ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ನೂತನ ಸದಸ್ಯ ಭಟ್ಕಳದ ಮುಕುಂದ ನಾಯ್ಕ ಅವರಿಗೆ ಸಂಸದ ಅನಂತ ಕುಮಾರ ಹೆಗಡೆ ಸನ್ಮಾನ

ವರದಿ-ಕುಮಾರ್ ನಾಯ್ಕ ,ಉಪ ಸಂಪಾದಕರು

ಜಿಲ್ಲಾ ಸುದ್ದಿಗಳು 

ಭಟ್ಕಳ

ಕರ್ನಾಟಕ ಖಾದಿ ಮತ್ತು ಗ್ರಾಮೋದ್ಯೋಗಗಳ ಅಧಿನಿಯಮ ೨೦೨೧ ರನ್ವಯ ಕಲಬುರಗಿ, ಮೈಸೂರು ಮತ್ತು ಬೆಳಗಾವಿ ಕಂದಾಯ ವಲಯದ ವಿಜಯನಗರ, ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಯಿಂದ ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯ ಆಡಳಿತ ಮಂಡಳಿಗೆ ಅಧಿಕಾರೇತರ ಸದಸ್ಯರ ನೇಮಕ ಮಾಡುವಂತೆ ಸರಕಾರ ಅಧೀನ ಕಾರ್ಯದರ್ಶಿ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಆರ್. ರಾಜಶೇಖರ ಆದೇಶಿಸಿದ್ದಾರೆ.ಈ ಪೈಕಿ ಬೆಳಗಾವಿ ಕಂದಾಯ ವಲಯದ ಉತ್ತರ ಕನ್ನಡ ಜಿಲ್ಲೆಯಿಂದ ಭಟ್ಕಳ ಸಾರದಹೊಳೆ ಮುಕುಂದ ಮಂಜುನಾಥ ನಾಯ್ಕ ಅವರನ್ನು ಆಯ್ಕೆ ಮಾಡಲಾಗಿದೆ. ಇವರು ಜಿಲ್ಲೆ, ತಾಲೂಕು ಮಟ್ಟದಲ್ಲಿ ಬಿಜೆಪಿ ಪಕ್ಷದ ಸಂಘಟನೆಯಲ್ಲಿ ಮುಂಚೂಣಿಯಲ್ಲಿದ್ದು, ಈ ಹಿಂದೆ ೨೦೦೬ ರಲ್ಲಿ ಭಟ್ಕಳ ಮಂಡಲದ ಅಧ್ಯಕ್ಷರಾಗಿ ಜವಾಬ್ದಾರಿ ನಿರ್ವಹಿಸಿದ ಅನುಭವ ೨೦೦೯ ರಲ್ಲಿ ಉತ್ತರ ಕನ್ನಡ ಜಿಲ್ಲಾ ಯುವ ಮೋರ್ಚಾ ಉಪಾಧ್ಯಕ್ಷ ಜವಾಬ್ದಾರಿ ಅನುಭವ ಹಾಗೂ ಹಿಂದೂಳಿದ ಮೊರ್ಚಾ ಪ್ರಧಾನ ಕಾರ್ಯದರ್ಶಿ, ಹಾಲಿ ಜಿಲ್ಲಾ ಕಾರ್ಮಿಕ ಪ್ರಕೋಷ್ಠ ದ ಸಂಚಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

CHETAN KENDULI

ಇನ್ನು ಕಲಬುರಗಿ ಕಂದಾಯ ವಲಯದ ವಿಜಯಪುರ ಜಿಲ್ಲೆಯಲ್ಲಿ ಎನ್. ಸಿದ್ದಲಿಂಗನ ಗೌಡ, ಮೈಸೂರು ಕಂದಾಯ ವಲಯದ ಉಡುಪಿ ಜಿಲ್ಲೆಯಲ್ಲಿ ಮಿಥುನ್ ಆರ್. ಹೆಗಡೆ, ಅದೇ ರೀತಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಾಧವ್ ಶೆಟ್ಟಿಗಾರ ಆಯ್ಕೆ ಮಾಡಿ ಇವರೆಲ್ಲರು ಅಧಿಕಾರ ಸ್ವೀಕರಿಸಿದ್ದಾರೆ.ಆಯ್ಕೆ ಮಂಡಳಿಯ ಸದಸ್ಯರಾಗಿ ಆಯ್ಕೆ ಮಾಡುವಲ್ಲಿ ಸಹಕರಿಸಿದ ಸಂಸದರು, ಮಾಜಿ ಕೇಂದ್ರ ಸಚಿವ ಅನಂತ ಕುಮಾರ ಹೆಗಡೆ, ಕರ್ನಾಟಕ ಸರ್ಕಾರದ ವಿಧಾನ ಸಭಾ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ರಾಜ್ಯ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ, ಉತ್ತರ ಕನ್ನಡ ಜಿಲ್ಲೆ ಭಾಜಪ ಜಿಲ್ಲಾಧ್ಯಕ್ಷ ವೆಂಕಟೇಶ ನಾಯಕ, ಭಾಜಪ ಉತ್ತರ ಕನ್ನಡ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಂದ್ರು ದೇವಾಡಿಗ (ಎಸಳೆ), ಗೋವಿಂದ ನಾಯ್ಕ ಭಟ್ಕಳ ಹಾಗೂ ಈಶ್ವರ ನಾಯ್ಕ ಮುರ್ಡೇಶ್ವರ ಅವರಿಗೆ ಮುಕುಂದ ನಾಯ್ಕ ಅವರು ಧನ್ಯವಾದ ಸಲ್ಲಿಸಿದ್ದಾರೆ.

 ಸೋಮವಾರದಂದು ಅಧಿಕಾರ ವಹಿಸಿಕೊಂಡಿದ್ದಾರೆ.ಸಂಸದ ಅನಂತ್ ಕುಮಾರ್ ಹೆಗಡೆಯವರು ತಮ್ಮ ನಿವಾಸದಲ್ಲಿ ಮುಕುಂದ ನಾಯ್ಕ ಅವರಿಗೆ ಸನ್ಮಾನಿಸಿದರು.ಕರ್ನಾಟಕ ಖಾದಿ ಮತ್ತು ಗ್ರಾಮೋದ್ಯೋಗಗಳ ಅಧಿನಿಯಮ ೨೦೨೧ ರನ್ವಯ ಕಲಬುರಗಿ, ಮೈಸೂರು ಮತ್ತು ಬೆಳಗಾವಿ ಕಂದಾಯ ವಲಯದ ವಿಜಯನಗರ, ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಯಿಂದ ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯ ಆಡಳಿತ ಮಂಡಳಿಗೆ ಅಧಿಕಾರೇತರ ಸದಸ್ಯರ ನೇಮಕ ಮಾಡುವಂತೆ ಸರಕಾರ ಅಧೀನ ಕಾರ್ಯದರ್ಶಿ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಆರ್. ರಾಜಶೇಖರ ಆದೇಶಿಸಿದ್ದಾರೆ.ಈ ಪೈಕಿ ಬೆಳಗಾವಿ ಕಂದಾಯ ವಲಯದ ಉತ್ತರ ಕನ್ನಡ ಜಿಲ್ಲೆಯಿಂದ ಭಟ್ಕಳ ಸಾರದಹೊಳೆ ಮುಕುಂದ ಮಂಜುನಾಥ ನಾಯ್ಕ ಅವರನ್ನು ಆಯ್ಕೆ ಮಾಡಲಾಗಿದೆ. ಇವರು ಜಿಲ್ಲೆ, ತಾಲೂಕು ಮಟ್ಟದಲ್ಲಿ ಬಿಜೆಪಿ ಪಕ್ಷದ ಸಂಘಟನೆಯಲ್ಲಿ ಮುಂಚೂಣಿಯಲ್ಲಿದ್ದು, ಈ ಹಿಂದೆ ೨೦೦೬ ರಲ್ಲಿ ಭಟ್ಕಳ ಮಂಡಲದ ಅಧ್ಯಕ್ಷರಾಗಿ ಜವಾಬ್ದಾರಿ ನಿರ್ವಹಿಸಿದ ಅನುಭವ ೨೦೦೯ ರಲ್ಲಿ ಉತ್ತರ ಕನ್ನಡ ಜಿಲ್ಲಾ ಯುವ ಮೋರ್ಚಾ ಉಪಾಧ್ಯಕ್ಷ ಜವಾಬ್ದಾರಿ ಅನುಭವ ಹಾಗೂ ಹಿಂದೂಳಿದ ಮೊರ್ಚಾ ಪ್ರಧಾನ ಕಾರ್ಯದರ್ಶಿ, ಹಾಲಿ ಜಿಲ್ಲಾ ಕಾರ್ಮಿಕ ಪ್ರಕೋಷ್ಠ ದ ಸಂಚಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಇನ್ನು ಕಲಬುರಗಿ ಕಂದಾಯ ವಲಯದ ವಿಜಯಪುರ ಜಿಲ್ಲೆಯಲ್ಲಿ ಎನ್. ಸಿದ್ದಲಿಂಗನ ಗೌಡ, ಮೈಸೂರು ಕಂದಾಯ ವಲಯದ ಉಡುಪಿ ಜಿಲ್ಲೆಯಲ್ಲಿ ಮಿಥುನ್ ಆರ್. ಹೆಗಡೆ, ಅದೇ ರೀತಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಾಧವ್ ಶೆಟ್ಟಿಗಾರ ಆಯ್ಕೆ ಮಾಡಿ ಇವರೆಲ್ಲರು ಅಧಿಕಾರ ಸ್ವೀಕರಿಸಿದ್ದಾರೆ.ಆಯ್ಕೆ ಮಂಡಳಿಯ ಸದಸ್ಯರಾಗಿ ಆಯ್ಕೆ ಮಾಡುವಲ್ಲಿ ಸಹಕರಿಸಿದ ಸಂಸದರು, ಮಾಜಿ ಕೇಂದ್ರ ಸಚಿವ ಅನಂತ ಕುಮಾರ ಹೆಗಡೆ, ಕರ್ನಾಟಕ ಸರ್ಕಾರದ ವಿಧಾನ ಸಭಾ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ರಾಜ್ಯ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ, ಉತ್ತರ ಕನ್ನಡ ಜಿಲ್ಲೆ ಭಾಜಪ ಜಿಲ್ಲಾಧ್ಯಕ್ಷ ವೆಂಕಟೇಶ ನಾಯಕ, ಭಾಜಪ ಉತ್ತರ ಕನ್ನಡ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಂದ್ರು ದೇವಾಡಿಗ (ಎಸಳೆ), ಗೋವಿಂದ ನಾಯ್ಕ ಭಟ್ಕಳ ಹಾಗೂ ಬಿ.ಜೆ.ಪಿ ಮುಖಂಡ ಈಶ್ವರ ನಾಯ್ಕ ಮುರ್ಡೇಶ್ವರ ಅವರಿಗೆ ಮುಕುಂದ ನಾಯ್ಕ ಅವರು ಧನ್ಯವಾದ ಸಲ್ಲಿಸಿದ್ದಾರೆ.

Be the first to comment

Leave a Reply

Your email address will not be published.


*