ಸಹಾಯದ ನೆಪ ಹೇಳಿ ATM ಕಾರ್ಡ್ ಬದಲಿಸುತ್ತಿದ್ದ ಆರೋಪಿ; ಕುಮಟಾದಲ್ಲಿ ಪೊಲೀಸ್ ಬಲೆಗೆ

ವರದಿ-ಕುಮಾರ್ ನಾಯ್ಕ.ಭಟ್ಕಳ

ರಾಜ್ಯ ಸುದ್ದಿಗಳು

ಕುಮಟಾ

ಎಟಿಎಂ ನಿಂದ ಹಣ ತೆಗೆಯುವಾಗ ಸಹಾಯ ಮಾಡಿಕೊಡುವ ನೆಪದಲ್ಲಿ ಕಾರ್ಡ್ ಬದಲಿಸಿ ಹಣ ವಂಚಿಸುತ್ತಿದ್ದ ಆರೋಪಿಯನ್ನು ಪತ್ತೆಹಚ್ಚಿ ಬಂಧಿಸಿದ ಘಟನೆ ನಡೆದಿದೆ.
ಮೂಲ ಹಾಸನದವನಾದ ಚನ್ನರಾಯಪಟ್ಟಣ ತಾಲೂಕಿನ ಬೆಲಸಿಂದ. ಸದ್ಯ ಮೈಸೂರು ಜಿಲ್ಲೆಯ ಗೀರಿದರ್ಶಿನಿ ಲೇಔಟ್ ನಿವಾಸಿ ಕಿರಣ ಕುಮಾರ ಚಿ.ಕೆ.(29) ಬಂಧಿತ ಆರೋಪಿಯಾಗಿದ್ದಾನೆ. ಈತ ಪಟ್ಟಣದ ಹೊಸನಿಲ್ದಾಣ ಬಳಿ ಇರುವ ಎಸ್.ಬಿ.ಐ ಎಟಿಎಂ ನಲ್ಲಿ ಹಿರಿಯ ವಯಸ್ಸಿನ ಮಂಜುನಾಥ ಬೋರಕರ್ ಅವರಿಗೆ ಸಹಾಯ ಮಾಡುವ ನೆಪದಲ್ಲಿ ಕಾರ್ಡಿನ ಪಾಸ್‍ವರ್ಡ್ ತಿಳಿದುಕೊಂಡು ಕಾರ್ಡ್ ಅದಲು ಬದಲು ಮಾಡಿಕೊಂಡಿದ್ದನು. ಆ ಬಳಿಕ ಹಂತಹಂತವಾಗಿ 70,905 ರೂಪಾಯಿ ಹಣ ತೆಗೆದು ಮೋಸ ಮಾಡಿದ ಬಗ್ಗೆ 2021ರ ಫೆಬ್ರವರಿಯಲ್ಲಿ ಪ್ರಕರಣ ದಾಖಲಾಗಿತ್ತು.


ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಪೆÇಲೀಸರು ತನಿಖಾ ತಂಡವನ್ನು ರಚಿಸಿ ಸಿ.ಸಿ.ಕ್ಯಾಮರಾ ಸಹಾಯದಿಂದ ಆರೋಪಿಗೆ ಮೈಸೂರಿನಲ್ಲಿ ಪತ್ತೆ ಮಾಡಿ 5 ಏಟಿಎಮ್ ಕಾರ್ಡ್, ವಂಚಸಿ ತೆಗೆದುಕೊಂಡು ಹೋಗಿದ ಡೆಬಿಕ್ ಕಾರ್ಡನಿಂದ ತೆಗೆದ 15 ಸಾವಿರ ಹಣ ಮತ್ತು ಡೆಬಿಟ್ ಕಾರ್ಡನಿಂದ ಸ್ಟೈಪ್ ಮಾಡಿ ತೆಗೆದ ಹಣ ಮತ್ತು ಹಣದಿಂದ ಖರೀದಿ ಮಾಡಿದ ಆಭರಣಗಳು ಹಾಗೂ ಇದೇ ರೀತಿ ವಂಚಿಸಲು ಇಟ್ಟುಕೊಂಡಿರುವ ಬೇರೆ ಬ್ಯಾಂಕ್ ಡೆಬಿಟ್ ಕಾರ್ಡಗಳನ್ನು ವಶಪಡಿಸಿಕೊಳ್ಳುವಲ್ಲಿ ಕುಮಟಾ ಪೆÇಲೀಸರು ಯಶಸ್ವಿಯಾಗಿದ್ದಾರೆ.

CHETAN KENDULI

Be the first to comment

Leave a Reply

Your email address will not be published.


*