ತಾಲೂಕಾ ಆಸ್ಪತ್ರೆಗೆ ಶಿವಕುಮಾರ ಬಿರಾದಾರ ಅವರಿಂದ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ…!

ವರದಿ: ಡಿ.ಬಿ.ವಡವಡಗಿ, ಪ್ರದಾನ ಮುಖ್ಯಸ್ಥರು

ಜಿಲ್ಲಾ ಸುದ್ದಿಗಳು

ಮುದ್ದೇಬಿಹಾಳ:

CHETAN KENDULI

ಸರ್ಕಾರಿ ಆಸ್ಪತ್ರೆಯ ರೋಗಿಗಳು, ವೈದ್ಯಕೀಯ ಮತ್ತು ಅಂಬ್ಯುಲೆನ್ಸ್ ಸಿಬ್ಬಂದಿಗೆ ಶಾರದಾ ವಿದ್ಯಾಮಂದಿರದ ಮುಖ್ಯಸ್ಥರಾದ ಶಿವಕುಮಾರ ಭೋಜರಾಜ ಬಿರಾದಾರ ಅವರು ಕುಡಿಯಲು ಶುದ್ಧ ಕುಡಿಯುವ ನೀರಿನ ವ್ಯವಸ್ಥೆಮಾಡುವ ಮೂಲಕ ಮಾನವೀಯತೆ ಮೇರೆದಿದ್ದಾರೆ.

ಈಗಾಗಲೇ ಶಾಸಕರು ಆಸ್ಪತ್ರೆಗೆ ಪ್ರೊಟೀನ್ ಯುಕ್ತ ಆಹಾರ ನೀಡುತ್ತಿದ್ದು ಇದರೊಂದಿದೆ ಕೈಜೋಡಿಸಿರುವ ಶಿವಕುಮಾರ ಬಿರಾದಾರ ಆಸ್ಪತ್ರೆಗೆ ನಿತ್ಯ ತಲಾ 20 ಲೀಟರನ 10 ಕ್ಯಾನುಗಳಲ್ಲಿ 200 ಲೀಟರ್ ನೀರು ಪೂರೈಸಲು ರವಿವಾರವೇ ತೀರ್ಮಾನಿಸಿದ್ದಾರೆ.

ಶಾಸಕ ಎ.ಎಸ್. ಪಾಟೀಲ ನಡಹಳ್ಳಿಯವರು ಪ್ರಾರಂಭಿಸಿರುವ 24×7 ಕ್ಯಾಂಟೀನ್ ಸೌಲಭ್ಯದೊಂದಿಗೆ ಈ ಸೌಲಭ್ಯವೂ ದೊರಕಲಿದೆ.

ದೊರಕಿಬಂದ ಅಭಿನಂದನೆಗಳು:

ಶಿವಕುಮಾರ ಭೋಜರಾಜ ಅವರು ನಿತ್ಯ  200 ಲೀಟರ್ ನೀರು ಪೂರೈಸಲು ಮುಂದೆ ಬಂದಿದ್ದು ಪಟ್ಟಣದ ಮುಖಂಡರಾದ ರಸೂಲ್ ದೇಸಾಯಿ, ಪುರಸಭೆ ಸದಸ್ಯ ಮೆಹಬೂಬ್ ಗೋಳಸಂಗಿ, ಸಮಾಜ ಸೇವಕ ಪಿಂಟು ಸಾಲಿಮಾನಿ, ಕಾಮರಾಜ ಬಿರಾದಾರ, ಕಿರಣ ಪಾಟೀಲ ಸೇರಿದಂತೆ ಅನೇಕರು ಅಭಿನಂದನೆಗಳನ್ನು ತಿಳಿಸಿದ್ದಾರೆ.

.

Be the first to comment

Leave a Reply

Your email address will not be published.


*