ಜಿಲ್ಲಾ ಸುದ್ದಿಗಳು
ಮಸ್ಕಿ
ಕಲೆ ಎಂಬುದು ಜಾತಿ,ಬಣ್ಣ, ವಿದ್ಯೆ,ಶ್ರೀಮಂತಿಕೆ ನೋಡಿ ಒಲಿಯುವದಿಲ್ಲ, ಅದು ಕಲಾತಪಸ್ವಿಗಳಿಗೆ ತಾನಾಗೇ ಬರುವ, ವರ.ವೈಧ್ಯನಾಗಲು, ಶಿಕ್ಷಕನಾಗಲು, ನ್ಯಾಯವಾದಿಯಾಗಲು,ಪದವಿಗಳು ಬೇಕು. ಆದರೆ ಕಲಾವಿದನಾಗಲು ಯಾವ ಪದವಿಗಳ ಅವಶ್ಯಕತೆಯಿಲ್ಲ.ಶ್ರದ್ದೆ, ಕಲೆಯಮೇಲಿನ ಪ್ರೇಮ , ಮಾಡಲೇಬೇಕೆಂಬ ಚಲ,ಸಿದ್ದಿಸಿಕೊಳ್ಳಲು ಮಾಡುವ ತಪಸ್ಸಿನಿಂದ ಯಾರುಬೇಕಾದರೂ ಕಲಾವಿದರಾಗಬಹುದು ಎಂಬುದಕ್ಕೆ ನಮ್ಮ ಹಳ್ಳಿ ಪ್ರತಿಭೆ ಶೇಖರಗೌಡ ಮಾಲಿಪಾಟೀಲರೇ ಜೀವಂತ ನಿದರ್ಶನವೆಂದು ಉಸ್ಕಿಹಾಳದ ವಾಲ್ಮೀಕಿ ಆಶ್ರಮದ ಆತ್ಮಾನಂದ ಸ್ವಾಮಿಗಳು ಮೆಚ್ಚುಗೆ ವ್ಯಕ್ತಪಡಿಸಿದರು.ಇಂದು ಮದ್ಯಾಹ್ನ ಮಸ್ಕಿಯ ಸಭಾಭವನವೊಂದರಲ್ಲಿ ಆತ್ಮಾನಂದ ಶ್ರೀಗಳ ನೇತೃತ್ವದಲ್ಲಿ ಶೇಖರಗೌಡರ ಕಲಾಭಿಮಾನಿಗಳು ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ನಂತರ ಮಾತನಾಡಿದ ಕಿರು ತೆರೆ,ರಂಗ ಕಲಾವಿದ ವೀರಭದ್ರಿ ಹೊಸಮನಿ ಬಳಗಾನೂರು ಮಾತನಾಡಿ, ಕಲಾವಿದನಾಗಲು ಯೋಗ ಮತ್ತು ಯೋಗ್ಯತೆ ಬೇಕು ಅವೆರಡೂ ಗುಣಗಳು ನಮ್ಮ ಶೇಖರಗೌಡ ಕಾಟಗಲ್ ರ ಬಳಿ ಇದೆ.ಅದಕ್ಕಾಗೆ ಅವರಿಗೆ ಬೆಳ್ಳಿತೆರೆಯ ಆ ರಹಸ್ಯ ಚಲನಚಿತ್ರ ತಂಡ ಅಭಿನಯಿಸಲು ಕೈಮಾಡಿ ಕರೆದಿದೆ.ಅವರು ಅದರಲ್ಲಿ ಖಂಡಿತ ಯಶಸ್ವಿಯಾಗಿ ಈ ಭಾಗದ ಬಹುದೊಡ್ಡ ಕಲಾವಿದರಾಗಿ ಬೆಳೆಯಲಿ ಎಂದು ಹೃದಯತುಂಬಿ ಹಾರೈಸುವೆ ಎಂದರು.ನಂತರ ಸಿದ್ದಾರ್ಥ ಹಾಲಾಪೂರು , ಆರ್,ಕೆ,ನಾಯಕ್, ಮಾತನಾಡಿದರು.ಅಭಿಮಾನಿಗಳಿಂದ ಸನ್ಮಾನಸ್ವೀಕರಿಸಿ ಮಾತನಾಡಿದ ಕಲಾವಿದ ಶೆರಖರಗೌಡ ಮಾಲಿಪಾಟೀಲ್, ಆ,ರಹಸ್ಯ ಚಿತ್ರತಂಡ ನನ್ನನ್ನು ಬಹಳ ಆತ್ಮೀಯತೆಯಿಂದ ನೋಡಿಕೊಂಡಿತು. ನಾನು ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಲು ಚಿತ್ರನಟ ಭೀಮಣ್ಣ ಕಾಚಾಪೂರು ಕಾರಣ, ಅವರೇ ನನ್ನನ್ನು ಅವರೊಂದಿಗೆ ಕರೆದೊಯ್ದು ಚಿತ್ರತಂಡಕ್ಕೆ ಪರಿಚಯಿಸಿ, ಅಭಿನಯಿಸಲು ಅವಕಾಶ ನೀಡಿದರು.
ಥ್ರಿಲ್ಲರ್ ಮಂಜು, ಮಂಡ್ಯ ನಾಗರಾಜು, ಮತ್ತು ಉಳಿದ ಕಲಾವಿದರು ನಟಿಸಲು ಮಾರ್ಗದರ್ಶನ ಮಾಡಿ ಪ್ರೋತ್ಸಾಹಿಸಿದರು.ನಾನೊಬ್ಬ ಹಳ್ಳಿಯ ಸಾಮಾನ್ಯ ವ್ಯಕ್ತಿ, ನಮ್ಮೂರಲ್ಲಿ ಕುರಿ ಕಾಯ್ದಿದ್ದೇನೆ, ನಾಟಕಗಳಲ್ಲಿ ಅಭಿನಯಿಸಿದ್ದೇನೆ, ಆದರೆ ಚಿತ್ರರಂಗದ ಪರಿಚಯವಿದ್ದಿಲ್ಲ. ಕೇವಲ ದೂರದಿಂದ ನೋಡಿ ಬೆರಗಾಗುವ ನನಗೆ ಕ್ಯಾಮೆರಾ ಎದುರಿಸುವ ಕನಸೂ ಕೂಡ ಬಿದ್ದಿದ್ದಿಲ್ಲ.ಅಂತಹದರಲ್ಲಿ ಹಿರಿತೆರೆಯ ಪ್ರಮುಖ ತಾರಾಗಣದ ಚಿತ್ರದಲ್ಲಿ ನಟಿಸುವ ಸೌಭಾಗ್ಯ ಒಲಿದಿರುವದು ನಿಮ್ಮೆಲ್ಲರ ಶುಭಾಶೀರ್ವಾದದಿಂದ .
ನೀವು ನನ್ನಂತ ಸಣ್ಣ ಕಲಾವಿದನಿಗೆ ಇಷ್ಟೆಲ್ಲ ಸನ್ಮಾನ ಮಾಡಿ ಪ್ರೀತಿ ತೋರಿಸುತ್ತಿದ್ದೀರಿ. ನಿಮ್ಮ ಪ್ರೀತಿಗೆ ನಾನು ಚಿರ ಋಣಿ ಎಂದು ಅಭಿಮಾನಿ ಮತ್ತು ಗೆಳೆಯರ ಬಳಗಕ್ಕೆ ನಮಸ್ಕರಿಸಿ ಭಾವುಕರಾದರು.ಈ ಸಂದರ್ಭದಲ್ಲಿ ಅನೇಕ ಹಿತೈಸಿಗಳು,ರಾಜಕೀಯ ಒಡನಾಡಿಗಳು, ವಾಲ್ಮೀಕಿ ಸಮಾಜದ ಬಂಧು ಮಿತ್ರರು ಆಗಮಿಸಿ ಸನ್ಮಾನಮಾಡಿ ಶುಭಕೋರಿದರು.ಈ ಕಾರ್ಯಕ್ರಮದಲ್ಲಿ ಭಾಷಾಗೋನಾಳ,ಆರ್.ಕೆ.ನಾಯಕ, ಬಸವರಾಜ ತುಗ್ಗಲದಿನ್ನಿ, ಸಿದ್ದಾರ್ಥ ಹಾಲಾಪೂರು,ಉಪನ್ಯಾಸಕ ಸುರೇಶ ಬಳಗಾನೂರು ,ಶರಣಬಸವ ಹಂಚಿನಾಳ, ವೀರಭದ್ರಿ ಬಳಗಾನೂರು, ಸಿದ್ದನಗೌಡ ಕಾಟಗಲ್,ಯಂಕೋಬ ಸುಂಕನೂರು, ಲಿಂಗರಾಜ ಕಾಟಗಲ್,ಬಸವಲಿಂಗ,ಬೆಟ್ಟಪ್ಪ ಬಸಾಪೂರು,ಮೌನೇಶ ಗ್ರಾಮಪಂಚಾಯ್ತಿ ಸದಸ್ಯರು ಸೇರಿದಂತೆ ಹಲವರಿದ್ದರು.
Be the first to comment