಧಿಕಾರಿಗಳ ಸೂಚನೆಯಂತೆ ಪೊಲೀಸ ಅಧಿಕಾರಿಗಳು ಯರಝರಿ ಗ್ರಾಮದಲ್ಲಿ ನಡೆಯುತ್ತಿದ್ದ ಜಾತ್ರಾ ಸ್ಥಳಕ್ಕೆ ಬೇಟಿ ನೀಡಿ ಅಲ್ಲಿದ್ದ ಜನರನ್ನು ಲಾಠಿ ರುಚಿ ತೋರಿಸುವ ಮೂಲಕ ಚದುರಿಸಿ ಬಿಸಿ ಮುಟ್ಟಿಸಿ ಒಂದು ವಾಹನವನ್ನು ಸಿಜ್ ಮಾಡಿ ಮಾಸ್ಕ ಧರಿಸದ ಜನರಿಗೆ ದಂಡವನ್ನು ಹಾಕಿದ್ದಾರೆ.

ಪಿಡಿಓ ಮಾತಿಗೆ ಕಿವಿಗೊಡದ ಗ್ರಾಮಸ್ಥರು:

ಗ್ರಾಮದಲ್ಲಿ ದ್ಯಾಮವ್ವನ ಜಾತ್ರೆಯನ್ನು ಮಾಡಲು ಸಕಲ ಸಿದ್ದತೆಯನ್ನು ಮಾಡಿಕೊಂಡಿದ್ದ ಗ್ರಾಮಸ್ಥರಿಗೆ ಯರಝರಿ ಗ್ರಾಪಂ ಅಭಿವೃದ್ಧಿ ಅಧಿಕಾರಿ ವಿಜಯಲಕ್ಷ್ಮೀ ಮುದಗಲ್ಲ ಅವರು ಸರಕಾರದ ನಿಯಮಾವಳಿ ಪ್ರಕಾರ ಜಾತ್ರೆಯನ್ನು ಸಾಂಕೇತಿಕವಾಗಿ ನಡೆಸಬೇಕು. ಯಾವುದೇ ಕಾರಣಕ್ಕೂ ಜನ ಜಗ್ಗುಳಿ ಕೂಡಬಾರದು ಎಂದು ತಿಳಿಹೇಳಿದ್ದು ಅಲ್ಲದೇ ಗ್ರಾಮದಲ್ಲಿ ನಡೆಸಿದ ಜಾತ್ರಾ ಕಮೀಟಿಯವರ ಬಗ್ಗೆ ಮಾಹಿತಿಯನ್ನು ಸ್ಥಳೀಯ ಪೊಲೀಸರಿಗೆ ಮುಂಜ್ರಾಗುತೆ ಕ್ರಮ ಕೈಗೊಳ್ಳುವಂತೆ ಪಂಚಾಯತಿಯಿಂದ ಪತ್ರವನ್ನು ನೀಡಿದ್ದಾರೆ. ಆದರೆ ಶುಕ್ರವಾರ ಗ್ರಾಮದಲ್ಲಿ ಮಾತ್ರ ಜಾತ್ರೆಯು ಸಕಲ ಸಿದ್ದತೆಯಲ್ಲಿ ಜರುಗಿದ್ದು ಅಧಿಕಾರಿಗಳ ಮಾತಿಗೂ ಕಿವಿಗೊಡದಂತಾಗಿದೆ.

ಜಾತ್ರೆಯ ಬಗ್ಗೆ ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸಲಾಗುವುದು:

ತಾಲೂಕಿನ ಯರಝರಿ ಗ್ರಾಮದಲ್ಲಿ ಈಗಾಗಲೇ ಪಿಡಿಓ ಅವರು ಜಾತ್ರೆ ನಡೆಸದಂತೆ ಸೂಚಿಸಿದ್ದರೂ ಶುಕ್ರವಾರ ಗ್ರಾಮದ ಜಾತ್ರಾ ಕಮೀಟಿಯವರು ಜಾತ್ರೆಗೆ ಚಾಲನೆ ನೀಡಿದ್ದರ ಬಗ್ಗೆ ಮೇಲಾಧಿಕಾರಿಗಳಿಗೆ ಮುಂದಿನ ಕ್ರಮಕ್ಕೆ ಸಮಗ್ರ ಮಾಹಿತಿ ವರದಿ ನೀಡಲಾಗುವುದು ಎಂದು ಜಾತ್ರೆಯನ್ನು ತಡೆಗಟ್ಟಲು ಬಂದಿ ಅಧಿಕಾರಿಗಳು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಪ್ರಭಾರ ತಾ.ಪಂ ಇಓ  ವಿರೇಶ ಹಿರೇಮಠ, ಪಿ.ಎಸ್.ಐ. ಮಡಿವಾಳಪ್ಪ ಬಿರಾದಾರ, ಪಿಡಿಓ ವಿಜಯಲಕ್ಷ್ಮೀ ಮುದಗಲ್ಲ ಸೇರಿದಂತೆ ಕಂದಾಯ ಇಲಾಖೆ ಅಧಿಕಾರಿಗಳು ಇದ್ದರು.



ಶಾಸಕರಿಂದ ಮನವಿ:

ಮುದ್ದೇಬಿಹಾಳ ಮತಕ್ಷೇತ್ರದ ವಿವಿಧ ಗ್ರಾಮಗಳಿಂದ ಜನರು ಕರ್ನಾಟಕ ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಅಧ್ಯಕ್ಷ ಹಾಗೂ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಅವರಿಗೆ ದೂರವಾಣಿ ಮೂಲಕ ಕರೆ ಮಾಡಿ ಗ್ರಾಮದ ಜಾತ್ರೆ ನಡೆಸಲು ಅಧಿಕಾರಿಗಳು ಅಡ್ಡಿ ಪಡಿಸುತ್ತಿದ್ದು ಕೂಡಲೇ ಅಧಿಕಾರಿಗಳಿಗೆ ಜಾತ್ರೆಯನ್ನು ನಡೆಸಲು ಹಾಗೂ ಜನರು ಸೇರಲು ಅವಕಾಶ ಮಾಡಿಸಿಕೊಡಬೇಕು ಎಂದು ಸಾಕಷ್ಟು ಜನರು ಕೇಳಿಕೊಂಡ ಹಿನ್ನೆಲೆಯಲ್ಲಿ ಶಾಸಕ ನಡಹಳ್ಳಿ ಅವರು ಈಗಾಗಲೇ ರಾಜ್ಯದಲ್ಲಿ ಕೊರೊನಾ ಹೆಮ್ಮಾರಿ ಸಾಕಷ್ಟು ರುದ್ರತಾಂಡ ಮಾಡುತ್ತಿದ್ದು ಇದಕ್ಕೆ ಬ್ರೇಕ್ ಹಾಕಬೇಕು ಎಂದರೆ ಜನರು ಸಾಮಾಜಿಕ ಅಂತರ, ಮಾಸ್ಕ ಧರಿಸುವುದು ಹಾಗೂ ಜಾತ್ರೆ ಮತ್ತು ಇನ್ನಿತರ ಸಭೆ ಸಮಾರಂಭಗಳನ್ನು ತಡೆಗಟ್ಟಬೇಕು. ಇದಕ್ಕಾಗಿ ಈಗಾಗಲೇ ರಾಜ್ಯ ಸರಕಾರ ವಿವಿಧ ನಿಯಮಗಳ ಆದೇಶ ಹೊರಡಿಸಿದ್ದು ಯಾವುದೇ ಕಾರಣಕ್ಕೂ ಜಾತ್ರೆ ಸೇರಿದಂತೆ  ಕೊರೊನಾ ನಿಯಮಾವಳಿಗಳ ಹೊರತಾದ ಇನ್ನಿತರ ಸಮಾರಂಭಗಳನ್ನು ನಡೆಸಲು ಅವಕಾಶವಿರುದಿಲ್ಲ. ಆದ್ದರಿಂದ ಮುದ್ದೇಬಿಹಾಳ ಕ್ಷೇತ್ರದ ಜನತೆಯು ಅಧಿಕಾರಿಗಳೊಂದಿಗೆ ಸಹಕರಿಸಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.

Be the first to comment

Leave a Reply

Your email address will not be published.


*