ಮಾತುಬಾರದ ಪ್ರಾಣಿಗಳಿಗೆ ಜಾತಿ-ಧರ್ಮಗಳಿಲ್ಲ – ರಾಮ್ ಕುಮಾರ್

ವರದಿ ಹರೀಶ್ ದೊಡ್ಡಬಳ್ಳಾಪುರ

ರಾಜ್ಯ ಸುದ್ದಿಗಳು 

ದೊಡ್ಡಬಳ್ಳಾಪುರ 

ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ ಇಂದು ಕರ್ನಾಟಕ ರಾಜ್ಯ ಪ್ರಾಣಿ-ಪಕ್ಷಿಗಳ ದಾಸೋಹ ಸೇವಾ ಟ್ರಸ್ಟ್ ನ ಮೊದಲನೇ ವಾರ್ಷಿಕೋತ್ಸವದ ಸಮಾರಂಭವನ್ನು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ತಾಲೂಕಿನ ಹಲವು ಗಣ್ಯರು ಹಾಗೂ ವಿವಿಧ ಧರ್ಮಗಳ ಧರ್ಮಗುರುಗಳು ಪಾಲ್ಗೊಂಡಿದ್ದು
ಕಾರ್ಯಕ್ರಮವನ್ನು ದೀಪ ಬೆಳಗುವ ಮೂಲಕ ಉದ್ಘಾಟಿಸಲಾಯಿತು. ಮಹಾಶಿವರಾತ್ರಿ ಮತ್ತು ವಾರ್ಷಿಕೋತ್ಸವದ ಅಂಗವಾಗಿ ಕಲಾಪ್ರದರ್ಶನ ವೇದಿಕೆ ಆಯೋಜಿಸಲಾಗಿತ್ತು ವೇದಿಕೆಯಲ್ಲಿ ಭಾರತನಾಟ್ಯ ಸೇರಿದಂತೆ ಹಲವು ಮನೋರಂಜನಾ ಕಾರ್ಯಕ್ರಮಗಳನ್ನು ಪ್ರದರ್ಶಿಸಲಾಯಿತುಕರ್ನಾಟಕ ರಾಜ್ಯ ಪ್ರಾಣಿ ಪಕ್ಷಿಗಳ ದಾಸೋಹ ಸೇವಾ ಟ್ರಸ್ಟ್ ನ ಪ್ರಥಮ ವಾರ್ಷಿಕೋತ್ಸವದ ಅಂಗವಾಗಿ ಸರ್ವಧರ್ಮ ಸಮನ್ವಯತೆ ಸಾರುವ ನಿಟ್ಟಿನಲ್ಲಿ ಹಿರಿಯ ಧರ್ಮಗುರುಗಳನ್ನು ಸನ್ಮಾನಿಸಲಾಯಿತು.

ಈ ಟ್ರಸ್ಟ್ ವಸುದೇವ ಕುಟುಂಬಂ ಎಂಬ ವಿಶ್ವವಾಣಿ ಅಡಿಯಲ್ಲಿ ಸಾಗುತ್ತಿದ್ದು ನಮ್ಮಲ್ಲಿ ಹಿಂದೂ-ಮುಸ್ಲಿಂ-ಕ್ರಿಶ್ಚಿಯನ್ ಎಂಬ ಧರ್ಮ ಬೇಧವಿಲ್ಲದೆ ಸರ್ವರೂ ಒಗ್ಗೂಡಿ ಕಾರ್ಯನಿರ್ವಹಿಸುತ್ತಿದ್ದೇವೆ ಮನುಷ್ಯರಿಗೆ ಧರ್ಮ-ಜಾತಿ ಎಲ್ಲವೂ ಉಂಟು ಆದರೆ ಮಾತುಬಾರದ ಪ್ರಾಣಿ-ಪಕ್ಷಿಗಳಿಗೆ ಯಾವ ಜಾತಿ ಧರ್ಮಗಳ ಬೇಧಭಾವವಿಲ್ಲ ಮಾನವೀಯತೆ ದೃಷ್ಟಿಯಿಂದ ಎಲ್ಲರೂ ಈ ಒಳ್ಳೆಯ ಕಾರ್ಯಕ್ಕೆ ತಮ್ಮ ಸಹಾಯ ಹಸ್ತ ನೀಡಿ ಪಶು ಪಕ್ಷಿ ಸಂಕುಲವನ್ನು ಉಳಿಸಲು ಸಹಕರಿಸಬೇಕೆಂದು ಕರ್ನಾಟಕ ರಾಜ್ಯ ಪ್ರಾಣಿ-ಪಕ್ಷಿಗಳ ದಾಸೋಹ ಸೇವಾ ಟ್ರಸ್ಟ್ ಸಂಘಟನಾ ಕಾರ್ಯದರ್ಶಿ ರಾಮ್ ಕುಮಾರ್ ಮನವಿ ಮಾಡಿದರು.

CHETAN KENDULI

ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಪ್ರಾಣಿ-ಪಕ್ಷಿಗಳ ದಾಸೋಹ ಸೇವಾ ಟ್ರಸ್ಟ್ ನ ಸಂಸ್ಥಾಪಕ ಅಧ್ಯಕ್ಷರಾದ ಮುನಿರಾಜು ಹಾಗೂ ಟ್ರಸ್ಟ್ ನ ಎಲ್ಲಾ ಪದಾಧಿಕಾರಿಗಳು ಸದಸ್ಯರು ಉಪಸ್ಥಿತರಿದ್ದರು

Be the first to comment

Leave a Reply

Your email address will not be published.


*