ಗ್ರಾಮೀಣ ಭಾಗದಲ್ಲೊಂದು ಇಂಟರ್ನ್ಯಾಷನಲ್ ಶಾಲೆ ಆರಂಭ* _ಹಳ್ಳಿ ಮಕ್ಕಳ ಶೈಕ್ಷಣಿಕ ಮಟ್ಟ ಸುಧಾರಣೆಗೆ ಒತ್ತು_

ವರದಿ: ಹೈದರ್ ಸಾಬ್, ಕುಂದಾಣ

ರಾಜ್ಯ ಸುದ್ದಿಗಳು 

ದೇವನಹಳ್ಳಿ

ಗ್ರಾಮೀಣ ಭಾಗದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರೆಯಲಿ ಎಂಬ ಆಶಯದೊಂದಿಗೆ ಉತ್ತಮ ಸುಸಜ್ಜಿತವಾದ ಎಸ್.ಎಲ್.ವಿ. ಇಂಟರ್ನ್ಯಾಷನಲ್ ಶಾಲೆಯೊಂದನ್ನು ಪ್ರಾರಂಭಿಸಲಾಗಿದೆ ಎಂದು ಶಾಲೆಯ ಸಂಸ್ಥಾಪಕ ಅಧ್ಯಕ್ಷ ಗೋಪಾಲ ಗೌಡ ತಿಳಿಸಿದರು.ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ರಸ್ತೆಯಲ್ಲಿ ನೂತನ ಎಸ್ಎಲ್ವಿ ಇಂಟರ್ನ್ಯಾಷನಲ್ ಶಾಲೆಯ ಉದ್ಘಾಟನಾ ಕಾರ್ಯಕ್ರಮಕ್ಕೆ ಆಗಮಿಸಿದ ಶಾಸಕ ಎಂ ನಾರಾಯಣಸ್ವಾಮಿ ಸಮ್ಮುಖದಲ್ಲಿ ಉದ್ಘಾಟಿಸಿ ಮಾತನಾಡಿದರು. ಗ್ರಾಮೀಣ ಭಾಗದ ಜನರಿಗೆ ತಮ್ಮ ಮಕ್ಕಳನ್ನು ಇಂಟರ್ನ್ಯಾಷನಲ್ ಶಾಲೆಗಳಲ್ಲಿ ಓದಿಸಬೇಕೆಂಬ ಆಸೆ ಇರುತ್ತದೆ ಆದರೆ ಅನುಕೂಲಗಳು ಇರುವುದಿಲ್ಲ. ನಾನು ಸಹ ಹಳ್ಳಿಯಿಂದ ಬಂದವನು ಒಂದು ಉತ್ತಮ ಇಂಟರ್ನ್ಯಾಷನಲ್ ಸ್ಕೂಲ್ ಪ್ರಾರಂಭಿಸಬೇಕು ಎಂಬ ಅದರಂತೆ, ಗ್ರಾಮೀಣ ಭಾಗದಲ್ಲಿ ಇಂಟರ್ನ್ಯಾಷನಲ್ ಸ್ಕೂಲ್ ಅನ್ನು ಪ್ರಾರಂಭಿಸಲಾಗಿದೆ. ಹಳ್ಳಿ ಮಕ್ಕಳು ಶೈಕ್ಷಣಿಕವಾಗಿ ಮುಂಬರಲು ನಮ್ಮ ಸಂಸ್ಥೆಯಿಂದ ಯಾವುದೇ ದಾಖಲಾತಿಗೆ ಪ್ರವೇಶ ಶುಲ್ಕ ಇರುವುದಿಲ್ಲ. ಮೊದಲ ಪ್ರವೇಶ ಪಡೆಯುವ ಮಕ್ಕಳಿಗೆ ಶೇ. 25ರಷ್ಟು ಶಾಲಾ ಶುಲ್ಕ ಮಾತ್ರ ಇರುತ್ತದೆ. ಮೊದಲ ವರ್ಷದಲ್ಲಿ ದಾಖಲಾತಿ ಪಡೆಯುವ ಮಕ್ಕಳನ್ನು ಮುಂದಿನ ನಾಲ್ಕು ವರ್ಷದ ವರೆಗೆ ಶೇಕಡ 20ರಷ್ಟು ಶಾಲಾ ಶುಲ್ಕದಲ್ಲಿ ರಿಯಾಯಿತಿ ನೀಡಲಾಗುತ್ತದೆ. ಸುಸಜ್ಜಿತವಾದ ಶಾಲಾ ಕಟ್ಟಡವನ್ನು ಹೊಂದಿದ್ದು, ಉತ್ತಮ ಶಿಕ್ಷಕ ವೃಂದವನ್ನು ಹೊಂದಿದ್ದು, ಗುಣಮಟ್ಟದ ಶಿಕ್ಷಣಕ್ಕೆ ಒತ್ತು ನೀಡಲಾಗುತ್ತದೆ. ಇದರ ಸದುಪಯೋಗವನ್ನು ಸುತ್ತಮುತ್ತಲಿನ ಹತ್ತಾರು ಹಳ್ಳಿಗಳವರು ಹಾಗೂ ಗ್ರಾಮೀಣ ಭಾಗದ ಜನರು ಪಡೆದುಕೊಳ್ಳುವಂತೆ ಆಗಬೇಕು ಎಂದು ಹೇಳಿದರು.

CHETAN KENDULI

ಶಾಸಕ ಎಲ್ ಎನ್ ನಾರಾಯಣಸ್ವಾಮಿ ಮಾತನಾಡಿ, ಹಳ್ಳಿಗಾಡಿನಲ್ಲಿ ಇಂತಹ ಇಂಟರ್ನ್ಯಾಷನಲ್ ಶಾಲೆ ಪ್ರಾರಂಭಿಸಿರುವುದು ಶ್ಲಾಘನೀಯ. ಮಕ್ಕಳು ಹಳ್ಳಿಯಿಂದ ದೆಹಲಿವರೆಗೆ ಹೆಸರು ಮಾಡುವಂತೆ ಆಗಬೇಕು. ಶಾಲೆಯು ಸುಸಜ್ಜಿತವಾಗಿ ಕೂಡಿದ್ದು ವಿದ್ಯಾಭ್ಯಾಸಕ್ಕೆ ಉತ್ತಮ ವಾತಾವರಣ ವಾಗಿದೆ. ಈ ಭಾಗದ ಜನರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.ಇದೇ ಸಂದರ್ಭದಲ್ಲಿ ತಾಲೂಕು ಜೆಡಿಎಸ್ ಅಧ್ಯಕ್ಷ ಆರ್. ಮುನೇಗೌಡ, ಪ್ರಧಾನ ಕಾರ್ಯದರ್ಶಿ ಜಿ.ಎ.ರವೀಂದ್ರ, ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷ ಮುನಿರಾಜು, ಧರ್ಮಪುರ ನಾರಾಯಣಸ್ವಾಮಿ, ಶಾಲೆಯ ಆಡಳಿತ ಮಂಡಳಿ, ಮುಖಂಡರು, ಇದ್ದರು.

Be the first to comment

Leave a Reply

Your email address will not be published.


*