ಜಿಲ್ಲಾ ಸುದ್ದಿಗಳು
ಭಟ್ಕಳ
ಮುರ್ಡೇಶ್ವರ ಲಯನ್ಸ್ ಕ್ಲಬ್ ೨೦೨೦-೨೧ನೇ ಲಯನ್ ವರ್ಷದ ತನ್ನ ಕಾರ್ಯಚಟುವಟಿಕೆಗಳಿಗಾಗಿ ಕರ್ನಾಟಕ ಹಾಗೂ ಗೋವಾ ರಾಜ್ಯಗಳನ್ನೊಳಗೊಂಡ ೧೧೦ ಲಯನ್ಸ್ ಕ್ಲಬ್‌ಗಳಲ್ಲಿ ೩೧೭ಬಿ ಲಯನ್ ಜಿಲ್ಲೆಗಳ ಹಲವಾರುಪ್ರಶಸ್ತಿಯನ್ನುತನ್ನದಾಗಿಸಿಕೊಂಡಿದೆ.ಇತ್ತೀಚೆಗೆ ನಡೆ ಕಾರ್ಯಕ್ರಮದಲ್ಲಿ ಗೌರೀಶ ಆರ್. ನಾಯ್ಕ ನೇತೃತ್ವದಲ್ಲಿ ಮಾಡಿದ ಕಾರ್ಯಕ್ರಮ “ಮಹಿಳೆಯರ ಸಬಲೀಕರಣಕ್ಕಾಗಿ ಹಮ್ಮಿಕೊಂಡ ಚಟುವಟಿಕೆ”, “ಕೋವಿಡ್ ಕಾಲದ ಸೇವಾ ಕಾರ್ಯ”, “ಹಸಿವು ಮುಕ್ತ ಕಾರ್ಯಕ್ರಮ”, “ಪರಿಸರ ಸಂರಕ್ಷಣೆ”, “ಶಾಲೆಗಳಿಗೆ ಶೈಕ್ಷಣಿಕ ಕಿಟ್ ವಿತರಣೆ”, “ರಸ್ತೆ ಅಪಘಾತ ಜಾಗೃತಿ ಕಾರ್ಯಕ್ರಮ” ಸೇರಿದಂತೆ ವಿವಿಧ ಕಾರ್ಯಕ್ರಮಗಳಿಗೆ ಕ್ಲಬ್ ೦೬ ಪ್ರಶಸ್ತಿಗಳ ಜೊತೆಗೆ “ಔಟ್‌ಸ್ಟಾöಂಡಿAಗ್ ಕ್ಲಬ್” ಪ್ರಶಸ್ತಿಯನ್ನ ಕೂಡಾ ತನ್ನದಾಗಿಸಿಕೊಂಡಿದೆ.
ಅಧ್ಯಕ್ಷ ಗೌರೀಶ ನಾಯ್ಕ ಅವರಿಗೆ “ಔಟ್‌ಸ್ಟಾöಡಿಂಗ್ ಪ್ರೆಸಿಡೆಂಟ್” ಪ್ರಶಸ್ತಿ, ಕಾರ್ಯದರ್ಶಿ ನಾಗೇಶ ಮಡಿವಾಳ ಅವರಿಗೆ “ಬೆಸ್ಟ್ ಲಯನ್ ಸೆಕ್ರೆಟರಿ” ಪ್ರಶಸ್ತಿ, ಡಾ. ಸುನೀಲ್ ಜತ್ತನ್ ಅವರಿಗೆ “ಡೆಡಿಕೇಟೆಡ್ ಹ್ಯೂಮ್ಯಾನಿಟಿ ಸರ್ವಿಸ್” ಪ್ರಶಸ್ತಿ, ಎಮ್.ವಿ ಹೆಗಡೆ ಅವರಿಗೆ “ಬೆಸ್ಟ್ ಕೋರ್ ಕಮಿಟಿ ಮೆಂಬರ್” ಪ್ರಶಸ್ತಿ, ನಾಗರಾಜ ಭಟ್ ಅವರಿಗೆ “ಬೆಸ್ಟ್ ಕೋರ್ ಕಮಿಟಿ ಮೆಂಬರ್” ಪ್ರಶಸ್ತಿ, ಮಂಜುನಾಥ ನಾಯ್ಕ ಅವರಿಗೆ “ಬೆಸ್ಟ ವಿಸನ್ ಕೇರ್” ಪ್ರಶಸ್ತಿ, ಡಾ. ವಾಧಿರಾಜ ಭಟ್ ಅವರಿಗೆ “ಬೆಸ್ಟ್ ಕ್ಯಾಟರಾಕ್ಟ್ ಆಪರೇಶನ್” ಪ್ರಶಸ್ತಿ, ಫಿಲಿಫ್ ಅಲ್ಮೇಡಾ ಅವರಿಗೆ “ಕೋಸ್ಟಲ್ ಏರಿಯಾ ಫಾರೆಸ್ಟಿç” ಪ್ರಶಸ್ತಿ ಲಭಿಸಿದೆ.
ಪ್ರಶಸ್ತಿಗಳನ್ನು ಇತ್ತೀಚೆಗೆ ಕುಮಟಾದ “ಔರಾ ರೆಸಾರ್ಟ್”ಲ್ಲಿ ನಡೆದ ಲಯನ್ ಜಿಲ್ಲೆಗಳ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಹಿಂದಿನ ಜಿಲ್ಲಾ ಲಯನ್ ಗವರ್ನರ್ ಡಾ. ಗಿರೀಶ್ ಕುಚಿನಾಡ್ ಅವರು ಪ್ರಶಸ್ತಿ ವಿತರಿಸಿದರು. ಕಾರ್ಯಕ್ರಮದಲ್ಲಿ ಲಯನ್ ರ‍್ನರ್ ಶ್ರೀಕಾಂತ ಮೋರೆ, ಲಯನ್ ಪ್ರಮುಖರಾದ ರವಿ ಹೆಗಡೆ ಹೂವಿನಮನೆ, ಸುಗುಲಾ ಯಲ್ಲಮಲಿ ಮೊದಲಾದವರು ಉಪಸ್ಥಿತರಿದ್ದರು.
Be the first to comment