ಜಿಲ್ಲಾ ಸುದ್ದಿಗಳು
ಕುಮಟಾ ಜೆಡಿಎಸ್ ಮುಖಂಡ ಸೂರಜ ನಾಯ್ಕ ಸೋನಿ ಅಭಿಮಾನಿ ಬಳಗದಿಂದ ತಾಲೂಕಿನ ಕೊರೊನಾ ವಾರಿಯರ್ಸ್‍ಗಳಾದ 153 ಆಶಾ ಕಾರ್ಯಕರ್ತೆಯರಿಗೆ ಫೇಸ್ ಸೀಲ್ಡ್, ಛತ್ರಿ, ಮಾಸ್ಕ್ ಹಾಗೂ ಸಾರಿ ಒಳಗೊಂಡಿರುವ ಆರೋಗ್ಯ ಕಿಟ್‍ಗಳನ್ನು ವಿತರಿಸಲಾಯಿತು.ನಂತರ ಮಾತನಾಡಿದ ಜೆಡಿಎಸ್ ಮುಖಂಡ ಸೂರಜ ನಾಯ್ಕ ಸೋನಿ, ಕೊರೊನಾ ಸಂಕಷ್ಟದ ಸ್ಥಿತಿಯಲ್ಲಿ ವಾರಿಯರ್ಸ್‍ಗಳ ಹೋರಾಟ ಮೆಚ್ಚುವಂತದ್ದು. ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿಗಳು, ಜನಪ್ರತಿನಿಧಿಗಳೂ ಕೂಡ ಉತ್ತಮ ಕೆಲಸ ನಿರ್ವಹಿಸಿದ್ದಾರೆ. ಇನ್ನು ಆಶಾ ಕಾರ್ಯಕರ್ತೆಯರು ಕಡಿಮೆ ಗೌರವಧನದಲ್ಲಿ ಜೀವನ ಸಾಗಿಸುವಂತವರಾಗಿದ್ದಾರೆ. ಹಾಗಾಗಿ ಅವರಿಗೆ ಆರೋಗ್ಯ ಕಿಟ್ ನೀಡಬೇಕೆಂಬ ಉದ್ದೇಶದಿಂದ ನನ್ನ ಅಭಿಮಾನಿ ಬಳಗದವರೆಲ್ಲ ಸೇರಿ ಎಲ್ಲ ಆಶಾ ಕಾರ್ಯಕರ್ತೆಯರಿಗೆ ಆರೋಗ್ಯ ಕಿಟ್ ವಿತರಿಸುತ್ತಿರುವುದು ಸಂತಸದ ಸಂಗತಿ ಎಂದರು.
ಜೆಡಿಎಸ್ ತಾಲೂಕಾಧ್ಯಕ್ಷ ಸಿ.ಜಿ.ಹೆಗಡೆ, ಜೆಡಿಎಸ್ ಮುಖಂಡರಾದ ಜಿ.ಕೆ.ಪಟಗಾರ ಮತ್ತು ಕುಮಟಾ ತಾಲೂಕಾ ಆರ್ಯ ಈಡಿಗ ನಾಮಧಾರಿ ಸಂಘದ ಅಧ್ಯಕ್ಷ ಸುಬ್ರಾಯ ನಾಯ್ಕ ಮಾತನಾಡಿ, ಕ್ಷೇತ್ರದ ಜನರ ಸಂಕಷ್ಟಕ್ಕೆ ಸ್ಪಂದಿಸುವ ಮನೋಭಾವ ಸೂರಜ ನಾಯ್ಕ ಸೋನಿ ಅವರಲ್ಲಿದೆ. ಹಾಗಾಗಿ ಕೊರೋನಾ ಸಂಕಷ್ಟದಲ್ಲಿರುವವರಿಗೆ ಮತ್ತು ವಾರಿಯರ್ಸ್‍ಗಳಿಗೆ ತಮ್ಮ ಕೈಲಾದ ಸಹಾಯ ಮಾಡುವ ಮೂಲಕ ಸಾಮಾಜಿಕ ಕಳಕಳಿ ಮೆರೆದಿದ್ದಾರೆ ಎಂದು ಸೋನಿಯ ಸಾಮಾಜಿಕ ಕಾರ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.ತಾಲೂಕಾ ಆರೋಗ್ಯಾಧಿಕಾರಿ ಡಾ. ಅಜ್ಞಾ ನಾಯಕ ಮಾತನಾಡಿ, ಕೊರೊನಾ ವಿಷಮ ಪರಿಸ್ಥಿತಿಯಲ್ಲಿ ಕಳೆದ ಎರಡು ವರ್ಷಗಳಿಂದ ಜನ ಸಾಮಾನ್ಯರ ಸುರಕ್ಷತೆಗಾಗಿ ಆಶಾ ಕಾರ್ಯಕರ್ತೆಯರು ಕಾರ್ಯನಿರ್ವಹಿಸುತ್ತಿದ್ದಾರೆ. ಅವರ ಕಾರ್ಯವನ್ನು ಗುರುತಿಸಿ ಜೆಡಿಎಸ್ ಮುಖಂಡ ಸೂರಜ ನಾಯ್ಕ ಅವರು ಆರೋಗ್ಯ ಕಿಟ್ ವಿತರಿಸುವ ಮೂಲಕ ಆಶಾ ಕಾರ್ಯಕರ್ತೆಯರನ್ನು ಪೆÇ್ರೀತ್ಸಾಹಿಸುವ ಕಾರ್ಯ ಮಾಡಿರುವುದು ಶ್ಲಾಘನೀಯ ಎಂದರು.ಕಾರ್ಯಕ್ರಮದಲ್ಲಿ ಶ್ರೀ ಸಿಗಂಧೂರು ಚೌಡಮ್ಮ ಭಕ್ತ ಮಂಡಳಿ ಹಾಗೂ ರಾಮಪ್ಪನವರ ಅಭಿಮಾನಿ ಬಳಗದ ಅಧ್ಯಕ್ಷ ರವಿ ನಾಯ್ಕ, ಹೆಗಡೆ ಗ್ರಾ.ಪಂ ಅಧ್ಯಕ್ಷೆ ಚಂದ್ರಕಲಾ ಪಟಗಾರ, ಸೂರಜ ನಾಯ್ಕ ಅಭಿಮಾನಿ ಬಳಗದ ಅಣ್ಣಪ್ಪ ನಾಯ್ಕ, ಸಂಪತಕುಮಾರ ನಾಯರಿ, ಚಂದ್ರಕಾಂತ ನಾಯ್ಕ, ಶಿವರಾಮ ಮಡಿವಾಳ, ಪವನ ಗುನಗಾ, ಸುದರ್ಶನ ಶಾನಭಾಗ ಸೇರಿದಂತೆ ಇತರರು ಇದ್ದರು.
Be the first to comment