ಜನಪ್ರತಿನಿಧಿಗಳೇ ಮುದ್ದಾಪೂರು ಟು ನಾಗರಬೆಂಚಿ ರಸ್ತೆಯ ದುರಾವಸ್ತೆ ಒಂದೊಮ್ಮೆ ನೋಡಿ

ವರದಿ ಗ್ಯಾನಪ್ಪ ದೊಡ್ಡಮನಿ ಮಸ್ಕಿ

ಜಿಲ್ಲಾ ಸುದ್ದಿಗಳು 

ಮಸ್ಕಿ

ತಾಲೂಕಿನ ಮುದ್ದಾಪೂರು ಟು ನಾಗರಬೆಂಚಿ ಮಾರ್ಗವಾಗಿ ತೆರಳುವ ಸುಮಾರು 12 ಕಿಲೋಮೀಟರ್ ರಸ್ತೆಯ ಪೈಕಿ ಮೂರ್ನಾಲ್ಕು ಕಿಲೋಮೀಟರ್ ಬೆಳೆದ ಜಂಗಲ್, ಅದನ್ನು ಕಟಾವು ಮಾಡಿಸುವ ಕಟಿಂಗ್ ಮಾಡಿಸದೆ ಬಿಲ್ ಎತ್ತುವಳಿಮಾಡುತ್ತಾ ರಸ್ತೆಯನ್ನು ಮುಳ್ಳು ಕಂಟಿಗಳಿಂದ ಆವೃತ್ತವಾಗಿರುವ ಗುಹೆಯಂತೆ ಮಾಡಿದ್ದಾರೆ.

CHETAN KENDULI

 

ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು,ಇದರ ದುರಸ್ತಿ ಮಾಡಿಸದೆ ಹೋದರೆ ನಮ್ಮ ಜೆ.ಡಿ.ಎಸ್ ಪಕ್ಷದಿಂದ ಉಗ್ರ ಹೋರಾಟ ಮಾಡಲಾಗುವದೆಂಬ ಎಚ್ಚರಿಕೆಯ ಸಂದೇಶವನ್ನು ಮಸ್ಕಿ ತಾಲೂಕಾ ಜೆ.ಡಿ.ಎಸ್ ಪಕ್ಷದ ಅಧ್ಯಕ್ಷ ಅಮರೇಶ ಹಂಚಿನಾಳ ರವಾನಿಸಿದ್ದಾರೆ.ಇದೇ ಮಾರ್ಗವಾಗಿ ಹಾಲಿ,ಮಾಜಿ ಶಾಸಕರು ಓಡಾಡುತ್ತಿದ್ದರೂ ಇದರಬಗ್ಗೆ ಗಮನಹರಿಸದಿರುವದು ವಿಪರ್ಯಾಸದ ಸಂಗತಿ.

ಈ ರೂಟಿಗೆ ಸರಿಯಾದ ಬಸ್ ಸಂಚಾರವಿಲ್ಲದೆ ದಿನ ನಿತ್ಯವೂ ಈ ಭಾಗದ ವಿದ್ಯಾರ್ಥಿಗಳು, ನಾಗರಿಕರು ಖಾಸಗಿ ವಾಹನಗಳ ಮೊರೆ ಹೋಗಬೇಕಾದ ಅನಿವಾರ್ಯತೆ ಬಂದಿದೆ.ರಸ್ತೆ ತಗ್ಗು ಗುಂಡಿಗಳಿಂದ ತುಂಬಿ ಪ್ರಯಾಣಿಕರಿಗೆ ತೀರಾ ತೊಂದರೆಯಾಗಿದ್ದರೂ ಅಧಿಕಾರಿಗಳು ಕಣ್ಣುಮುಚ್ಚಿ ಕುಳಿತಿರುವದು ಯಾಕೆ ಎಂಬ ಪ್ರಶ್ನೆ ನನ್ನದು ಎಂದು ಅಮರೇಶ ಹಂಚಿನಾಳ ಆಗ್ರಹಿಸಿದ್ದಾರೆ.ಈಗಲಾದರು ಎಚ್ಚೆತ್ತುಕೊಂಡು ಈ ಕೂಡಲೇ ಈ ರಸ್ತೆಯ ಜಾಲಿ ತೆರವುಗೊಳಿಸಿ ರಸ್ತೆ ನಿರ್ಮಾಣಮಾಡುವರೋ ಎಂದು ಕಾದು ನೋಡಬೇಕಿದೆ.

Be the first to comment

Leave a Reply

Your email address will not be published.


*