ಜಿಲ್ಲಾ ಸುದ್ದಿಗಳು
ವಿಜಯಪುರ:
2016ರಲ್ಲಿ ಸಾರವಾಡ ಜಿಲ್ಲಾ ಪಂಚಾಯತ ಕ್ಷೇತ್ರದಲ್ಲಿ ಸದಸ್ಯರಾಗಿ ಆಯ್ಕೆಯಾದ ಸುಜಾತಾ ಸೋಮನಾಥ ಕಳ್ಳಿಮನಿಯವರು ಕಳೆದ 10 ತಿಂಗಳಿಂದ ವಿಜಯಪುರ ಜಿಲ್ಲಾ ಪಂಚಾಯತ ಅಧ್ಯಕ್ಷರಾಗಿ ಆಯ್ಕೆಗೊಂಡು ಕಡಿಮೆ ಸಮಯದಲ್ಲಿಯೇ ಅತೀ ಹೆಚ್ಚ ಜನಪರ ಕೆಲಸಗಳನ್ನು ಮಾಡಿ ಮಾದರಿ ಅಧ್ಯಕ್ಷರಾಗಿದ್ದಾರೆ. ಇದರಿಂದ ತೃಪ್ತಿಪಡೆದಿರುವ ಅವರು ವಿಜಯಪುರ ಜಿಲ್ಲೆಯ ಪ್ರತಿಯೊಬ್ಬರಿಗೂ ಧ್ನಯವಾದಗಳನ್ನು ತಿಳಿಸಿದ್ದಾರೆ.
ಹೌದು, 2016ರಲ್ಲಿಯೇ ಸದಸ್ಯೆಯಾಗಿ ಆಯ್ಕೆಯಾದ ಸುಜಾತಾ ಕಳ್ಳಿಮನಿಯವರು ಕಳೆದ 10 ತಿಂಗಳ ಹಿಂದೆ ನಡೆದ ಜಿಪಂ ಅಧ್ಯಕ್ಷರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಬಹುಸಂಖ್ಯಾ ಬಲ ಇಲ್ಲದಿದ್ದರೂ ಹಾಗೂ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರವಿಲ್ಲದಿದ್ದರೂ ಚುನಾವಣೆಗೆ ಸ್ಪರ್ಧಿಸಿ ನೂತನ ಅಧ್ಯಕ್ಷರಾಗಿ ಆಯ್ಕೆಗೊಂಡು ಅಚ್ಚರಿಯ ಆಡಳಿತವನ್ನು ಮಾಡಿದ್ದಾರೆ. ಚುನಾವಣೆಯ ಸಂದರ್ಭದಲ್ಲಿ ಸಾಕಷ್ಟು ಅಡಚರಣೆಗಳು ಎದುರಾಗಿದ್ದರೂ ಎಲ್ಲ ಪಕ್ಷದ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು.
ಅಂದುಕೊಂಡಂತೆ ಜನಪರ ಕಾರ್ಯಗಳನ್ನು ಮಾಡಿದ ಕಳ್ಳಿಮನಿ:
ಸುಜಾತಾ ಸೋಮನಾಥ ಕಳ್ಳಿಮನಿ ಅವರು ವಿಜಯಪುರ ಜಿಲ್ಲಾ ಪಂಚಾಯತ ಅಧ್ಯಕ್ಷರಾಗಿ ಜಿಲ್ಲೆಯ ಪ್ರತಿಯೊಬ್ಬರ ಸಮಸ್ಯೆಯನ್ನು ಬಗೆಹರಿಸುವ ಸಂಕಲ್ಪ ಮಾಡಿಕೊಂಡಿದ್ದರು. ಅದರಂತೆ ಜಿಲ್ಲಾದ್ಯಂತ ಜನರ ಉತ್ತಮ ಆರೋಗ್ಯಕ್ಕಾಗಿ ಜಿಲ್ಲೆಯ 25ಕ್ಕೂ ಹೆಚ್ಚು ಆರೋಗ್ಯ ಕೇಂದ್ರಗಳಿಗೆ ಬೇಟಿ ನೀಡಿ ಅವಶ್ಯಕ ಕಾಯಕಲ್ಪ ಮಾಡಿ ಕಾರ್ಯಕ್ಷಮತೆ ಹೆಚ್ಚಿಕೆ ಮಾಡಿದ್ದಾರೆ. ಕೇವಲ 8 ತಿಂಗಳಲ್ಲಿ 7 ಗ್ರಾಮ ವಾಸ್ತವ್ಯವನ್ನು ಮಾಡಿ ಸ್ಥಳೀಯ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ಒದಗಿಸಿದ್ದಾರೆ. ಜಿಲ್ಲಾದ್ಯಂತ ರೈತರಿಗೆ ರಸಗೊಬ್ಬರದಲ್ಲಿ ಅನ್ಯಾಯ ಮಾಡುತ್ತಿರುವ ದೂರುಗಳು ಬಂದ ಹಿನ್ನೆಲೆಯಲ್ಲಿ ಜಿಲ್ಲಾದ್ಯಂತ ವ್ಯಾಪಕ ದಾಳಿ ನಡೆಸಿ 19 ಕಿಟನಾಶಕ ಹಾಗೂ 17 ರಸಗೊಬ್ಬರ ಮಾರಾಟದ ಪರವಾಣಿಗೆಯನ್ನು ರದ್ದುಪಡಿಸಿ ರೈತ ಪರ ಆಡಳಿತ ನಡೆಸಿದ್ದಾರೆ. ಅಲ್ಲದೇ ಜಿಲ್ಲೆಯಲ್ಲಿ ಹೆಣ್ಣು ಬ್ರೋಣ ಲಿಂಗ ಪತ್ತೆಯ ಜಾಲವನ್ನು ಸಂಪೂರ್ಣವಾಗಿ ಬಂದ್ ಮಾಡಿ ಮಹಿಳೆಯರಿಗೆ ವಿಶೇಷ ಸ್ಥಾಣಮಾನಕ್ಕೆ ಶ್ರಮಿಸಿ ಹೆಣ್ಣಿಗಾಗುತ್ತಿದ್ದ ತಾರತಮ್ಯವನ್ನು ತಡೆಗಟ್ಟಿದ್ದಾರೆ. ಕೊರೊನಾ ದುಸ್ಥಿತಿಯ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಅನುದಾನದ ಕಡಿತಗೊಳ್ಳಿಸಿದ್ದರೂ ಬಂದಂತಹ ಅನುದಾನದಲ್ಲಿಯೇ ಶಾಲಾ, ಗ್ರಾಮಗಳ ಮೂಲಭೂತ ಸೌಕರ್ಯಗಳು, ರಸ್ತೆ ಕಾಮಗಾರಿಗಳು ಸೇರಿದಂತೆ ವಿವಿಧ ಕಾಮಗಾರಿಗಳನ್ನು ಮಾಡಿದ ಹಿರಿಮೆ ಸುಜಾತಾ ಕಳ್ಳಿಮನಿಯವರಿಗೆ ಸಲ್ಲುತ್ತದೆ.
ಜಿಲ್ಲೆ ಕಂಡ ಗಣ್ಯ ರಾಜಕಾರಣಿ ಸುಜಾತಾ ಕಳ್ಳಿಮನಿ:
ಜಿಲ್ಲಾ ಪಂಚಾಯತ ಆಡಳಿತ ಎಂದರೇ ಒಬ್ಬ ವಿಧಾನ ಸಭಾ ಸದಸ್ಯರಿಗಿಂತಲೂ ಹೆಚ್ಚಿನ ಜವಾಬ್ದಾರಿತ ಆಡಳಿತವಾಗಿರುತ್ತದೆ. ವಿಜಯಪುರ ಜಿಲ್ಲೆಯಲ್ಲಿ ಪ್ರಪ್ರಥಮ ಬಾರಿಗೆ ಜಿಲ್ಲಾ ಪಂಚಾಯತಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದ ಶಂಕ್ರುಬಾಯಿ ಬಸವರಾಜ ಚಲವಾದಿ, ನಂತರ ಮಹಿಳಾ ಅಧ್ಯಕ್ಷರಾಗಿ ಆಯ್ಕೆಯಾದ ನೀಲಮ್ಮ ಸಿದ್ದಣ್ಣ ಮೇಟಿ ಬಿಟ್ಟರೆ ಸುಜಾತಾ ಸೋಮನಾಥ ಕಳ್ಳಿಮನಿ ಅವರು ಜಿಲ್ಲೆ ಕಂಡ ಮಾದರಿ ರಾಜಕಾರಣಿಯಾಗಿದ್ದಾರೆ. ಜಿಲ್ಲಾ ಪಂಚಾಯತಿಯಲ್ಲಿ ಕೇವಲ 10 ತಿಂಗಳು ಆಡಳಿತ ಸಿಕ್ಕರೂ ಜಿಲ್ಲಾ ಜನರಿಗಾಗಿ ಶ್ರಮಿಸಿದ ಸುಜಾತಾ ಕಳ್ಳಿಮನಿಯವರು ಜಿಲ್ಲೆಯ ರೇಖಾಗಡಿಯಲ್ಲಿನ ಗ್ರಾಮಗಳಿಗೂ ಬೇಟಿ ನೀಡಿ ಸಾರ್ವಜನಿಕರ ಸಮಸ್ಯೆಗಳನ್ನು ಆಳಿಸಿ ಬಗೆಹರಿಸಿದ್ದಾರೆ. ಇಂತರಹ ರಾಜಕಾರಣಿಗಳು ಮುಂದಿನಗಳಲ್ಲಿಯೂ ಅಧ್ಯಕ್ಷರಾಗಿ ಆಯ್ಕೆಯಾಗಲಿ ಎನ್ನುವುದು ಜಿಲ್ಲೆಯ ಜನರ ಬೇಡಿಕೆಯಾಗಿದೆ.
Be the first to comment