ಜಿಲ್ಲಾ ಸುದ್ದಿಗಳು
ಶಿರಸಿ
ಭಟ್ಕಳದ ಪತ್ರಕರ್ತ ಅರ್ಜುನ ಮಲ್ಯ ಮೇಲಿನ ಹಲ್ಲೆಯನ್ನು ಖಂಡಿಸಿ ಅಖಿಲ ಭಾರತ್ ಜರ್ನಲಿಸ್ಟ್ ಫೆಡರೇಷನ್ನಿನ ಶಿರಸಿ ತಾಲೂಕು ಘಟಕದ ಪದಾಧಿಕಾರಿಗಳು ಉಪ ವಿಭಾಗಾಧಿಕಾರಿ ಕಛೇರಿಗೆ ತೆರಳಿ ಎಲ್ಲಾ ಆರೋಪಿಗಳನ್ನು ಶೀಘ್ರವಾಗಿ ಬಂಧಿಸಿ ಕಠಿಣ ಶಿಕ್ಷೆ ನೀಡುವಂತೆ ಆಗ್ರಹಿಸಿ ಮನವಿ ಪತ್ರ ನೀಡಿದರು. ಭಟ್ಕಳದ ಕರಾವಳಿಯ ಸಮಾಚಾರ ವೆಬ್ ಪೋರ್ಟಲ್ ಸಂಪಾದಕ, ಪತ್ರಕರ್ತ ಅರ್ಜುನ ಮಲ್ಯನ ಮೇಲೆ ಮುಸುಕುದಾರಿಗಳ ಗುಂಪು ಕಳೆದ ಗುರುವಾರ ದಿನಾಂಕ 18-11-2021ರಂದು ಸಂಜೆ 6-30 ಕ್ಕೆ ಭಟ್ಕಳದ ಬೆಳಕೆಯಲ್ಲಿ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆಯನ್ನು ಅಖಿಲ ಭಾರತ್ ಜರನಲಿಸ್ಟ್ ಫೆಡರೇಷನ್ ಶಿರಸಿ ತಾಲೂಕು ಘಟಕ ಖಂಡಿಸುತ್ತದೆ. ಪತ್ರಕರ್ತ ಅರ್ಜುನ್ ಮಲ್ಯ ಮೇಲೆ ಹಲ್ಲೆ ಮಾಡಿದ ಎಲ್ಲಾ 6 ಜನ ದುಷ್ಕರ್ಮಿಗಳನ್ನು
ಬಂಧಿಸಿ ಅವರ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಕರಾವಳಿ ಸಮಾಚಾರ್ ಎಂಬ ವೆಬ್ ಪೋರ್ಟಲ್ ಸಂಪಾದಕ ಅರ್ಜುನ್ ಮಲ್ಯ ಎಂಬಾತನೇ ಹಲ್ಲೆಗೊಳಗಾದವನಾಗಿದ್ದು, ಭಟ್ಕಳದ ಪುರಸಭೆಯ ಕಟ್ಟಡದಲ್ಲಿರುವ ತನ್ನ ಕಚೇರಿ ಮುಚ್ಚಿ ಮನೆಗೆ ತೆರಳುತ್ತಿದ್ದಾಗ ಬೆಳಕೆ ಬಳಿ ಆರು ಜನರ ಮುಸುಕುದಾರಿಗಳು ರಾಡ್ ಮತ್ತು ಕಟ್ಟಿಗೆ ತುಂಡುಗಳಿಂದ ದಾಳಿ ನಡೆಸಿದ್ದು ಸ್ಥಳೀಯರು ಆಗಮಿಸುತಿದ್ದಂತೆ ಹಲ್ಲೆಕೋರರು ಓಡಿಹೋಗಿದ್ದಾರೆ. ಹಲ್ಲೆಯಿಂದ ಅರ್ಜುನ್ ಮಲ್ಯ ರವರ ಕೈ ಮುರಿದಿದ್ದು ಭಟ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಕುಂದಾಪುರದ ಚಿನ್ಮಯಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಸದ್ಯ ಚಿನ್ಮಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ. ಭಟ್ಕಳ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಭಟ್ಕಳದಲ್ಲಿ ಕಳೆದ ಕೆಲವು ತಿಂಗಳುಗಳಿಂದ ಯಾರ ಭಯವಿಲ್ಲದೆ ರಾಜಾರೋಷವಾಗಿ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳ ವರದಿಯನ್ನು ಅರುಣ ಮಲ್ಯ ಅವರು ತಮ್ಮ ಕರಾವಳಿ ಸಮಾಚಾರ ಯುಟ್ಯೂಬ್ ಚಾನೆಲ್ ನಲ್ಲಿ ಸುದ್ದಿ ಬಿತ್ತರಿಸಿದ್ದರು. ಈ ಕಾರಣಕ್ಕಾಗಿ ದುಷ್ಕರ್ಮಿಗಳು ಆತನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುತ್ತಾರೆ.ಆದ ಕಾರಣ ಪೋಲಿಸ್ ಇಲಾಖೆ ಈ ಪ್ರಕರಣವನ್ನು ಅತ್ಯಂತ ಗಂಭಿರ ವಾಗಿ ಪರಿಗಣಿಸಿ ಎಲ್ಲ 6 ಆರೋಪಿಗಳನ್ನು ಬಂದಿಸಿ ಅವರ ಮೇಲೆ ಕಠಿಣ ಕಾನೂನು ಕ್ರಮ ಕೈ ಗೊಳ್ಳಬೇಕು ಎಂದು ಆಗ್ರಹಿಸಲಾಯಿತು.ಈ ಸಂದರ್ಭದಲ್ಲಿ ಫೆಡರೇಷನ್ನಿನ ಜಿಲ್ಲಾ ಉಪಾಧ್ಯಕ್ಷರಾದ ಸೀತಾರಾಮ ಆಚಾರ್ಯ, ತಾಲೂಕಾಧ್ಯಕ್ಷರಾದ ಶಿವಪ್ರಸಾದ ಹಿರೇಕೈ, ತಾಲೂಕ ಸಹ ಕಾರ್ಯದರ್ಶಿ ಹುಲಿಗೇಶ್, ತಾಲೂಕ ಕಾರ್ಯದರ್ಶಿ ಗಣೇಶ ಆಚಾರ್ಯ ಉಪಸ್ಥಿತರಿದ್ದರು.
Be the first to comment