ರಾಜ್ಯ ಸುದ್ದಿಗಳು
ನಾರಾಯಣಪುರ:
ಕೊರೊನಗೆ ತತ್ತರಿಸಿ ದೇಶವೇ ಕಂಗಲಾಗಿದ್ದರೆ ಸುರಪುರ ಕ್ಷೇತ್ರದ ಶಾಸಕ ಹಾಗೂ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ನಿಗಮ ಅಧ್ಯಕ್ಷ ನರಸಿಂಹನಾಯಕ (ರಾಜೂಗೌಡ್ರು) ಅವರು ಕ್ಷೇತ್ರದ ವಾ ವಿವಿಧ ಗ್ರಾಮಗಳಿಗೆ ಸಂಚರಿಸಿ ಜನಜಾಗೃತಿ ಮೂಡಿಸುವಲ್ಲಿ ತೊಡಗಿಕೊಂಡು ಜನ ಮೆಚ್ಚಿನ ನಾಯಕರಾದರು.
ಅಲ್ಲದೆ ಗ್ರಾಮೀಣ ಜನರಲ್ಲಿ ಮಾಸ್ಕ್ ಬಗ್ಗೆ ಜಾಗೃತಿ ಮೂಡಿಸಿದ ಅವರು ಸಾವಿರಾರು ಜನರಿಗೆ ಮಾಸ್ಕ್ ಉಚಿತವಾಗಿ ನೀಡಿದರು.
ಇ ಸಂದರ್ಭದಲ್ಲಿ ಮಾತನಾಡಿದ ಅವರು, ಪಟ್ಟಣ ಪ್ರದೇಶದಲ್ಲಿ ಸೂಕ್ತ ಚಿಕಿತ್ಸೆಯ ಸೌಲಭ್ಯ ಸಿಗುತ್ತದೆ. ಆದರೆ ಗ್ರಾಮೀಣ ಭಾಗದಲ್ಲಿ ವೈದ್ಯರು ಸೇರಿದಂತೆ ಚಿಕಿತ್ಸೆ ಸೌಲಭ್ಯ ಸಿಗುವುದಿಲ್ಲ. ಆದರಿಂದ ಗ್ರಾಮೀಣ ಜನರು ಎಚ್ಛೆತ್ತುಕೊಂಡು ಕೊರೊನಾ ಸಂಭಂದಿಸಿದ ಯಾವುದೇ ಲಕ್ಷಣ ಕಂಡು ಬಂದರೂ ಪಟ್ಟಣದ ಆಸ್ಪತ್ರೆಗೆ ಬಂದು ಪರಿಶೀಲನೆ ಮಾಡಿಸಿಕೊಳ್ಳಬೇಕು ಎಂದು ಜನರಲ್ಲಿ ಜಾಗೃತಿ ಮೂಡಿಸಿದರು.
ಮೊಳಕೆ ಕಾಳು ವಿತರಿಸಿದ ಶಾಸಕ ನರಸಿಂಹಾನಾಯಕ:
ಸುರಪುರ ತಾಲೂಕಿನಲ್ಲಿ ಕೊರೊನಾ ಚಿಕಿತ್ಸೆ ಪಡೆಯುತ್ತಿದ್ದ 82 ರೋಗಿಗಳಿಗೆ ಶಾಸಕ ನರಸಿಂಹನಾಯಕ ಅವರು ಪೌಷ್ಟಿಕೌoಶ ಹೆಚ್ಚಿಗೆ ಆಗುವ ಮೊಳಕೆ ಕಾಳು ನೀಡಿ ರೋಗಿಗಳಿಗೆ ಧೈರ್ಯ ತುಂಬಿದರು.
Be the first to comment