ಜಿಲ್ಲಾ ಸುದ್ದಿಗಳು
ಬಾಗಲಕೋಟೆ:
ರಾಜ್ಯದಲ್ಲಿ ಪಿಹೆಚ್‍ಹೆಚ್ ಪಡಿತರ ಚೀಟಿ ಕೋರಿ ಸಲ್ಲಿಸಿರುವ 307614 ಅರ್ಜಿಗಳು ಹಾಗೂ ಎಪಿಎಲ್ ಪಡಿತರ ಚೀಟಿ ಕೋರಿ ಸಲ್ಲಿಸಿರುವ ಎಪಿಎಲ್ ಅರ್ಜಿಗಳ ಪೈಕಿ 2436 ಅರ್ಜಿದಾರರು ಪಡಿತರವನ್ನು ಪಡೆಯಲು ದಾಖಲಿಸರುವ ಅರ್ಜಿಗಳು ವಿಲೆವಾರಿಗೆ ಬಾಕಿ ಇದ್ದು, ಸರ್ಕಾರದ ಆದೇಶದಂತೆ ಕೋರೊನಾ ಹಿನ್ನಲೆಯಲ್ಲಿ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಿರುವ ಕುಟುಂಬಗಳಿಗೆ ಮೇ ಮತ್ತು ಜೂನ್ ಮಾಹೆಯ 2 ತಿಂಗಳಿಗೆ ಆಹಾರಧಾನ್ಯ ವಿತರಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಅರ್ಜಿದಾರರು ಆನಲೈನ್‍ನಲ್ಲಿ ಪಡಿತರ ಚಿಟಿಗಾಗಿ ಸಲ್ಲಿಸಿರುವ ಅರ್ಜಿಯ ಸಂಖ್ಯೆಯನ್ನು ನ್ಯಾಯಬೆಲೆ ಅಂಗಡಿಗೆ ಒದಗಿಸಿ ನಂತರ ಅರ್ಜಿದಾರರು ಆಧಾರ ಸಂಖ್ಯೆ ಹಾಗೂ ಸಂಬಂಧಿಸಿದ ದಾಖಲೆ ಪ್ರತಿಯನ್ನು ನ್ಯಾಯಬೆಲೆ ಅಂಗಡಿಗೆ ನೀಡಬೇಕು. ನ್ಯಾಯಬೆಲೆ ಅಂಗಡಿಯ ವರ್ತಕರು ಆಧಾರ ಸಂಖ್ಯೆಯನ್ನು ಇಲಾಖೆಯ ದತ್ತಾಂಶದಲ್ಲಿ ನಮೂದಿಸಿ ಸದರಿ ಆಧಾರ ಸಂಖ್ಯೆಗೆ ಈಗಾಗಲೇ ಪಡಿತರ ಚೀಟಿಯನ್ನು ವಿತರಿಸಲಾಗಿದೆ ಅಥವಾ ಸದರಿ ಆಧಾರ ಸಂಖ್ಯೆ ಇನ್ನಾವುದಾದರು ಚಾಲ್ತಿ ಪಡಿತರ ಚೀಟಿಯಲ್ಲಿ ಲಭ್ಯವಿದೆಯೆ ಎಂದು ಪರಿಗಣಿಸಬೇಕು.
ದತ್ತಾಂಶದಲ್ಲಿ ಸದರಿ ಆಧಾರ ಸಂಖ್ಯೆಗೆ ಯಾವುದೇ ಪಡಿತರ ಚೀಟಿ ವಿತರಣೆಯಾಗದೆ ಇದ್ದಲ್ಲಿ ಅಥವಾ ಚಾಲ್ತಿ ಪಡಿತರ ಚೀಟಿಯಲ್ಲಿ ಸದರಿ ಆಧಾರ ಸಂಖ್ಯೆ ಲಭ್ಯವಿದ್ದಲಕೇಂದ್ರ ಅಂತಹ ಅರ್ಜಿದಾರರಿಗೆ ಪಡಿತರ ಅಕ್ಕಿ ವಿತರಿಸಲಾಗುವುದು.
ಆದ್ಯತಾ (ಪಿಹೆಚ್‍ಹೆಚ್) ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸದಲ್ಲಿ ಅಂತಃ ಅರ್ಜಿದಾರರಿಗೆ ಪ್ರತಿ ಮಾಹೆ 10 ಕೆಜಿ ಅಕ್ಕಿಯನ್ನು ಉಚಿತವಾಗಿ ವಿತರಿಸಲಾವುದು. ಆದ್ಯತೇತರ(ಎಪಿಎಲ್) ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಿದಲ್ಲಿ ಎಪಿಎಲ್ ದರದಲ್ಲಿ ಪಡಿತರ ಖರೀದಿಸಲು ಸಮ್ಮತಿ ಸೂಚಿಸಿರುವ ಅರ್ಜೀಗಳಿಗೆ ಸಹಾಯಧನ ಯುಕ್ತ ದರ ಪ್ರತಿ ಕೆಜಿಗೆ 15 ರೂ.ಗಳಂತೆ ಪ್ರತಿ ಅರ್ಜಿದಾರರಿಗೆ 10 ಕೆ.ಜಿ ಅಕ್ಕಿಯನ್ನು ವಿತರಿಸಲಾಗುವುದು.
ಪಡಿತರ ಪಡೆಯುವ ಅರ್ಜಿದಾರರಿಂದ ಆಧಾರ ದೃಢಿಕೃತ ಅಥವಾ ಬೆರಳಚ್ಚು ಬಯೋಮೆಟ್ರಿಕ್ ಅನ್ನು ಪಡೆದು ಪಡಿತರವನ್ನು ವಿತರಿಸಲಾಗುವುದು. ಈ ಸೌಲಭ್ಯವನ್ನು ಮೇ ಮತ್ತು ಜೂನ್ ಮಾಹೆಗಳ ಅವಧಿಗಾಗಿ ಒದಗಿಸಲಾಗಿದೆ. ಈ ಸೌಲಭ್ಯವನ್ನು ಉಲ್ಲೇಖಿತ ಸರ್ಕಾರದ ಆದೇಶದಂತೆ ಕೋರೊನಾ ವೈರೆಸ್ ತುರ್ತು ಪರಿಸ್ಥಿತಿಯಲ್ಲಿ ಜಾರಿಗೊಳಿಸಿದ್ದು, ಈ ಹಿನ್ನಲೆಯಲ್ಲಿ ಜಾರಿಯಲ್ಲಿರುವ ನಿಯಮಗಳಾದ ಸಾಮಾಜಿಕ ಅಂತರ, ಮಾಸ್ಕ ಧರಿಸುವುದು, ಸ್ವಚ್ಚತೆಯನ್ನು ತಪ್ಪದೆ ಪಾಲಿಸುವುದು ಅವಶ್ಯಕವಾಗಿರುತ್ತದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
Be the first to comment