ರಾಜ್ಯ ಸುದ್ದಿಗಳು
ಶಿರಸಿ
ಅರಣ್ಯ ಭೂಮಿ ಹಕ್ಕಿಗೆ ಸಂಬAಧಿಸಿ ಜಾಗೃತೆ ಮೂಡಿಸುವ ಉದ್ದೇಶದಿಂದ ಉತ್ತರ ಕನ್ನಡ ಜಿಲ್ಲಾದ್ಯಂತ ಸಾವಿರ ಕೀ.ಮೀ ಕ್ರಮಿಸಿ ಐದನೂರ ಹಳ್ಳಿಗಳಿಗೆ ಅರಣ್ಯವಾಸಿಗಳ ಮನೆ ಮನೆಗೆ ಭೇಟ್ಟಿ ನೀಡುವ ಉದ್ದೇಶದಿಂದ ಹಮ್ಮಿಕೊಳ್ಳಲಾದ ಅರಣ್ಯವಾಸಿಗಳನ್ನ ಉಳಿಸಿ- ‘ಜಾಥ’ ಕಾರ್ಯಕ್ರಮವನ್ನ ಕುಮಟ ತಾಲೂಕಿನಲ್ಲಿ ಫೇ. ೨೮ ರಂದು ಜಿಲ್ಲಾದ್ಯಂತ ಕಾರ್ಯಕ್ರಮ ಉದ್ಘಾಟನೆಗೊಳ್ಳಲಿದೆ ಎಂದು ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅವರು ಇಂದು ಶಿರಸಿಯ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಕಾರ್ಯಾಲಯದಲ್ಲಿ ಅತೀಕ್ರಮಣದಾರರನ್ನ ಉದ್ದೇಶಿಸಿ ಮಾತನಾಡಿ ಮೇಲಿನಂತೆ ಹೇಳಿದರು. ಜಿಲ್ಲಾದ್ಯಂತ ಸಂಚರಿಸುವ ಜಾಥದಲ್ಲಿ ವಿಶೇಷ ರೀತಿಯಲ್ಲಿ ಅಲಂಕರಿಸಿದ ಜಾಥ ವಾಹನದ ಮೂಲಕ ಮೂವತ್ತು ದಿನಗಳಲ್ಲಿ ಈ ಕಾರ್ಯಕ್ರಮ ಜರುಗಲಿದೆ ಎಂದು ಅವರು ತಿಳಿಸುತ್ತಾ ಅತೀ ಶೀಘ್ರದಲ್ಲಿ ಸುಫ್ರೀಂ ಕೋರ್ಟನಲ್ಲಿ ರಾಜ್ಯಸರಕಾರವು ಅಫೀಡಾವಿಟ್ ಸಲ್ಲಿಸುವಂತೆ ಈ ಸಂದರ್ಭದಲ್ಲಿ ಅಗ್ರಹಿಸಲಾಗುವುದು ಎಂದು ಹೇಳಿದರು.
ಸಭೆಯಲ್ಲಿ ತಾಲೂಕ ಅಧ್ಯಕ್ಷ ಲಕ್ಷö್ಮಣ ಮಾಳ್ಳಕ್ಕನವರ, ರಾಜೇಶ್ ನೇತ್ರೇಕರ, ಎಮ್ ಆರ್ ನಾಯ್ಕ ಕಂಡ್ರಾAಜಿ, ನೆಹರೂ ನಾಯ್ಕ, ಇಬ್ರಾಹಿಂ ಗೌಡಳ್ಳಿ, ಮಲ್ಲೇಶಿ ಸಂತೋಳ್ಳಿ, ಚಂದ್ರು ನಾಯ್ಕ, ಕಲ್ಲಪ್ಪ ಸಂತೋಳ್ಳಿ, ಎಮ್ ಕೆ ನಾಯ್ಕ, ಅರವಿಂದ ಗೌಡ, ದೇವರಾಯ ನಾಯಕ ಮುಂತಾದವರು ಉಪಸ್ಥಿತರಿದ್ದರು.ಅರಣ್ಯವಾಸಿಗಳ ಮಾಹಿತಿ : ಜಾಥ ಸಂದರ್ಭದಲ್ಲಿ ಅರಣ್ಯ ಹಕ್ಕು ಕಾಯಿದೆ ಸಂಬAಧಪಟ್ಟAತ ಕಾಯಿದೆ ಅಂಶ ಹಾಗೂ ಜಿಪಿಎಸ್ ಆಗದಿದ್ದಲ್ಲಿ, ಜಿಪಿಎಸ್ ಆಗಿ ಕಡಿಮೆ ಆದ್ದಲ್ಲಿ ಮುಂತಾದ ಮೇಲ್ಮನವಿ ಕುರಿತು ಉಚಿತವಾಗಿ ಮೇಲ್ಮನವಿ ಅರ್ಜಿ ವಿತರಿಸಲಾಗುವುದು ಎಂದು ರವೀಂದ್ರ ನಾಯ್ಕ ತಿಳಿಸಿದರು.
Be the first to comment