ಕಂದಾಯ ನಿರೀಕ್ಷಕರ ಕಚೇರಿ ಸ್ಥಳಾಂತರಿಸದಿರಲು ಸಹಾಯಕ ಆಯುಕ್ತರಿಗೆ ಮನವಿ..

ವರದಿ- ಸುಚಿತ್ರಾ ನಾಯ್ಕ ಹೊನ್ನಾವರ

ಜಿಲ್ಲಾ ಸುದ್ದಿಗಳು 

ಭಟ್ಕಳ

ಪಟ್ಟಣದ ಸೂಸಗಡಿಯ ಕಂದಾಯ ನಿರೀಕ್ಷಕರ ಕಛೇರಿಯು ಪಟ್ಟಣದ ಭಾಗದ ಎಲ್ಲರಿಗೂ ಅನುಕೂಲವಾಗುವಂತಹ ಸ್ಥಳವಾದ ಪುರಸಭೆ ಕಛೇರಿಯ ಪಕ್ಕದಲ್ಲಿದೆ. ಇದರಿಂದ ಪಟ್ಟಣ ಭಾಗದ ಸುತ್ತಲಿನ ಎಲ್ಲರಿಗೂ ಸರಳವಾಗಿ ಕಛೇರಿಯನ್ನು ತಲುಪಲು ಹಾಗೂ ಎಲ್ಲರಿಗೂ ಅನುಕೂಲವಾಗುವಂತೆ ಹತ್ತಿರದಲ್ಲಿರುವುದರಿಂದ ಅತೀ ಹೆಚ್ಚು ಜನರು ಸಮಯಕ್ಕೆ ಸರಿಯಾಗಿ ತಮ್ಮ ಸೇವೆಯನ್ನು ಪಡೆಯುತ್ತಿದ್ದಾರೆ. 

CHETAN KENDULI

ಗ್ರಾಮ ಲೆಕ್ಕಾಧಿಕಾರಿಗಳು ಮತ್ತು ಕಂದಾಯ ನಿರೀಕ್ಷಕರ ಕಚೇರಿಯನ್ನು ಈಗಿರುವ ಪುರಸಭೆ ಕಟ್ಟಡದ ಪಕ್ಕದ ಕಚೇರಿಯಲ್ಲೇ ಮುಂದುವರಿಸಬೇಕು. ಯಾವುದೇ ಕಾರಣಕ್ಕೂ ಇದನ್ನು ಇಲ್ಲಿಂದ ಬೇರೆ ಕಡೆ ಸ್ಥಳಾಂತರಿಸಬಾರದು. 

ಈಗಿರುವ ಕಛೇರಿಯನ್ನು ಜನರಿಗೆ ಓಡಾಡಲು ಅನಾನೂಕೂಲವಾಗುವಂತಹ ಅಂಜುಮಾನ್ ಕಾಲೇಜಿಗೆ ಹೋಗುವ ದಾರಿಯಲ್ಲಿರುವ ಹಳೆ ಎ ಸಿ ಕಛೇರಿಗೆ ಸ್ಥಳಾಂತರಿಸಲು ಒತ್ತಡ ಬಂದಿರುವುದಾಗಿ ಗೊತ್ತಾಗಿದೆ. ಸಾರ್ವಜನಿಕರ ಹಿತದೃಷ್ಟಿಯಿಂದ ಕಂದಾಯ ನಿರೀಕ್ಷಕರ ಕಚೇರಿಯನ್ನು ಈಗಿರುವ ಸ್ಥಳದಲ್ಲೇ ಮುಂದುವರಿಸಬೇಕು. ಯಾವುದೇ ಕಾರಣಕ್ಕೂ ಈ ಕಚೇರಿಯನ್ನು ಸ್ಥಳಾಂತರ ಮಾಡಬಾರದು ಎಂದು ಕ್ರಿಯಾಶೀಲ ಗೆಳೆಯರ ಬಳಗದಿಂದ ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು.

Be the first to comment

Leave a Reply

Your email address will not be published.


*