ತಂದೆ ತಾಯಿ ಸ್ಮರಣಾರ್ಥವಾಗಿ ರಂಜಾನ ಹಬ್ಬಕ್ಕೆ ಮಾಡುತ್ತಿದ್ದ ಸಹಾಯಹಸ್ಥವನ್ನು ಮುಂದುವರೆಸಿದ ಮನಿಯಾರ ಕುಟುಂಬ….!!! ಮನಿಯಾರ್ ಕುಟುಂಬಕ್ಕೆ ಕೈಜೋಡಿಸಿದ ಸಮಾಜ ಸೇವಕ ನ್ಯಾಯವಾದಿ ವಿಜಯಮಹಾಂತೇಶ ಸಾಲಿಮಠ

ವರದಿ: ಚೇತನ ಕೆಂದೂಳಿ, ಸುದ್ದಿ ಸಂಪಾದಕರು

ಜಿಲ್ಲಾ ಸುದ್ದಿಗಳು

CHETAN KENDULI

ಮುದ್ದೇಬಿಹಾಳ:

ಕೊರನಾ ಸಂದಿಗ್ಧ ಪರಿಸ್ಥಿತಿಯನ್ನು ಮದ್ಯಮ ವರ್ಗದ ಜನರು ಸಮರ್ಥನೆ ಮಾಡಿಕೊಂಡು ಜೀವನ ಸಾಗಿಸಬಹುದು ಆದರೆ ಕಡು ಬಡವರಿಗೆ ಕೊರೊನಾ ದುಸ್ಥಿತಿ ಹೇಳತೀರದಾಗಿದೆ. ಇಂತಹ ಸಂದರ್ಭದಲ್ಲಿ ರಂಜಾನ ಹಬ್ಬ ಆಗಮಿಸಿದ್ದು ಬಡವರಿಗೆ ಅಲ್ಪಸೇವೆ ಮಾಡುವುದೇ ದಾನಿಗಳಿಗೆ ಒಂದು ಸುವರ್ಣಾವಕಾಶವಾಗಿರುತ್ತದೆ ಎನ್ನುವುದು ಎಲ್ಲರೂ ಅರಿತುಕೊಂಡು ಕೈಲಾದಷ್ಟು ದಾನ ಮಾಡಬೇಕು ಎಂದು ಉದ್ಯಮಿ ಅಯ್ಯೂಬ ಮನಿಯಾರ ಹೇಳಿದರು.
ಪಟ್ಟಣದ ಹುಡ್ಕೊ ಕಾಲೋನಿಯ ತಮ್ಮ ನಿವಾಸದಲ್ಲಿ ಮನಿಯಾರ ಸಮಾಜ ಸೇವಾ ಟ್ರಸ್ಟ್ ವತಿಯಿಂದ ರಂಜಾನ ಹಬ್ಬದ ನಿಮಿತ್ಯ ೨೦೦ಕ್ಕೂ ಹೆಚ್ಚು ಬಡವರಿಗೆ ಆರ್ಥಿಕ ನೆರವು ನೀಡಿ ಮಾತನಾಡಿದ ಅವರು, ನಮ್ಮ ತಂದೆ ತಾಯಿ ಸ್ಮರಣಾರ್ಥವಾಗಿ ಕಳೆದ ಹಲವು ಷರ್ವಗಳಿಂದ ಬಡವರಿಗೆ ರಂಜಾನ ಹಬ್ಬದ ನಿಮಿತ್ಯ ಆಹಾರ ಕಿಟ್ ಹಾಗೂ ಸಿರೆ ದಾನ ಮಾಡುತ್ತಾ ಬರಲಾಗುತ್ತಿತ್ತು. ಸದ್ಯಕ್ಕೆ ಕೊರೊನಾ ದುಸ್ಥಿತಿಯಲ್ಲಿ ಸಮಗ್ರ ಆಹಾರ ಕಿಟ್ ಮತ್ತು ಬಟ್ಟೆ ವಿತರಣೆ ಮಾಡಲಾಗದ ಕಾರಣ ಬಡವರಿಗೆ ಆರ್ಥಿಕವಾಗಿ ನೆರವಾಗಿ ಹಬ್ಬ ಆಚರಣೆಯಲ್ಲಿ ತೊಡಗುವಂತೆ ಮಾಡಿದ್ದೇನೆ. ಈ ವರ್ಷ ನನ್ನ ಜೊತೆಗೆ ವಿಜಯಮಹಾಂತೇಶ ಸಾಲಿಮಠ ವಕೀಲರೂ ಕೈಜೋಡಿಸಿದ್ದು ಹೆಚ್ಚಿನ ಸಂತಸವಾಗಿದೆ ಎಂದು ಅವರು ಹೇಳಿದರು.


 


ವಿಜಯಮಹಾಂತೇಶ ಸಾಲಿಮಠ ವಕೀಲರು ಮಾತನಾಡಿ, ರಂಜಾನ ಹಬ್ಬವು ಸಂದಿಗ್ಧ ಪರಿಸ್ಥಿತಿಯಲ್ಲಿ ಬಂದಿದ್ದು ಎಲ್ಲರೂ ಸಾಮಾಜಿಕ ಅಂತರದಿಂದ ಕಡ್ಡಾಯವಾಗಿ ಮಾಸ್ಕ ಧರಿಸಿಯೇ ಆಚರಣೆಯಲ್ಲಿ ತೊಡಗಬೇಕು. ಇನ್ನೂ ದಾನದಲ್ಲಿ ಬೇಧಭಾವ ಮಾಡುವುದೇ ಅಧರ್ಮವಾಗುತ್ತದೆ. ಸದ್ಯದ ಪರಿಸ್ಥಿತಿಯಲ್ಲಿ ಯಾವುದೇ ಹಬ್ಬವನ್ನೂ ಮಾಡಲು ಸಾದ್ಯವಿಲ್ಲ ಇದಕ್ಕಾಗಿ ಅಯ್ಯೂಬ ಮನಿಯಾರ ಅವರೊಂದಿಗೆ ಕೈಜೋಡಿಸಿದ್ದು ನನ್ನ ಅಳಿಲು ಸೇವೆಯನ್ನು ಮಾಡಿದ್ದೇನೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಅಯ್ಯೂಬ ಮನಿಯಾರ ಅವರು ೫೦೦ ರೂಪಾಯಿ ಹಾಗೂ ಸಾಲಿಮಠ ವಕೀಲರು ೩೦೦ ರೂಪಾಯಿ ಹಣವನ್ನು ಬಡವರಿಗೆ ನೀಡಿ ೨೦೦ಕ್ಕೂ ಹೆಚ್ಚು ಕುಟುಂಬಗಳಿಗೆ ಆರ್ಥಿಕವಾಗಿ ಸಹಾಯ ಮಾಡಿದರು. ಮೌಲಾನಾ ಅಲ್ಲಾಭಕ್ಷ ಖಾಜಿ, ಪರವೀನ್ ಮನಿಯಾರ, ಅಫ್ತಾಬ ಮನಿಯಾರ, ಬಾಬು ಬಿಜಾಪೂರ, ಜಯಾ ಸಾಲಿಮಠ, ಎಸ್.ಸಿ.ಹಿರೇಮಠ ಇದ್ದರು.

 

Be the first to comment

Leave a Reply

Your email address will not be published.


*