ರಾಜ್ಯ ಸುದ್ದಿಗಳು
ದೊಡ್ಡಬಳ್ಳಾಪುರ
ರಾಜ್ಯ ಒಕ್ಕಲಿಗರ ಸಂಘದ ಚುನಾವಣೆ ಕುರಿತಂತೆ ನೂತನ ಅಭ್ಯರ್ಥಿಗಳಾಗಿ ಸ್ಪರ್ಧಿಸಿರುವ 9 ಅಭ್ಯರ್ಥಿಗಳು ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲ್ಲೂಕಿನ ಒಕ್ಕಲಿಗರ ಭವನದಲ್ಲಿ ಪತ್ರಿಕಾಘೋಷ್ಠಿ ನೆಡೆಸಿದರು
ಒಕ್ಕಲಿಗ ಸಮುದಾಯ ಒಂದು ಜಾತಿ ಅಲ್ಲ ಅದು ಒಂದು ಅನ್ನದಾತರ ಸಮುದಾಯ ಒಕ್ಕಲುತನ ಎಂಬುದು ಅನ್ನ ನೀಡುವ ಕಾರ್ಯವಾಗಿದೆ ಕೆಂಪೇಗೌಡ ಯೂನಿವರ್ಸಿಟಿ ಆಫ್ ಮಲ್ಟಿ ಡಿಸಿಪ್ಲಿನರಿ ಸೈನ್ಸ್ ಎಂಬ ಅಂತಾರಾಷ್ಟ್ರೀಯ ಗುಣಮಟ್ಟದ ಸ್ವತಂತ್ರ ವಿಶ್ವವಿದ್ಯಾನಿಲಯವನ್ನು ಸ್ಥಾಪಿಸಿ ಜಾಗತಿಕ ಮಟ್ಟದಲ್ಲಿ ಅವಶ್ಯಕವಿರುವ ಬಹುಪಾಲು ಕೋರ್ಸ್ ಗಳ ಆರಂಭ ಹಾಗೂ ಸಂಘದಡಿಯಲ್ಲಿ ಬರುವ ಎಲ್ಲಾ ಶಿಕ್ಷಣ ಸಂಸ್ಥೆಗಳನ್ನು ಒಂದೇ ಸುರಿನಡಿ ತರುವ ಸಂಕಲ್ಪ ಮಾಡಿದ್ದೇವೆ ಒಕ್ಕಲಿಗ ಸಮುದಾಯದ ಹಿತಾಸಕ್ತಿ ಕಾಪಾಡಲು ಬಿಕ್ಕಟ್ಟು ನಿರ್ವಹಣಾ ಕೇಂದ್ರ ಸ್ಥಾಪಸುವ ಯೋಜನೆ ಇದ್ದು ವಿವಿಧ ನ್ಯಾಯಾಲಯಗಳಲ್ಲಿ ಬಾಕಿಯಿರುವ ವ್ಯಾಜ್ಯಗಳನ್ನು ಸೌಹಾರ್ದತೇಯಿಂದ ಬಗೆಹರಿಸಲು ಒಕ್ಕಲಿಗ ಅದಾಲತ್ ಸ್ಥಾಪಿಸಲು ಚಿಂತನೆ ಮಾಡಲಾಗಿದೆ ಎಂದು ಸಭೆಯಲ್ಲಿ ಮಾತನಾಡಿದ ಲೋಕೇಶ್ ತಿಳಿಸಿದರು
ನಿವೃತ್ತ ಪೊಲೀಸ್ ಅಧಿಕ್ಷಕರಾದ ಎಸ್ ಏನ್ ಗಂಗಾಧರ್ ಮಾತನಾಡಿ ಈ ಚುನಾವಣೆ ಹಣ ರಹಿತ ಚುನಾವಣೆಯಾಗಿದ್ದು ಉತ್ತಮ ಸಂದಸ್ಯರೊಂದಿಗೆ ಸ್ಪರ್ಧೆಸಿದ್ದೇನೆ ಯಾವುದೇ ಆಮಿಷಕ್ಕೆ ಬಲಿಯಾಗದೆ ಒಳ್ಳೆಯ ಮೌಲ್ಯಗಳನ್ನು ನೋಡಿ ಮತ ಹಾಕಬೇಕೆಂದು ನೆರೆದಿದ್ದ ಒಕ್ಕಲಿಗ ಸಮುದಾಯಕ್ಕೆ ಮನವಿ ಮಾಡಿದರು.
Be the first to comment