ಬಡ ಚಾಲಕನಿಗೆ ಸಹಾಯಕ್ಕೆ ನಿಂತ ಕರ್ನಾಟಕ ಚಾಲಕರ ಒಕ್ಕೂಟ…!!! ಉತ್ತರ ಕರ್ನಾಟಕದಿಂದ ಹರಿದು ಬಂದು ಅಭಿನಂದನೆಯ ಸುರಿಮಳೆ…!

ವರದಿ: ಚೇತನ ಕೆಂದೂಳಿ ಸಂಪಾದಕರು

ರಾಜ್ಯ ಸುದ್ದಿಗಳು

ಮುದ್ದೇಬಿಹಾಳ:
ರಾಜ್ಯದಲ್ಲಿ ಸಾಕಷ್ಟು ಸಂಘ ಸಂಸ್ಥೆಗಳು ಹುಟ್ಟಿಕೊಂಡಿವೆ. ಆದರೆ ಸಾಮಾಜಿಕವಾಗಿ ಸೇವೆ ಸಲ್ಲಿಸುವಲ್ಲಿ ಕೆಲ ಸಂಘಗಳು ಮಾತ್ರವಿದ್ದು ಇತ್ತಿಚಿಗಷ್ಟೆ ರಾಜ್ಯದಲ್ಲಿ ಸ್ಥಾಪನೆಗೊಂಡಿರುವ ಕರ್ನಾಟಕ ಚಾಲಕರ ಒಕ್ಕೂಟ(ರಿ) ಸಂಘವೂ ಸೇರ್ಪಡೆಯಾಗಿದೆ.


ಹೌದು, ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನಲ್ಲಿ ಚಾಲಕನಾಗಿದ್ದ ಮಲ್ಲು ಚಲವಾದಿ ಎಂಬ ಯುವಕನಿಗೆ ಹೃದಯ ಕಾಯಿಲೆಯಿಚಿದ ಬೆಂಗಳೂರಿನ ನಾರಾಯಣ ಹೃದಯಾಲಯದಲ್ಲಿ ದಾಖಲಾದರು. ಆದರೆ ಇವರನ್ನು ಪರಿಕ್ಷಿಸಿದ ವೈದ್ಯ ತಕ್ಷಣದಲ್ಲಿಯೇ ರೋಗಿಗೆ ರಕ್ತದ ಅವಶ್ಯವಿದೆ ಎಂದು ಅವರ ಪಾಲಕರಿಗೆ ತಿಳಿಸಿದರು. ಗೊತ್ತು ಗುರಿಯಿಲ್ಲದ ನಗರದಲ್ಲಿ ತಕ್ಷಣದಲ್ಲಿಯೇ ರಕ್ತದಾನಿಗಳನ್ನು ಹೇಗೆ ಹುಡುಕುವುದು ಎಂಬ ದುಸ್ಥಿತಿ ಎದುರಾಯಿತು.



ಸಹಾಯಹಸ್ತಕ್ಕೆ ನಿಂತ ಒಕ್ಕೂಟ:
ಚಾಲಕ ಮಲ್ಲು ಅವರ ಚಿಕಿತ್ಸೆ ಬಗ್ಗೆ ತಿಳಿದುಕೊಳ್ಳಲು ಮುದ್ದೇಬಿಹಾಳ ತಾಲೂಕಿನ ಚಾಲಕರು ದೂರವಾಣಿ ಕರೆ ಮಾಡುವ ಮೂಲಕ ವಿಚಾರಿಸಿದಾಗ ಅವರಿಗೆ ಮಲ್ಲು ಅವರ ದುಸ್ಥಿತಿಯು ತಿಳಿದು ಬಂದಿತು. ತಕ್ಷಣವೇ ಮುದ್ದೇಬಿಹಾಳ ಚಾಲಕರ ಒಕ್ಕೂಟದ ತಾಲೂಕಾ ಪ್ರಚಾರ ಸಮೀತಿ ಉಪಾಧ್ಯಕ್ಷ ಜಗದೇವರಾವ ಅವರು ತಮ್ಮ ಒಕ್ಕೂಟದ ಅಧ್ಯಕ್ಷ ಶರಣಗೌಡ ಗಂಗನಗೌಡರ ಅವರಿಗೆ ತಿಳಿಸಿದಾಗ ಅಧ್ಯಕ್ಷರು ತಮ್ಮ ಚಾಲಕರ ಒಕ್ಕೂಟದ ರಾಜ್ಯಾಧ್ಯಕ್ಷ ಜಿ.ನಾರಾಯಣಸ್ವಾಮಿ ಅವರಿಗೆ ತಿಳಿಸಿ ಬೆಂಗಳೂರಿನಲ್ಲಿರುವ ತಮ್ಮ ಒಕ್ಕೂಟದ ಪದಾಧಿಕಾರಿಗಳಿಂದ ಆಸ್ಪತ್ರೆಯಲ್ಲಿದ್ದ ಚಾಲಕ ಮಲ್ಲು ಅವರಿಗೆ ರಕ್ತ ದೊರಕುವಂತೆ ಮಾಡಿದ್ದು ಸದ್ಯಕ್ಕೆ ಮಲ್ಲು ಅವರಿಗೆ ವ್ಶೆದ್ಯರಿಂದ ಸೂಕ್ತ ಚಿಕಿತ್ಸೆ ದೊರಕುವಂತೆ ಮಾಡಿದ್ದಾರೆ.


ಒಕ್ಕೂಟಕ್ಕೆ ಅಭಿನಂದನೆ:
ಕೇವಲ ಮುದ್ದೇಬಿಹಾಳ ತಾಲೂಕಿನಲ್ಲಿ ಖಾಸಗಿ ಚಾಲಕನಾಗಿ ಸೇವೆ ಸಲ್ಲಿಸುತ್ತಿದ್ದ ಬಡವನಾದ ಮಲ್ಲು ಚಲವಾದಿ ಅವರ ಹೃದಯ ಚಿಕಿತ್ಸೆಗೆ ರಕ್ತದಾನ ಮಾಡಿದ ಕರ್ನಾಟಕ ಚಾಲಕರ ಒಕ್ಕೂಟದ ಪದಾಧಿಕಾರಿಗಳಿಗೆ ಹಾಗೂ ಸರ್ವ ಸದಸ್ಯರಿಗೂ ಸಂಘಟದ ಸದಸ್ಯ ಪರಶುರಾಮ ಹಡಲಗೇರಿ ಹಾಗೂ ಚಾಲಕನ ಕುಟುಂಬಸ್ಥರು ಅಭಿನಂದನೆ ಸಲ್ಲಿಸಿದ್ದಾರೆ.

ರಕ್ತದಾನಕ್ಕೆ ಮುಂದಾದ ದಂಪತಿಗಳು:
ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ಒಕ್ಕೂಟದ ಅಧ್ಯಕ್ಷ ಮಂಜೆಗೌಡ ಹಾಗೂ ಅವರ ಧರ್ಮಪತ್ನಿ ನೇತ್ರಾ ಅವರು ಒಟ್ಟಾಗಿ ಆಸ್ಪತ್ರೆಗೆ ದಾಖಲಾಗಿದ್ದ ಚಾಲಕ ಮಲ್ಲು ಅವರಿಗೆ ರಕ್ತದಾನಕ್ಕೆ ಮುಂದಾಗಿದ್ದು ಮಾನವಿಯತೆಗೆ ಸಾಕ್ಷಿಯಾಯಿತು. ನಂತರ ಇವರೊಂದಿಗೆ ಒಕ್ಕೂಟದ ಉಪಾಧ್ಯಕ್ಷ ಭರತ, ಪದಾಧಿಕಾರಿಗಳಾದ ಮಹೇಶ, ಪ್ರಕಾಶ ಡಂಬಲ ಅವರೂ ದಂಪತಿಗಳೊಂದಿಗೆ ಕೈಜೋಡಿಸಿ ರಕ್ತದಾನ ಮಾಡಿದ್ದಾರೆ.

“ರಾಜ್ಯದಲ್ಲಿ ಸಾಕಷ್ಟು ಚಾಲಕರ ಒಕ್ಕೂಟಗಳಿವೆ. ಆದರೆ ಹೆಸರಿಗೆ ಮಾತ್ರ ಎಂಬAತಾಗಿವೆ. ಆದರೆ ನಮ್ಮ ಒಕ್ಕೂಟವು ರಾಜ್ಯದ ಪ್ರತಿಯೊಬ್ಬ ಚಾಲಕನ ಬೆಂಬಲಕ್ಕೆ ನಿಲ್ಲುತ್ತದೆ ಎಂಬುವುದಕ್ಕ ಚಾಲಕ ಮಲ್ಲು ಅವರ ಪ್ರಕರಣವೇ ಸಾq್ಷಯಾಗಿದೆ. ಮುಂಬರುವ ದಿನಗಳಲ್ಲಿ ನಮ್ಮ ಒಕ್ಕೂಟದಿಂದ ಉಚಿತ ರಕ್ತದಾನ ಶೀಬಿರ ಹಮ್ಮಿಕೊಂಡು ಅದನ್ನು ಸರಕಾರಕ್ಕೆ ನೀಡುವ ಕಾರ್ಯಕ್ರಮ ಆಯೋಜನೆ ಮಾಡಲಾಗುವುದು.”
-ಜಗದೇವರಾವ ಚಲವಾದಿ, ಪ್ರಚಾರ ಸಮೀತಿ ಉಪಾಧ್ಯಕ್ಷರು, ಕರ್ನಾಟಕ ಚಾಲಕರ ಒಕ್ಕೂಟ, ಮುದ್ದೇಬಿಹಾಳ ಘಟಕ.

CHETAN KENDULI

Be the first to comment

Leave a Reply

Your email address will not be published.


*