ನೀರಾವರಿ ಇಲಾಖೆಯಲ್ಲಿ ಕಿಕ್ ಬ್ಯಾಕ್ ಆರೋಪ- ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಿಂದಲೇ ತನಿಖೆ ಆಗಲಿ…!

ಅಂಬಿಗ್ ನ್ಯೂಸ್

ರಾಜ್ಯ ಸುದ್ದಿಗಳು

ಮುದ್ದೇಬಿಹಾಳ:

CHETAN KENDULI

ಪ್ರಸ್ತುತ ರಾಜ್ಯ ರಾಜಕಾರಣದಲ್ಲಿ ಬಿಜೆಪಿ ಸರಕಾರ ದೋಚುವುದಕ್ಕೆಂದೆ ಬಂದಿದೆ ಎಂದು ಮಾಜಿ ಶಾಸಕ ಸಿ.ಎಸ್.ನಾಡಗೌಡ ಅಪ್ಪಾಜಿ ಆರೋಪಿಸಿದರು.

ಪಟ್ಟಣದ ಹೊರವಲಯದಲ್ಲಿ ಖಾಸಗಿ ಲೇಔಟನಲ್ಲಿ ಕಾಗ್ರೇಸ್ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ‌ ಅವರ ಜನ್ಮದಿನದಂದು ಶನಿವಾರ ಸಸಿ ನೆಟ್ಟು ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ರಾಜ್ಯದ ಮುಖ್ಯಮಂತ್ರಿ ಕುಟುಂಬದ ವಿರುದ್ಧವೇ ಅದೇ ಪಕ್ಷದಲ್ಲಿರುವ ನಾಯಕರು ಟೀಕಿಸುತ್ತಿದ್ದಾರೆ. ನೀರಾವರಿ ಇಲಾಖೆಯಲ್ಲಿ ಕೋಟ್ಯಾಂತರ ರೂಪಾಯಿ ಕಿಕ್ ಬ್ಯಾಕ್ ಸಂದಾಯವಾಗಿದೆ ಎಂದು ಹೇಳುತ್ತಿದ್ದಾರೆ.ಜಿಂದಾಲ್ ಕಂಪನಿಯಿಂದಲೂ ಕಿಕ್ ಬ್ಯಾಕ್ ಪಡೆದುಕೊಳ್ಳಲಾಗಿದೆ ಎಂಬ ಆರೋಪ ಮಾಡುತ್ತಿದ್ದಾರೆ.ಈ ಸರಕಾರ ರಾಜ್ಯದ ಜನರ ಹಿತ ಕಾಯುವ ಬದಲು ದೋಚಲು ಇಳಿದಿದೆ ಎಂದು ಆರೋಪಿಸಿದರು.

ಈ ಕಿಕ್ ಬ್ಯಾಕ್ ಪ್ರಕರಣಗಳನ್ನು ಸಿಬಿಐ ತನಿಖೆಗೊಳಪಡಿಸದೇ ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಅಥವಾ ಹಾಲಿ ನ್ಯಾಯಮೂರ್ತಿಗಳನ್ನು ನೇಮಿಸಿ ತನಿಖೆ ಕೈಗೊಂಡು ಸತ್ಯವನ್ನು ಜನರ ಎದುರು ಬಹಿರಂಗಗೊಳಿಸಬೇಕು ಎಂದು ಆಗ್ರಹಿಸಿದರು. ಏಪಿಎಂಸಿ ನಿರ್ದೇಶಕ ವಾಯ್.ಎಚ್.ವಿಜಯಕರ್, ಎನ್.ಎಸ್.ಯೂ.ಐ ಜಿಲ್ಲಾಧ್ಯಕ್ಷ ಸದ್ದಾಂ ಕುಂಟೋಜಿ, ಯುವ ಕಾಂಗ್ರೆಸ್ ಅಧ್ಯಕ್ಷ ಮಹ್ಮದರಫೀಕ್ ಶಿರೋಳ, ಪುರಸಭೆ ಸದಸ್ಯರು, ಮಾಜಿ ಸದಸ್ಯರು ಇದ್ದರು.

Be the first to comment

Leave a Reply

Your email address will not be published.


*