ಜಿಲ್ಲಾ ಸುದ್ದಿಗಳು
ಸಿದ್ದಾಪುರ
ಈ ಬಾರಿಯ ವಿಧಾನ ಪರಿಷತ್ ಚುನಾವಣೆಗೆ ಉತ್ತರ ಕನ್ನಡ ಜಿಲ್ಲೆಯಿಂದ ಸಮಾಜವಾದಿ ಪಾರ್ಟಿಯಿಂದ ಅಭ್ಯರ್ಥಿಯನ್ನು ಕಣಕ್ಕಿಳಿಸಲು ತೀರ್ಮಾನಿಸಲಾಗಿತ್ತು. ನಮ್ಮೆಲ್ಲರ ಒಮ್ಮತದ ಅಭ್ಯರ್ಥಿಯಾಗಿ ಸಮಾಜವಾದಿ ಪಾರ್ಟಿಯ ಕಾರ್ಮಿಕ ವಿಭಾಗದ ರಾಜ್ಯಾಧ್ಯಕ್ಷರಾದ ನಾಗರಾಜ ನಾಯ್ಕರವರ ಹೆಸರನ್ನು ರಾಜ್ಯಾಧ್ಯಕ್ಷರಾದ ಎನ್ ಮಂಜಪ್ಪ ರವರ ಒಪ್ಪಿಗೆಯ ಮೇರೆಗೆ ಅಂತಿಮಗೊಳಿಸಲಾಗಿತ್ತು. ಜಿಲ್ಲೆಯ ಸಮಾಜವಾದಿ ನಾಯಕರು ಹಾಗೂ ಈ ಹಿಂದೆ ನಮ್ಮ ಸಮಾಜವಾದಿ ಪಾರ್ಟಿಯ ಉತ್ತರಕನ್ನಡ ಜಿಲ್ಲಾ ಅಧ್ಯಕ್ಷರು ಆಗಿದ್ದಂತಹ ಭೀಮಣ್ಣ ನಾಯ್ಕ ರವರಿಗೆ ಕಾಂಗ್ರೆಸ್ ಪಾರ್ಟಿಯಿಂದ ಅಭ್ಯರ್ಥಿಯಾಗಿ ಘೋಷಣೆ ಮಾಡಿದ ಹಿನ್ನೆಲೆಯಲ್ಲಿ ಸಮಾಜವಾದಿ ನಾಯಕನ ಗೆಲುವಿಗಾಗಿ ನಾಗರಾಜ ನಾಯ್ಕ ರವರು ಚುನಾವಣೆಗೆ ಸ್ಪರ್ಧಿಸದೆ ಹಿಂದೆ ಸರಿದಿದ್ದಾರೆ ಎಂದು ಸಮಾಜವಾದಿ ಪಾರ್ಟಿಯ ಉತ್ತರ ಕನ್ನಡ ಜಿಲ್ಲಾಧ್ಯಕ್ಷರಾದ ಕೃಷ್ಣ ಬಳೆಗಾರ್ ತಿಳಿಸಿದ್ದಾರೆ.
ಅವರು ಇಂದು ಪತ್ರಿಕಾ ಹೇಳಿಕೆ ನೀಡಿ. ಬಿಜೆಪಿ ಪಕ್ಷದ ದುರಾಡಳಿತ, ಕೋಮುವಾದಿ ನಿಲುವುಗಳು, ಅಗತ್ಯ ವಸ್ತುಗಳ ಬೆಲೆ ಏರಿಕೆ, ತೈಲಬೆಲೆ ಏರಿಕೆ, ರೈತರ ಮೇಲಿನ ದೌರ್ಜನ್ಯ, ಸರ್ಕಾರಿ ಸ್ವಾಮ್ಯದ ಸಂಸ್ಥೆಗಳನ್ನು ಖಾಸಗಿಯವರಿಗೆ ಮಾರಾಟ ಹಾಗೂ ಮಹಿಳೆಯರಿಗೆ ರಕ್ಷಣೆ ನೀಡದ ಬಿಜೆಪಿ ಸರ್ಕಾರವನ್ನು ಕಿತ್ತೊಗೆಯಲು ಧ್ರಡ ತೀರ್ಮಾನ ತೆಗೆದುಕೊಂಡಿರುವ ಸಮಾಜವಾದಿ ಪಾರ್ಟಿಯ ರಾಷ್ಟ್ರೀಯ ಅಧ್ಯಕ್ಷರಾಗಿರುವ ಅಖಿಲೇಶ್ ಯಾದವ್ ರವರ ಉದ್ದೇಶ ಈಡೇರಬೇಕಾದರೆ ಬಿಜೆಪಿ ಸೋಲಬೇಕು. ಹಾಗಾಗಿ ಈ ಬಾರಿಯ ವಿಧಾನ ಪರಿಷತ್ ಚುನಾವಣೆಗೆ ನಾಗರಾಜ ನಾಯ್ಕರು ಸಮಾಜವಾದಿ ಪಾರ್ಟಿಯಿಂದ ಸ್ಪರ್ಧಿಸದಿರಲು ತೀರ್ಮಾನಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಎಲ್ಲಾ ಸಮಾಜವಾದಿಗಳು ಈ ವಿಧಾನ ಪರಿಷತ್ ಚುನಾವಣೆಯಲ್ಲಿ ಭೀಮಣ್ಣ ನಾಯ್ಕ ರವರ ಪರವಾಗಿ ಕೆಲಸ ಮಾಡಬೇಕು ಮತ್ತು ಸಮಾಜವಾದಿ ನಾಯಕರಾಗಿರುವ ಭೀಮಣ್ಣ ನಾಯ್ಕರಿಗೆ ಮತ ನೀಡುವಂತೆ ಮತದಾರ ಬಾಂಧವರ ಮನ ಒಲಿಸಬೇಕೆಂದು ಸಮಾಜವಾದಿ ಪಾರ್ಟಿ ಕಾರ್ಮಿಕ ವಿಭಾಗದ ರಾಜ್ಯಾಧ್ಯಕ್ಷರಾಗಿರುವ ನಾಗರಾಜ ನಾಯ್ಕ ರವರು ಸೂಚನೆ ನೀಡಿದ್ದಾರೆ.
ಯುವ ಜನಾಂಗವನ್ನು ನಿರುದ್ಯೋಗಕ್ಕೆ ತಳ್ಳಿದ, ಪ್ರತಿಭಟನಾ ನಿರತ ರೈತ ಬಾಂಧವರನ್ನು ರಸ್ತೆ ಮೇಲೆ ಸಾಯಿಸಿದ, ಬಿಜೆಪಿಗೆ ಸಮಾಜವಾದಿಗಳು ಮತ ನೀಡದೆ ಸಮಾಜವಾದಿ ಚಿಂತನೆ ಹೊಂದಿರುವ ಭೀಮಣ್ಣ ನಾಯ್ಕ ರವರಿಗೆ ಮತನೀಡಿ ಗೆಲ್ಲಿಸಬೇಕೆಂದು ಸಮಾಜವಾದಿ ಪಾರ್ಟಿ ಉತ್ತರ ಕನ್ನಡ ಜಿಲ್ಲಾ ಘಟಕ ಮತದಾರ ಬಾಂಧವರಲ್ಲಿ ವಿನಂತಿ ಮಾಡುತ್ತದೆ ಎಂದು ಕ್ರಷ್ಣ ಬಳೆಗಾರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
Be the first to comment