ಜನ ಸ್ನೇಹಿ ಪೊಲೀಸ್ ಸೇವೆ “ಯನ್ನು ಒದಗಿಸುವ ನಿಟ್ಟಿನಲ್ಲಿ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪತ್ರಕರ್ತರೊಂದಿಗೆ ಸಂವಾದ ಸಭೆ..

ವರದಿ- ಸುಚಿತ್ರಾ ನಾಯ್ಕ ಹೊನ್ನಾವರ

ಜಿಲ್ಲಾ ಸುದ್ದಿಗಳು 

ಹೊನ್ನಾವರ

ಪೊಲೀಸರು ಜನಸ್ನೇಹಿ ಆಗುವುದಕ್ಕಿಂತ ಹೆಚ್ಚು ಕಾನೂನು ಸ್ನೇಹಿ ಆಗಿರಬೇಕು, ಆಗ ಅಪರಾಧ ಕ್ರತ್ಯ ಎಸಗುವವರಿಗೆ ಪೊಲೀಸ್ ಭಯ ಇರುತ್ತದೆ. ತೀರಾ ಹತ್ತಿರವಾದರೆ ಅಂತವರಿಗೆ ಪೊಲೀಸ್ ಭಯ ಇರುವುದಿಲ್ಲ, ಆ ನಿಟ್ಟಿನಲ್ಲಿ ಹೊನ್ನಾವರ ಪೊಲೀಸರು ಹಗಲು ರಾತ್ರಿ ಎನ್ನದೇ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ತಹಶೀಲ್ದಾರ ನಾಗರಾಜ ನಾಯ್ಕಡ್ ಹೇಳಿದರು.ಅವರು ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಕಾರ್ಯನಿರತ ಪತ್ರಕರ್ತರು ಹಾಗೂ ಪೊಲೀಸ್ ಇಲಾಖೆಯೊಂದಿಗೆ ಸೋಮವಾರ ನಡೆದ ಸಂವಾದ ಸಭೆ ಉದ್ದೇಶಿಸಿ ಮಾತನಾಡಿದರು. ಸಿಪಿಐ ಶ್ರೀಧರರವರು ಕಠಿಣ ಕ್ರಮ ತೆಗೆದುಕೊಳ್ಳುವ ಸಮಯದಲ್ಲಿ ಕಠಿಣ ಕ್ರಮ ತೆಗೆದುಕೊಂಡಿದ್ದಾರೆ. ಪ್ರಾರಂಭದಲ್ಲಿ ಅಪರಾಧಿಗೆ ಸ್ವಲ್ಪ ತಿಳಿಹೇಳಿ, ಬುದ್ದಿವಾದ ಹೇಳಿ ಸರಿಪಡಿಸುವ ಪ್ರಯತ್ನ ಮಾಡುತ್ತಿದ್ದಾರೆ. ಇನ್ನೂ ಪತ್ರಕರ್ತರು ಸಮಾಜದ ಆಗುಹೋಗುಗಳನ್ನು ತಿದ್ದಿ ಹೇಳುವವರು, ಅದರಿಂದ ನಮಗೂ ಅನುಕೂಲವಾಗುತ್ತದೆ ಎಂದರು.

CHETAN KENDULI

ಹೊನ್ನಾವರ ಪೊಲೀಸ್ ವೃತ್ತ ನಿರೀಕ್ಷಕ ಶ್ರೀಧರ್ ಎಸ್ ಆರ್ ಮಾತನಾಡಿ ಜನಸ್ನೇಹಿ ಪೊಲೀಸ್ ವ್ಯವಸ್ಥೆಗೆ ಪತ್ರಕರ್ತರ ಸಹಕಾರ ಅಗತ್ಯ, ಸಾರ್ವಜನಿಕ ರಂಗದಲ್ಲಿ ಅತಿ ಹೆಚ್ಚು ಬೆರೆಯುವ ಪೊಲೀಸ್ ಇಲಾಖೆ ಹಾಗೂ ಪತ್ರಕರ್ತರಿಗೆ ಅನೇಕ ಸವಾಲುಗಳು ಇರುತ್ತದೆ. ಹೊಗಳಿಕೆ ತೆಗಳಿಕೆ ಎಲ್ಲವನ್ನೂ ಸಮಾನವಾಗಿ ಸ್ವೀಕರಿಸಬೇಕಾಗುತ್ತದೆ. ಗುರಿ ಮುಟ್ಟುವಾಗ ಅಡೆತಡೆಗಳು ಸಹಜ. ಈ ಅಡೆತಡೆ ತೆಗೆಯಲು ಸಮನ್ವಯತೆ ಇರುವುದು ಮುಖ್ಯ. ಸ್ವಸ್ಥ, ಆರೋಗ್ಯಯುತ, ಶಾಂತಿಯುತ ಸಮಾಜ ನಿರ್ಮಿಸುವಲ್ಲಿ ಪತ್ರಕರ್ತರ ಸಹಕಾರವು ಹೆಚ್ಚಿನದಾಗಿರುತ್ತದೆ ಎಂದರು. ಉತ್ತಮ ಸೇವೆ ನೀಡಲು ನಿಮ್ಮ ಸಹಕಾರ ಅಗತ್ಯ ಎಂದು ಪತ್ರಕರ್ತರ ಸಲಹೆ ಆಲಿಸಿದರು.

ಪತ್ರಕರ್ತ ಎಂ. ಜಿ. ಹೆಗಡೆ ಮಾತನಾಡಿ ಗ್ರಾಮೀಣ ಪ್ರದೇಶದಲ್ಲಿ ಪೊಲೀಸ್ ಅದಾಲತ್ ನಡೆಯಬೇಕು ಎಂದರು. ದಿನೇಶ್ ಹೆಗಡೆ ಮಾತನಾಡಿ ಪಟ್ಟಣದಲ್ಲಿ ಟ್ರಾಫಿಕ್ ವ್ಯವಸ್ಥೆ ಇಲ್ಲದೇ ಸಾರ್ವಜನಿಕರು ಸಮಸ್ಯೆ ಅನುಭವಿಸುತ್ತಿದ್ದಾರೆ. ಈ ಸಮಸ್ಯೆಗೆ ಪರಿಹರಿಸಿ ಎಂದು ಸಲಹೆ ನೀಡಿದರು.ತಹಶೀಲ್ದಾರ ನಾಗರಾಜ ನಾಯ್ಕಡ್, ಪಿಎಸೈಗಳಾದ ಶಶಿಕುಮಾರ್, ಸಾವಿತ್ರಿ ನಾಯಕ್, ಪತ್ರಕರ್ತರ ಗೋಪಾಲಕೃಷ್ಣ ಭಟ್, ಪತ್ರಕರ್ತ ಸತೀಶ್ ತಾಂಡೇಲ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅಖಿಲ ಭಾರತ ಜರನಲಿಸ್ಟ ಫೆಡರೇಷನ್ ಹೊನ್ನಾವರ ತಾಲೂಕ ಅಧ್ಯಕ್ಷ ಸುಧೀರ್ ನಾಯ್ಕ, ಪೊಲೀಸ್ ಇಲಾಖಾ ಸಿಬ್ಬಂದಿಗಳು, ತಾಲೂಕಿನ ಕಾರ್ಯನಿರತ ಪತ್ರಕರ್ತರು ಪಾಲ್ಗೊಂಡಿದ್ದು ಸಲಹೆ ನೀಡಿದರು.ಹೂವಿನ ಕುಂಡ ಕೊಡುಗೆ : ಎಲ್ಲಾ ಪತ್ರಕರ್ತರಿಗೆ ಪೊಲೀಸ್ ಇಲಾಖೆಯ ವತಿಯಿಂದ ಜನ ಸ್ನೇಹಿ ಕಾರ್ಯಕ್ರಮದ ನೆನಪಿಗಾಗಿ ಪರಿಸರ ಸ್ನೇಹಿ ಹೂವಿನ ಗಿಡವನ್ನು ವಿತರಣೆ ಮಾಡಿದರು.

Be the first to comment

Leave a Reply

Your email address will not be published.


*