ಜಿಲ್ಲಾ ಸುದ್ದಿಗಳು
ಶಿರಸಿ
ಜುಲೈ 16 ಹಾಗೂ 17 (ಶುಕ್ರವಾರ ಮತ್ತು ಶನಿವಾರ) ರಂದು ಆಯೋಜಿಸಿದ್ದ , ಈ ಕಾರ್ಯಕ್ರಮದಲ್ಲಿ ರೂ 780 ಪಾವತಿಸಿ ಕೋವಿ ಶೀಲ್ಡ್ ಲಸಿಕೆಯನ್ನು ಪಡೆಯಬಹುದು.
ಇಂದಿನಿಂದ ಪ್ರಾರಂಭವಾದ ಈ ಕಾರ್ಯಕ್ರಮದಲ್ಲಿ ಇಂದು ಒಟ್ಟು 517 ಜನ ಕೋವಿಡ್ ಲಸಿಕೆಯನ್ನು ಪಡೆದಿರುತ್ತಾರೆ. ಲಸಿಕೆಯನ್ನು ಪಡೆದವರು ಉತ್ತಮವಾಗಿ ಪ್ರತಿಕ್ರಿಯಿಸಿ ಇಂತಹ ಕಾರ್ಯಕ್ರಮ ಶಿರಸಿಯಲ್ಲಿ ನಿಯಮಿತವಾಗಿ ನಡೆಯಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.ಜನರು ಇದರ ಸದುಪಯೋಗ ಪಡಿಸಿಕೊಳ್ಳಬೇಕೆಂದು ಈ ಮೂಲಕ ತಿಳಿಸಿದ್ದಾರೆ.
ಇಂದಿನ ಕಾರ್ಯಕ್ರಮದಲ್ಲಿ ಮಹಾಲಕ್ಷ್ಮಿ ಮೆಮೋರಿಯಲ್ ಆಸ್ಪತ್ರೆಯ ಡಾ|| ದಿನೇಶ ಹೆಗಡೆ, ಸುಮನ್ ಹೆಗಡೆ ಹಾಗೂ ಆಸ್ಪತ್ರೆಯ ಎಲ್ಲಾ ಸಿಬ್ಬಂದಿಗಳು, ಗ್ರೀನ್ ಕೇರ್ ಸಂಸ್ಥೆಯ ಅಧ್ಯಕ್ಷರಾದ ಡಾ|| ಶಾಮ್ ಸುಂದರ್ , ಕಾರ್ಯದರ್ಶಿಗಳಾದ ಶ್ರೀ ಜಿತೇಂದ್ರ ಕುಮಾರ್ ತೋನ್ಸೆ, ನಿರ್ದೇಶಕರಾದ ಅಂಜಲಿ ಹೆಗಡೆ, ಹಾಗೂ ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ಸಿಬ್ಬಂದಿಗಳು ಉಪಸ್ಥಿತರಿದ್ದರು.
Be the first to comment