ರೈತರ ದೇಣಿಗೆಯ ಮುಖಾಂತರ ಪ್ರಾರಂಭಗೊಂಡ ಅನಿರ್ದಿಷ್ಟವಾದಿ ಹೋರಾಟ 

ವರದಿ ಹರೀಶ್ ದೊಡ್ಡಬಳ್ಳಾಪುರ

ರಾಜ್ಯ ಸುದ್ದಿಗಳು 

ದೊಡ್ಡಬಳ್ಳಾಪುರ 

 ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ BBMP ವ್ಯಾಪ್ತಿಯ ದೈನಂದಿನ ತ್ಯಾಜ್ಯವನ್ನು ಪ್ರತಿದಿನ ನೂರಾರು ಲಾರಿಗಳ ಮುಖಾಂತರ ದೊಡ್ಡಬಳ್ಳಾಪುರ ತಾಲ್ಲೂಕಿನ ದೊಡ್ಡಬೆಳವಂಗಲ ಹೋಬಳಿಯ ಭಕ್ತರಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಚಿಗರೇಹಳ್ಳಿಯ MSGP ಕಸ ನಿರ್ವಹಣಾ ಘಟಕಕ್ಕೆ ತಂದು ಸುರಿಯುತ್ತಿದ್ದು ಸದರಿ MSGP ಘಟಕವನ್ನು ಕೂಡಲೇ ಮುಚ್ಚಬೇಕೆಂದು ನವ ಬೆಂಗಳೂರು ಹೋರಾಟ ಸಮಿತಿಯು ಭಕ್ತರಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷರನ್ನೊಳಗೊಂಡು ಸರ್ವ ಸದಸ್ಯರ ಸಹಯೋಗ ಹಾಗೂ ಸ್ಥಳೀಯ ಗ್ರಾಮ ಪಂಚಾಯತಿ ಸಹಕಾರದೊಂದಿಗೆ ಸುತ್ತಮುತ್ತಲಿನ ಗ್ರಾಮಸ್ಥರು ಸೇರಿ ಇಂದಿನಿಂದ ಅನಿರ್ದಿಷ್ಟವಾದಿ ಧರಣಿ ಸತ್ಯಗ್ರಹವನ್ನು ಹಮ್ಮಿಕೊಳ್ಳಲಾಗಿದೆ ಈ ಧರಣಿಯನ್ನು ಸುತ್ತಮುತ್ತಲಿನ ಗ್ರಾಮದ ರೈತರು ದೇಣಿಗೆ ನೀಡುವ ಮುಖಾಂತರ ಚಾಲನೆ ನೀಡಿದರು ಧರಣಿಯು ನವ ಬೆಂಗಳೂರು ಹೋರಾಟ ಸಮಿತಿಯ ಗೌರವಧ್ಯಕ್ಷರಾದ ಕೆ ವಿ ಸತ್ಯ ಪ್ರಕಾಶ್ (ಸಾರಥಿ ) ಸಂಸ್ಥಾಪಕ ಅಧ್ಯಕ್ಷರಾದ ಜಿ ಏನ್ ಪ್ರದೀಪ್ ಮತ್ತು ಭಕ್ತರಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಕೆ ಸಿದ್ದಲಿಂಗಯ್ಯ ಅವರ ನೇತೃತ್ವ ದಲ್ಲಿ ಸಾಗಿದ್ದು ಸುತ್ತಮುತ್ತಲಿನ ಗ್ರಾಮಗಳ ರೈತರು ಯುವಕರು ವಿದ್ಯಾರ್ಥಿಗಳು ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಧರಣಿ ಸತ್ಯಗ್ರಹಕ್ಕೆ ಆಗಮಿಸುತ್ತಿದ್ದು ಧರಣಿ ಸತ್ಯಗ್ರಹ ಪರಂಭವಾಗಿದೆ. ಧರಣಿ ಹಿಂಪಡೆಯುವಂತೆ ಮನವೊಲಿಸಲುಯತ್ನಿಸಿದ ವೃತ್ತ ನಿರೀಕ್ಷಕ ನವೀನ್ ಕುಮಾರ್. ವೃತ್ತ ನಿರೀಕ್ಷಕರಿಂದ ರೈತರ ಮನವೊಲಿಕೆಗೆ ವಿಫಲ ಯತ್ನ

CHETAN KENDULI

Be the first to comment

Leave a Reply

Your email address will not be published.


*