ರಾಜ್ಯ ಸುದ್ದಿಗಳು
ಕುಮಟಾ
ಹೊಸದಾಗಿ ನಿರ್ಮಿಸುತ್ತಿದ್ದ ಮನೆಗೆ ಹಳೆ ಮನೆಯ ವಿದ್ಯುತ್ ಮೀಟರಿನಿಂದ ತಾತ್ಕಾಲಿಕವಾಗಿ ವಯರ್ಗಳಿಂದ ವಿದ್ಯುತ್ ಸಂಪರ್ಕ ಮಾಡಿಕೊಳ್ಳಲಾಗಿತ್ತು ಎನ್ನಲಾಗಿದ್ದು ಮೊಬೈಲ್ ಚಾರ್ಜ್ ಮಾಡುವ ವೇಳೆ ಆಕಸ್ಮಿಕವಾಗಿ ವಿದ್ಯುತ್ ತಗುಲಿ ಯುವಕನೊಬ್ಬ ಮೃತಪಟ್ಟ ಘಟನೆ ನಡೆದಿದೆ. ತಾಲೂಕಿನ ಊರಕೇರಿಯ ತಲಗೋಡ ನಿವಾಸಿ ಜಗದೀಶ ಮಾಸ್ತಿ ಪಟಗಾರ(23) ಮೃತ ವ್ಯಕ್ತಿಯಾಗಿದ್ದಾನೆ.
ಮಧ್ಯಾಹ್ನ ಸ್ನಾನಕ್ಕೆ ಹೋಗುವ ಮುನ್ನ ಮೊಬೈಲ್ ಚಾರ್ಜ್ ಹಾಕುವ ಸಂದರ್ಭದಲ್ಲಿ ಈ ಘಟನೆ ನಡೆದಿದೆ ಎಂಬ ಮಾಹಿತಿ ಇದೆ.. ಹೆಚ್ಚಿನ ವಿವರ ತಿಳಿದು ಬರಬೇಕಿದೆ.
Be the first to comment