ಸರಕಾರಿ ಶಾಲೆಯ ನೂತನ ಎಸ್ಡಿಎಂಸಿ ಯ ಸಮಿತಿ ರಚನೆ

ವರದಿ ಗ್ಯಾನಪ್ಪ ದೊಡ್ಡಮನಿ ಮಸ್ಕಿ

ಜಿಲ್ಲಾ ಸುದ್ದಿಗಳು 

 

ಮಸ್ಕಿ

CHETAN KENDULI

ತಾಲೂಕಿನ ಮೆದಿಕಿನಾಳ ಗ್ರಾಮದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈ ಹಿಂದಿನ ಎಸ್ಡಿಎಂಸಿ ಅವಧಿಯು ಮುಗಿದಿದ್ದು, 2022 ನೇ ಸಾಲಿನ ನೂತನ ಎಸ್ಡಿಎಂಸಿ ಸಮಿತಿಯನ್ನು ನೇಮಕ ಮಾಡಲಾಯಿತು.ಒಟ್ಟು 18 ಎಸ್ಡಿಎಂಸಿ ಸದಸ್ಯರುಗಳ ಪೈಕಿ ಪ.ಜಾ -05 ಪು-2, ಮ-3,ಪ.ಪಂ-04 ಪು-2, ಮ-2,ಮುಸ್ಲಿಂ-01 ಪು-01, ಇತರೆ -08 ಪು-04, ಮ-04 ಒಟ್ಟಿನಲ್ಲಿ ಎಲ್ಲಾ ವರ್ಗದವರಿಗೂ ಸಮಾನ ಸದಸ್ಯ ಸ್ಥಾನವನ್ನು ಹಂಚಿಕೆ ಮಾಡಬೇಕೆಂಬುದು ಶಾಲೆಯ ಮುಖ್ಯೋಪಾಧ್ಯಾಯರ ಶ್ರಮ ಪ್ರಮುಖವಾಗಿತ್ತು. ಎಸ್ಡಿಎಂಸಿ ಸದಸ್ಯರು18 ಸೇರಿ ಪದ ನಿಮಿತ್ಯ -03, ನಾಮ ನಿರ್ದೇಶನ -03 ಒಟ್ಟು ಎಸ್ಡಿಎಂಸಿ ಸದಸ್ಯರುಗಳ ಬಲ 24 ಸಂಖ್ಯೆಯಾಗಿದೆ.ನಂತರ ಅಧ್ಯಕ್ಷ ಆಯ್ಕೆ ಪ್ರಕ್ರಿಯೆ ನಡೆಸಲಾಯಿತು ಇಬ್ಬರು ಅಧ್ಯಕ್ಷ ಆಕಾಂಕ್ಷಿಗಳು ಕಣದಲ್ಲಿ ಇದ್ದರು *.ಅಮರೇಗೌಡ *.ಗಂಗಪ್ಪ ಇಬ್ಬರಲ್ಲಿ 18 ಸದಸ್ಯರ ಬೆಂಬಲದೊಂದಿಗೆ ಅಧ್ಯಕ್ಷರಾಗಿ ಗಂಗಪ್ಪ ತಂದೆ ದುರುಗಪ್ಪ ರನ್ನು ಅಧ್ಯಕ್ಷ ಆಕಾಂಕ್ಷಿ ಅಮರೇಗೌಡ ಗಂಗಪ್ಪ ರನ್ನೆ ಆಯ್ಕೆ ಮಾಡಿ ಎಂದು ತಮ್ಮ ಸ್ಥಾನವನ್ನು ಬಿಟ್ಟು ಸರಳತೆಯನ್ನು ಮೆರೆದರು.ಅವಿರೋಧವಾಗಿ ಉಪಾಧ್ಯಕ್ಷೆಯಾಗಿ ಶರಣಮ್ಮ ಗಂಡ ಚನ್ನಬಸಯ್ಯ ರನ್ನು ಆಯ್ಕೆ ಮಾಡಲಾಯಿತು. ನಂತರ ಆಯ್ಕೆಯಾದಂತಹ ಅಧ್ಯಕ ಮತ್ತು ಉಪಾಧ್ಯಕ್ಷೆ ಯರನ್ನುಅಭಿನಂದಿಸಿ ಸಿಹಿ ತಿನಿಸಿದರು.

ನಂತರ ಮಾತನಾಡಿದ ಮುಖ್ಯೋಪದ್ಯಾಯರಾದ ಮಲ್ಲಮ್ಮ ಸರಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆ ಮೆದಿಕಿನಾಳ ಎಂದು ಬದಲಾದ ಸಂದರ್ಭದಲ್ಲಿ ನಾನು ಈ ಶಾಲೆಗೆ ಬಂದೆ ಅಂದಿನಿಂದಲೂ ಇಂದಿನವರೆಗೆ ನಾನು ಒಂದು ಜಟಕಾ ಬಂಡಿಯ ಎರಡು ಗಾಲಿಗಳು ಹೇಗೆ ತಿರುಗುತ್ತವೆಯೋ ಹಾಗೇಯೇ ನಮ್ಮ ಸಿಬ್ಬಂದಿವರ್ಗ ಮತ್ತು ನಾವು ಎಸ್ಡಿಎಂಸಿ ಸದಸ್ಯರು ಗಳ ಸಹಾಯ ದಿಂದ ನನ್ನ ಕೈಲಾದಷ್ಟು ಶಾಲೆಯ ಅಭಿವೃದ್ದಿ ಕಾರ್ಯಗಳನ್ನು ಮಾಡಿಸಿದ್ದೇನೆ ಇನ್ನೂ ಮುಂದೆಯೂ ಹಾಗೆಯೇ ನಡೆಯಲಿ ಎಂಬುದು ನಮ್ಮ ಆಶಯ ಎಂದರು ಹಾಗೂ ಇದೇ ಶನಿವಾರ ದಂದು ಪ್ರಥಮ ಸಭೆಯನ್ನು ನಡೆಸಲಾಗುವುದು ಎಂದು ನೂತನ ಎಸ್ಡಿಎಂಸಿ ಸಮಿತಿಗೆ ತಿಳಿಸಿದರು.ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ 18 ನೂತನ ಎಸ್ಡಿಎಂಸಿ ಸದಸ್ಯರುಗಳನ್ನು ಈ ಕೆಳಕಂಡಂತೆ ಆಯ್ಕೆ ಮಾಡಲಾಗಿದೆ. ಸದಸ್ಯರುಗಳಾದ ನಾಗರಾಜ ತಂದೆ ಹುಲುಗಪ್ಪ, ದೊಡ್ಡಬಸವ ತಂದೆ ದುರಗಪ್ಪ, ಶೀಲಾ ಗಂಡ ಬಸವರಾಜ, ಹುಲಿಗೆಮ್ಮ ಗಂಡ ದೇವಪ್ಪ, ಬಸಮ್ಮ ಗಂಡ ಶೇಖರಪ್ಪ,ಗಂಗಪ್ಪ ತಂದೆ ದುರುಗಪ್ಪ, ಅಮರೇಶ ತಂದೆ ಈರಪ್ಪ, ಲಕ್ಷ್ಮೀ ಗಂಡ ಸಿದ್ದಪ್ಪ, ರತ್ನಮ್ಮ ಗಂಡ ಅಮರೇಶ,ಲಾಲ್ ಸಾಬ್ ತಂದೆ ದಾದೆ ಸಾಬ್, ಛತ್ರಪ್ಪ ತಂದೆ ಬಾಲಪ್ಪ, ಸುರೇಶ ತಂದೆ ಆದಪ್ಪ, ಸೂಗೂರಪ್ಪ ತಂದೆ ಶ್ರೀಶೈಲ,

ಅಮರೇಗೌಡ ತಂದೆ ನಿಂಗನಗೌಡ,ಶಾಂತಮ್ಮ ಗಂಡ ಮಹಾಂತಗೌಡ,ಶರಣಮ್ಮ ಗಂಡ ಚನ್ನ ಬಸಯ್ಯ,ಲಕ್ಷ್ಮೀ ಗಂಡ ಲಿಂಗಪ್ಪ, ಸರಸ್ವತಿ ಗಂಡ ತಿಪ್ಪಣ್ಣ ಇದೇ ಸಂದರ್ಭದಲ್ಲಿ ಸರಕಾರಿ ಮಾದರಿ ಹಿರಿಯ ಶಾಲೆ ಮು.ಗು.ಮಲ್ಲಮ್ಮ, ಮಸ್ಕಿ ವಲಯದ ಶಿಕ್ಷಣ ಸಂಯೋಂಕರಾದ ರಾಮಚಂದ್ರ ನಿರಾಳೆ,ಮೆದಿಕಿನಾಳ ವಲಯದ ಸಿ. ಆರ್. ಪಿ ರಾಜು ವಲಿಕಾರ್ , ಮೆದಿಕಿನಾಳ ಪ್ರೌಢ ಶಾಲೆ ಮು.ಗು ಶ್ರೀ ಬಸಪ್ಪ ಮುಳ್ಳೂರ,ಶಾಲೆಯ ಶಿಕ್ಷಕರುಗಳಾದ ಶಿವಪ್ಪ, ದೇವಪ್ಪ, ಚಾಂದ್ ಖಾಜ, ಶ್ರೀಕಾಂತಮ್ಮ ಸೇರಿದಂತೆ ಗ್ರಾಮದ ಸಾರ್ವಜನಿಕರು ಇದ್ದರು.

Be the first to comment

Leave a Reply

Your email address will not be published.


*