ಕೋಟ ಕೊರಗ ಕಾಲೋನಿಗೆ ಇಂಧನ, ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನಿಲ್ ಕುಮಾರ್ ಭೇಟಿ 

ವರದಿ : ಇಬ್ರಾಹಿಂ ಕೋಟ ಕುಂದಾಪುರ

ಜಿಲ್ಲಾ ಸುದ್ದಿಗಳು 

ಕೋಟ

ಕೋಟತಟ್ಟು ಗ್ರಾಮದ ಚಿಟ್ಟಿಬೆಟ್ಟು ಕೊರಗ ಸಮುದಾಯದ ಕಾಲೋನಿಗೆ ಜ. 2 ರಂದು ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನಿಲ್ ಕುಮಾರ್ ಭೇಟಿ ನೀಡಿದರು.ಡಿ. 27 ರಂದು ಮೆಹಂದಿ ಕಾರ್ಯಕ್ರಮದಲ್ಲಿ ಕೊರಗ ಸಮುದಾಯದ ಮೇಲೆ ನಡೆದ ಪೊಲೀಸ್ ದೌರ್ಜನ್ಯದ ಬಗ್ಗೆ ಆಲಿಸಿ ಈ ಘಟನೆ ಬಗ್ಗೆ ನಾನು ಖಂಡಿಸುತ್ತೇನೆ. ಮತ್ತು ವಿಷಾದಿಸುತ್ತೇನೆ. ಎಂದು ಸಚಿವರು ಹೇಳಿದರು.

CHETAN KENDULI

ಸಚಿವರು ಮಾಧ್ಯಮದವರೊಂದಿಗೆ ಮಾತನಾಡಿ ನಾನು ರಾಜ್ಯ ಪ್ರವಾಸದಲ್ಲಿ ಇದ್ದಿದ್ದರಿಂದ ಇಲ್ಲಿಗೆ ಬರಲು ತಡವಾಯಿತು. ನಮ್ಮ ಜಿಲ್ಲೆಯಲ್ಲಿ ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಅತ್ಯಂತ ಹಿಂದುಳಿದವರ್ಗದ ಸಮಾಜ ಎಂದರೆ ಈ ಕೊರವ ಸಮಾಜ. ಅವರ ಮನೆಗಳಲ್ಲಿ ಒಂದು ಒಳ್ಳೆಯ ಕಾರ್ಯ ನಡೆಸುವ ಸಂದರ್ಭದಲ್ಲಿ ನಮ್ಮ ಅಧಿಕಾರಿಗಳಿಂದ ತಪ್ಪಾಗಿದೆ. ಇದನ್ನು ನಾನು ಯಾವುದೇ ಕಾರಣಕ್ಕೆ ಸಮರ್ಥನೆ ಮಾಡಿಕೊಳ್ಳುವುದಿಲ್ಲ. ಇದನ್ನು ಖಂಡಿತಾ ನಾನು ಖಂಡಿಸುತ್ತೇನೆ.ಈ ಘಟನೆ ನಡೆದ ತಕ್ಷಣವೇ ನಮ್ಮ ಸರ್ಕಾರಕ್ಕೆ ಸಂಬಂಧಪಟ್ಟಂತ ಸಚಿವರಾದ ಕೋಟ ಶ್ರೀನಿವಾಸ್ ಪೂಜಾರಿ ತಕ್ಷಣ ಭೇಟಿ ನೀಡಿ ಇದಕ್ಕೆ ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತ ಪ್ರಯತ್ನ ಮಾಡಿದ್ದಾರೆ. ಅಲ್ಲದೆ ನಿನ್ನೆ ಗೃಹ ಸಚಿವರು ಸಹ ಬಂದು ಭೇಟಿ ನೀಡಿದ್ದಾರೆ. ಗೃಹ ಇಲಾಖೆಯಿಂದ ಹಾಗೂ ಸಮಾಜ ಕಲ್ಯಾಣ ಇಲಾಖೆಯಿಂದ ಏನೇನು ಕ್ರಮಗಳನ್ನು ಕೈಗೊಳ್ಳಲು ಸಾಧ್ಯ ಆಗುತ್ತೋ ಆ ಎಲ್ಲಾ ಕ್ರಮಗಳನ್ನು ಕೈಗೊಳ್ಳುವಂತ ಆದೇಶವನ್ನು ಹಾಗೂ ಭರವಸೆಯನ್ನು ನೀಡಿ ಹೋಗಿದ್ದಾರೆ.ನಾನು ನಮ್ಮ ಜಿಲ್ಲಾಡಳಿತ ಸಂಬಂಧಪಟ್ಟಂತೆ ಅಧಿಕಾರಿಗಳಿಗೆ ತಿಳಿಸುವುದೇನೆಂದರೆ ಇತಿಮಿತಿ ವ್ಯಾಪ್ತಿಯಲ್ಲಿ ಕೆಲಸ ಕಾರ್ಯಗಳನ್ನು ಮಾಡಬೇಕು. ಸರ್ಕಾರ ಕಾರ್ಯದ ಕೆಲಸ ಮಾಡಬೇಕಾದರೆ ಯಾರ ಮನಸ್ಸಿಗೂ ನೋವು ನೋವಾಗದಂತೆ ಎಚ್ಚರಿಕೆಯಿಂದ ಕೆಲಸ ಮಾಡುವಂತಹದ್ದು ಬಹಳ ಅಗತ್ಯ ಇದೆ.

ಆ ಸೂಚನೆಯನ್ನು ಈಗಾಗಲೇ ಜಿಲ್ಲಾಧಿಕಾರಿಗಳಿಗೆ ಮತ್ತು ಉನ್ನತ ಅಧಿಕಾರಿಗಳಿಗೆ ಕೊಟ್ಟಿದ್ದೇನೆ. ಇವತ್ತು ಕೊರಗ ಸಮುದಾಯದ ಮೇಲೆ ಸುಳ್ಳು ಆರೋಪ ಹಾಕಿದ್ದಾರೆ ಎನ್ನುವುದರ ಬಗ್ಗೆ ಅವರ ಕುಟುಂಬ ಹಾಗೂ ಆ ಭಾಗದ ಜನರು ಹೇಳಿದನ್ನು ಆಲಿಸಿದ್ದೇನೆ. ಇವತ್ತು ಮಧ್ಯಾಹ್ನ 12 ಗಂಟೆಗೆ ಜಿಲ್ಲಾಧಿಕಾರಿಯೊಂದಿಗೆ ಮತ್ತೊಂದು ಸುತ್ತಿನ ಮಾತುಕತೆ ಮಾಡಲಿದ್ದೇನೆ. ಆ ಸಂದರ್ಭದಲ್ಲಿ ಗೃಹಸಚಿವರು ಏನು ಸೂಚನೆ ಕೊಟ್ಟಿದ್ದಾರೆ ಅದನ್ನು ಗಮನದಲ್ಲಿರಿಸಿ ಈ ಕೊರಗ ಕುಟುಂಬಕ್ಕೆ ಹಾಗೂ ಸಮಾಜಕ್ಕೆ ಏನು ನ್ಯಾಯವನ್ನು ಕೊಡಲಿಕ್ಕೆ ಸಾಧ್ಯವಾಗುತ್ತೋ ಅದನ್ನು ಕೊಡಲಿಕ್ಕೆ ಜಿಲ್ಲಾಡಳಿತ ಖಂಡಿತ ಸಿದ್ದ ಇದೆ. ಮುಂದೆ ಇಂಥ ಘಟನೆಗಳು ಆಗದಂತೆ ಎಚ್ಚರಿಕೆಯನ್ನು ವಹಿಸಬೇಕೆಂದು ಅಧಿಕಾರಿಗಳ ಜೊತೆ ಮಾತುಕತೆ ಮಾಡಿ ಆ ಎಚ್ಚರಿಕೆಯನ್ನು ನೀಡುತ್ತೇನೆ ಎಂದು ಸಚಿವ ಸುನಿಲ್ ಕುಮಾರ್ ಹೇಳಿದರು.

ಈ ಸಂದರ್ಭದಲ್ಲಿ ಬ್ರಹ್ಮಾವರ ತಹಸೀಲ್ದಾರ್ ರಾಜಶೇಖರ್ ಮೂರ್ತಿ, ಆಡಿಷನಲ್ ಎಸ್ಪಿ ಕುಮಾರ ಚಂದ್ರ, ಡಿವೈಎಸ್ಪಿ ಸುಧಾಕರ್ ನಾಯಕ್, ಬ್ರಹ್ಮಾವರ ವೃತ್ತ ನಿರೀಕ್ಷಕರಾದ ಅನಂತಪದ್ಮನಾಭ, ಕೋಟ ಪ್ರಭಾರ ಠಾಣಾಧಿಕಾರಿ ತಿಮ್ಮೇಶ್, ಕೋಟ ಕಂದಾಯ ಅಧಿಕಾರಿ ರಾಜು ಕೆ., ಕೋಟತಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷರು ಹಾಗೂ ಸದಸ್ಯರಾದ ಪ್ರಮೋದ್ ಹಂದೆ, ಸತೀಶ್ ಕುಂದರ್ ವಾಸು ಪೂಜಾರಿ, ವಿದ್ಯಾ ಸಾಲಿಯಾನ್, ಕೊರಗ ಮುಖಂಡರಾದ ಗಣೇಶ್ ಬಾರ್ಕೂರು, ಸ್ಥಳೀಯರಾದ ರತ್ನಾಕರ, ಸುರೇಶ್, ನಾಗರಾಜ್, ರಂಜಿತ್, ಪ್ರಸಾದ್, ಮೊದಲದವರು ಉಪಸ್ಥಿತರಿದ್ದರು.

Be the first to comment

Leave a Reply

Your email address will not be published.


*